
ರಬಕವಿ-ಬನಹಟ್ಟಿ ತಾಲೂಕು ಕೇಂದ್ರದಲ್ಲಿ ಸಿಇಟಿ ಪರೀಕ್ಷಾ ಕೇಂದ್ರ ಸ್ಥಾಪಿಸಬೇಕು ಎಂದು ಆಗ್ರಹಿಸಿ ಉಪತಹಶೀಲ್ದಾರ್ ಎಸ್.ಎಲ್. ಕಾಗಿಯಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಇನ್ನು ಪರೀಕ್ಷೆ ನಡೆಯಲು ಎರಡು ತಿಂಗಳಿಗಿAತ ಹೆಚ್ಚು ಸಮಯವಾಕಾಶ ಇರುವುದರಿಂದ ಇಲಾಖೆಯವರು ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲಿ ಪರೀಕ್ಷಾ ಕೇಂದ್ರ ಸ್ಥಾಪನೆಯಾದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯ ಎಂದರು.
ಮತ್ತೊರ್ವ ಮುಖಂಡ ಶಿವಾನಂದ ಗಾಯಕವಾಡ ಮಾತನಾಡಿ, ತಾಲೂಕಿನ ವಿದ್ಯಾರ್ಥಿಗಳು ಜಮಖಂಡಿಗೆ ಹೋಗಿ ಪರೀಕ್ಷೆ ಬರೆಯುವುದು ತೊಂದರೆಯಾಗುತ್ತಿದೆ. ಅದರಲ್ಲೂ ಕೋವಿಡ್-19 ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹೆದರಿಕೆಯೂ ಆಗುತ್ತದೆ.
ಜಮಖಂಡಿಯಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಬಹಳಷ್ಟು ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ರಬಕವಿ-ಬನಹಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಶಿಕ್ಷಣ ಸಂಸ್ಥೆಗಳ ಜತೆ ಪರೀಕ್ಷೆ ನಡೆಸಲು ಬೇಕಾಗುವ ದಕ್ಷ ಸಿಬ್ಬಂದಿ
ವರ್ಗವೂ ಕೂಡಾ ಇಲ್ಲಿ ಲಭ್ಯವಿದೆ. ಆದ್ದರಿಂದ ಇಲಾಖೆ ಅವಳಿ ನಗರದಲ್ಲಿ ಪರೀಕ್ಷಾ ಕೇಂದ್ರ ಸ್ಥಾಪಿಸಿದರೆ ಈ ಭಾಗದ ಅಂದಾಜು ಸಾವಿರಕಿಂತ ಹೆಚ್ವು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು. ಶಿವಕುಮಾರ ಗುಂಡಿ, ಶಂಭು ಉಕ್ಕಲಿ, ಶಂಕರ ಕೊಕಟನೂರ, ಮಹಾಂತೇಶ ಪದಮಗೊಂಡ, ಶಿವಕುಮಾರ ಷಣ್ಮುಖ ಇದ್ದರು.