ತಪ್ಪದ ಬೀದಿ ಬದಿ ವ್ಯಾಪಾರಿಗಳ ಅಳಲು..ಸಂಕಷ್ಟಕ್ಕೆ ಮಿಡಿಯುವರಾ ಅಧಿಕಾರಿಗಳು

ತಪ್ಪದ ಬೀದಿ ಬದಿ ವ್ಯಾಪಾರಿಗಳ ಅಳಲು..ಸಂಕಷ್ಟಕ್ಕೆ ಮಿಡಿಯುವರಾ ಅಧಿಕಾರಿಗಳು

ಅಥಣಿ: ಪಟ್ಟಣದ ಬೀದಿ ಬದಿಯ ವ್ಯಾಪಾರಸ್ಥರು ಕೊರೊನಾ ಲಾಕಡೌನ್ ನಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಸದ್ಯ ರಾಜ್ಯ ಸರ್ಕಾರ ಕೆಲವಷ್ಟು ಸಡಿಲಿಕೆಗಳನ್ನು ಕೊಟ್ಟರೂ ಕೂಡ ಸಣ್ಣ‌ಪುಟ್ಟ ವ್ಯಾಪಾರಸ್ಥರು ಪುರಸಭೆ ಮತ್ತು ಪೋಲಿಸ್ ಸಿಬ್ಬಂದಿಯಿಂದ ಕಿರುಕುಳ ಅನುಭವಿಸುತ್ತಿದ್ದಾರೆ ಅಷ್ಟೇ ಅಲ್ಲದೆ ಮುಸ್ಲಿಂ ಸಮಾಜದ ಪವಿತ್ರ ಹಬ್ಬ ರಮಜಾನ್ ಸಮಯದಲ್ಲಿ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಕಿರುಕುಳ ಉಂಟಾಗಬಾರದು ಎಂದು ಅಥಣಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಅಧಿಕಾರಿಗಳಿಗೆ ಮನವಿ ಮಾಡಿದರು.
ಈ ವೇಳೆ ಉಪಸ್ಥಿತರಿದ್ದ  ಮುಸ್ಲಿಂ ಸಮಾಜದ ಮುಖಂಡ ಅಸ್ಲಮ್  ನಾಲಬಂದ ಮಾತನಾಡಿ.   ರಮಜಾನ್ ಹಬ್ಬವನ್ನು ಸರಳವಾಗಿ ಆಚರಿಸುವಂತೆ ಧರ್ಮಗುರುಗಳು ಕರೆನೀಡಿದ್ದು ದೇಶದ ಜನರು ಸಂಕಷ್ಟದಲ್ಲಿ ಇರುವದರಿಂದ ಈ ಬಾರಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸದಂತೆ ಧರ್ಮಗುರುಗಳು ಹೇಳಿರುವದರಿಂದ ಅವರ ಮಾತು ಪಾಲಿಸಲು ಅಥಣಿ ಸಮಾಜ ಬಾಂಧವರೆಲ್ಲರೂ  ಒಪ್ಪಿಗೆ ಸೂಚಿಸಿದ್ದೇವೆ     ಆದರೆ ಸಣ್ಣಪುಟ್ಟ ಮಸಾಲೆ ವ್ಯಾಪಾರಿಗಳು ಮತ್ತು ಬೀದಿ ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸುವ ಅಗತ್ಯ ಇದೆ. ಎಂದರು. 
ಕೊವಿಡ್ ೧೯ ಇಂದಾಗಿ ಕಳೆದ ಐವತ್ತೈದು ದಿನಗಳಲ್ಲಿ ಕೂಲಿಕಾರ್ಮಿಕರು, ಬಡವರು ಮತ್ತು ಬೀದಿ ಬದಿಯ ವ್ಯಾಪಾರಸ್ಥರು ತೀವ್ರ ನಷ್ಟ ಅನುಭವಿಸಿದ್ದು ಜೀವನೋಪಾಯಕ್ಕಾಗಿ ಬೀದಿ ಬದಿಯ ವ್ಯಾಪಾರವನ್ನೆ ಅವಲಂಬಿಸಿರುವ ಬಡ ಕುಟುಂಬಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು,ಸರ್ಕಾರದ ನಿಯಮಾವಳಿ ಪಾಲಿಸುವದರ ಜೊತೆಗೆ ವ್ಯಾಪಾರ ವಹಿವಾಟು ನಡೆಸಲು ಅನುಕೂಲ ಮಾಡಿಕೊಡಬೇಕು ಎಂದು ಸಿಐಟಿಯು ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ದೀಪಕ ಶಿಂಧೇ ಅಥಣಿ ಪುರಸಭೆ ಮುಖ್ಯಾಧಿಕಾರಿ ಮಹಂತೇಶ್ ಕೌಲಾಪೂರ ಮತ್ತು ಅಥಣಿ ಸಿಪಿಐ ಶಂಕರಗೌಡ ಬಸನಗೌಡರ ಅವರಿಗೆ ಮನವಿ ಮಾಡಿದರು.
ಇನ್ನೂ ಇದೇ ವೇಳೆ ಪಟ್ಟಣದ ಶಂಕರ ನಗರದಲ್ಲಿ ಅವಕಾಶ ನೀಡಲಾದ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರಿಗಳಿಗೆ ಮಳೆ,ಗಾಳಿ,ಮತ್ತು ಬಿಸಿಲಿನಿಂದ ಯಾವುದೇ ರಕ್ಷಣೆ ಇಲ್ಲದೆ ಪರದಾಡುವಂತಾಗಿದ್ದು ಸ್ಥಳಕ್ಕೆ ಅಥಣಿ ಸಿಪಿಐ ಶಂಕರಗೌಡ ಬಸನಗೌಡರ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ ಎರಡು ದಿನಗಳಲ್ಲಿ ವ್ಯಾಪಾರಸ್ಥರ ಸಭೆ ಕರೆದು ಸ್ಥಳ ನಿಗದಿ ಪಡಿಸಲಾಗುವದು ಎಂದು ತಿಳಿಸಿದರು.
ಬಾಕ್ಸ್: ಅಬ್ದುಲ್ ಜಬ್ಬಾರ್ ಚಿಂಚಳಿ. ಮಾನವ ಹಕ್ಕು ಸಂಘಟನೆ ಅದ್ಯಕ್ಷ.
ಹಲವಾರು ವರ್ಷದಿಂದ ಬೀದಿ ಬದಿ ವ್ಯಾಪಾರ ನಡೆಸುತ್ತಿದ್ದಾರೆ ಕೊರೋನಾ ಲಾಕ್ ಡೌನ್ ನಿಂದು ಬಂದ್ ಮಾಡಲಾಗಿತ್ತು ಬೀದಿ ಬದಿಯ ಸಣ್ಣಪುಟ್ಟ ವ್ಯಾಪಾರವನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ ಇದೆ ವ್ಯಾಪಾರವನ್ನೇ ನಂಬಿಕೊಂಡು ಮಹಿಳಾ ಸ್ವಸಹಾಯ ಸಂಘಗಳಲ್ಲಿ ಬ್ಯಾಂಕುಗಳಲ್ಲಿ ಮತ್ತು ಖಾಸಗಿ ವ್ಯಕ್ತಿಯಿಂದ ಪಡೆದುಕೊಂಡ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಲಾಗದೆ ದಿಕ್ಕು ತೋಚದೇ ಕಂಗಾಲಾಗಿದ್ದಾರೆ ಲಾಕ್ ಡೌನ್ ಸರ್ಕಾರ ಸಡಿಲಗೊಳಿಸಿ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅನುಮತಿ ಕೊಟ್ಟ ಹಿನ್ನೆಲೆಯಲ್ಲಿ ಬೀದಿ ಬದಿ ವ್ಯಾಪಾರ ಪ್ರಾರಂಭ ಮಾಡಿದರೆ ಆದರೆ ಪುರಸಭೆಯ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಬೀದಿ ಬದಿ ವ್ಯಾಪಾರಿಗಳಿಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ.
ಈ ವೇಳೆ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ, ಮುಸ್ಲಿಂ ಸಮಾಜ ಮುಖಂಡರಾದ ಅಸ್ಲಮ್ ನಾಲಬಂದ್, ಇಮ್ತಿಯಾಜ್ ಹಿಪ್ಪರಗಿ, ಹಾರೂನ್ ಮೋಮಿನ್, ಬಾಬು ಖೆಮಲಾಪೂರ, ಇರ್ಫಾನ್ ದ್ರಾಕ್ಷಿ, ಮಹ್ಮದ್ ಭಾಗವಾನ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Share
WhatsApp
Follow by Email