ಪ್ರವಾಹ ದುರಂತ ಮಾಸುವ ಮುನ್ನ ಮತ್ತೊಂದು ದುರಂತ|ಕ್ಷಣ ಕ್ಷಣಕ್ಕೂ ಹೆಚ್ಚುತ್ತಿರುವ ಕೊರೋನಾ ಆರ್ಭಟಕೆ ತತ್ತರಿಸಿದ ಜನ….!

ಪ್ರವಾಹ ದುರಂತ ಮಾಸುವ ಮುನ್ನ ಮತ್ತೊಂದು ದುರಂತ|ಕ್ಷಣ ಕ್ಷಣಕ್ಕೂ ಹೆಚ್ಚುತ್ತಿರುವ ಕೊರೋನಾ ಆರ್ಭಟಕೆ ತತ್ತರಿಸಿದ ಜನ….!

ಕನ್ನಡ ಟುಡೆ ವಿಷೇಶ
ವರದಿ: ಮಲ್ಲು ಬೋಳನವರ
ಮೂಡಲಗಿ

ಜಾಗತಿಕ ಪಿಡಿಗಾಗಿ ಪರಿಪರಿಯಾಗಿ ಕಾಡುತ್ತಿರುವ ಈ ಕೊರೋನಾ ವೈರಸ್ ಕೊನೊಗಾಣಿಸಲು ಭಾರತ ಹಲವಾರು ರೀತಿಯ ಕಸರತ್ತು ನಡೆಸುತ್ತಿದೆ. ಪೀಡಿತರ ಸಂಖ್ಯೆ ಲಕ್ಷವನ್ನೂ ದಾಟಿದೆ. ಅಷ್ಟೇಯಲ್ಲದೆ ನಿನ್ನೆ ದಾಖಲೆಯ ಪ್ರಮಾಣದಲ್ಲಿ ಸೋಂಕು ಹರಡುವಿಕೆ ಹೆಚ್ಚಾಗಿದೆ.
ಹೌದು ಇದರಿಂದ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿರುವ ಕೊರೋನಾ ಆರ್ಭಟಕೆ ತತ್ತರಿಸುತ್ತಿದಾರೆ ಜನರು, ಈ ಮರಣ ಮೃದಂಗ ಭಾರಿಸುತ್ತಿರುವ ಈ ಮಹಾಮಾರಿ ಕೊರೋನಾ ವೈರಸ್ ಹಿನ್ನಲೆ ಕೆಲವು ದಿನಗಳಿಂದ ಇಡೀ ನಮ್ಮ ಭಾರತ ದೇಶವೇ ಲಾಕ್ ಡೌನ್ ಮಾಡಿದ ಪರಿಣಾಮ ಜನರು ಕೆಲಸ ಕಾರ್ಯಗಳನ್ನು ಬೀಟ್ಟು ಮನೆಗಳಿಗೆ ಸೇರುವ ಪರಸ್ಥಿತಿ ನಿರ್ಮಾಣವಾಯಿತ್ತು. ಆದರೆ ಬಡ ಜನರ ಪರಸ್ಥಿತಿ ಮಾತ್ರ ಹೇಳತೀರದು ಅಷ್ಟು ಕಠೋರವಾಗಿ ಬಡ ಜನರ ಜೀವ,
ಕೆಲಸಕ್ಕೆ ಬೇರೆ ಊರುಗಳಿಗೆ ಹೋಗಿರುವ ಜನರ ಪರಸ್ಥಿತಿ ಕೇಳಿದರೆ ಸಾಕು ಕಣ್ಣಲ್ಲಿ ನೀರು ತುಂಬಿ ಬರುವಷ್ಟು ನೋವಿನ ಕಥೆಯಾಗಿದೆ ಅವರ ಜೀವನ, ಸ್ವಗ್ರಾಮಕ್ಕೆ ಯಾವಗಾ ಬಂದು ಸೇರುತ್ತೇವೆ ಅನ್ನು ತವಕ ಆತುರ ಅವರದ್ದು, ಸ್ವಾಗ್ರಾಮಕ್ಕೆ ಬರೋದಕ್ಕೆ ವಾಹನ ವ್ಯೆವಸ್ಥೆ ಬೇಕಲ್ಲವೇ ? ಅದು ಕೂಡಾ ಹಸಿದಾಗ ಸಿಗದೇ ಇರೋ ಊಟದಂತೆ ಅವರ ಗೋಳು, ತುತ್ತು ಅನ್ನಕ್ಕಾಗಿ ಪರದಾಟುವ ಪರಸ್ಥಿತಿ ನಿರ್ಮಾಣವಾಗಿದೆ, ಇನ್ನೂ ಉದ್ಯೋಗದ ಮೇಲೆ ಅವಲಂಬಿತರಾಗಿರುವ ಕುಟುಂಬಗಳು ಕೆಲಸ ಮಾಡದೇ ಮನೆಯಲ್ಲಿ ಕುಂತುಗೊಳ್ಳಬೇಕಾಯಿತ್ತು, ಆ ಕುಟುಂಬಗಳ ನೋವಿ ಗೋಳು ಯಾರಿಗೆ ಹೇಳಬೇಕು, ಹೊರಗಡೆ ಹೋದರೆ ಕೊರೋನಾ ಅಟ್ಟಹಾಸ, ಮನೆಯಲ್ಲೇ ಇದ್ದರೇ ಜೀವನ ಉಪವಾಸ ! ಹೀಗಿರುವಾಗ ಬಡ ಜನರಿಗೆ ದಿನಸಿ ವಸ್ತುಗಳನ್ನು ಕೆಲವು ಸಂಸ್ಥೆಗಳು, ಗಣ್ಯರು, ಸಮಾಜ ಸೇವಕರು ಮಾಡಿರುವಂತ ಕಾರ್ಯಕ್ಕೆ ನಾವು ತೆಲೆ ಬಾಗಲೇ ಬೇಕು, ಕುಟುಂಬಗಳಿಗೆ ದಿನಸಿ ವಸ್ತುಗಳನ್ನು ಉಚಿತವಾಗಿ ಮನೆ ಮನೆಗಳಿಗೆ ನೀಡಿ ಕೊಡುಗೈ ದಾನಿಗಳಾಗಿ ಮಾನವೀಯತೆಯನ್ನು ಮೆರೆದಿದ್ದಾರೆ.
ಮೇ 10ರಂದು 4,213 ಪ್ರಕರಣಗಳು ಕಂಡುಬ0ದಿದ್ದವು, ಅದೇ ದೊಡ್ಡದು ಎಂದುಕೊಳ್ಳುವಷ್ಟರಲ್ಲಿ ಮೇ 17ರಂದು ದಿನ 5,242 ಹೊಸ ಪ್ರಕರಣಗಳು ಪತ್ತೆಯಾಗಿದ್ದವು, ಇದಾದ ಬಳಿಕ ಮೇ 18ರಂದು ತುಸು ಕಡಿಮೆ ಆಗಿ 4,159 ಹೊಸ ಪ್ರಕರಣಗಳು ಪತ್ತೆಯಾಗಿದ್ದವು, ಆದರೇ ಇವೆಲ್ಲಾ ಮೀರಿಸುವಂತ ದಾಖಲೆಗಳನ್ನು ಮುರಿದು ನಿನ್ನೆ ಒಂದೇ ದಿನ 5,611 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದ ಕೊರೋನಾ ಸೋಂಕು ಪೀಡಿತೆ ಸಂಖ್ಯೆ 1,06,750ಕ್ಕೆ ಏರಿಕೆಯಾಗಿದೆ.
ಹೀಗಿರುವಾಗ ನಮ್ಮ ಭಾರತ ದಿನೇದಿನೆ ಕೊರೋನಾ ವೈರಸ್ ಹರಡುವಿಕೆ ವಿಷಯದಲ್ಲಿ ಇಂತ ಕಹಿ ಸುದ್ದಿಗಳನ್ನೇ ಉಣಬಡಿಸುತ್ತಿದೆ, ಈಗಾಗಲೇ ಕೊರೋನಾ ಹರಡುವಿಕೆ ವಿಷಯದಲ್ಲಿ ಚೀನಾವನ್ನು ಮೀರಿಸಿದೆ. ಈಗ ದೇಶ್ ಕೊರೋನಾ ವೈರಸ್ ಪೀಡಡಿತರ ಸಂಖ್ಯೆ ಲಕ್ಷ ದಾಟಿದೆ. ಸೋಂಕು ಪೀಡಿತರ ಸಂಖ್ಯೆಯು ದಾಖಲೆಯ ಪ್ರಮಾಣ ಹೆಚ್ಚಾಗುತ್ತಿದೆ.
ಕಣ್ಣೀರಲ್ಲಿ ಬೆಳೆಗಾರರು : ಈ ಹಿಂದೆ ಪ್ರವಾಹದಿಂದ ನೀರು ರೈತರ ಗದ್ದೆಗಳಿಗೆ ನುಗ್ಗಿದ ಕಾರಣದಿಂದ ಬೆಳೆಗಳು ನಾಶವಾಗುತ್ತಿರುವುದನ್ನು ನೋಡಿ ರೈತರು ಕಣ್ಣೀರು ಹಾಕಿದ್ದರು. ಇವಾಗ ಈ ಮಹಾಮಾರಿ ಕೊರೋನಾದಿಂದ ಎಲ್ಲರೂ ಮನೆಯಲೇ ಇರುವರಿಂದ ಮಾರುಕಟ್ಟೆಗಳು ಬಂದ್ ಆದಕಾರಣ ಬೆಳೆದಂತ ಬೆಳೆಗಳನ್ನು ಮಾರಾಟ ಮಾಡದೇ ಕಣ್ನ ಮುಂದೆ ನಾಶವಾಗಿ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ ರೈತರ ಜೀವನ.
ಭಾರತಕ್ಕೆ ಬಂದು ಒಕ್ಕಸಿದ ಮಹಾಮಾರಿ ಕೊರೋನಾ ಇಡೀ ಜನರ ಜೀವನ ಜೊತೆ ಚೆಲ್ಲಾಟವಾಡುತ್ತಿದೆ, ಇದರಿಂದ ಹಳ್ಳಿಗಳನ್ನೇ ನೋಡದ ನಗರದ ಜನತೆಗೆ ಹಳ್ಳಿಗಳ ನೆನಪು, ನಗರಕಿಂತ ಹಳ್ಳಿಗಳೇ ಲೇಸು ಎಂಬ ಹಳ್ಳಿ ಜನರ ಮಾತು ನೀಜ, ಸಮಾರಂಭಗಳಿಗಷ್ಟೇ ಸೇರುವ ಕುಟುಂಬದ ಸದಸ್ಯರು ಕೊರೋನಾ ಜಾತ್ರಗೆ ತಮ್ಮ ತಮ್ಮ ಕೆಲಸಗಳನ್ನು ಬಿಟ್ಟು ಮನೆಗಳಿಗೆ ಆಗಮನ. ಜೀವನ ಪರಿಯಂತ ನೆನಪಿಡುವ ಕೊರೋನಾ ನರ್ತನ.
Share
WhatsApp
Follow by Email