ಬ್ರೇಕಿಂಗ್ ನ್ಯೂಸ್ ಆರೋಗ್ಯ ತಪ್ಪಾಸನೆ ಮಾಡಿಸಿ ಅವಶ್ಯವಿದರೆ ಹೋಂಕ್ವಾರಟೇನ್ ಮಾಡಬೇಕಾಗುತ್ತದೆ :ಪಿಡಿಒ ಎ. ಜಿ. ಎಡಕೆ 22/05/202022/05/20201 min read admin ಅರಟಾಳ ; ಬೇರೆ ರಾಜ್ಯಗಳಿಂದ ಬರುವವರ ಮೇಲೆ ನಿಗಾ ಇಡಬೇಕು. ಇಗಾಗಲ್ಲೇ ಮಹಾರಾಷ್ಟçಕ್ಕೆ ದುಡಿಯಲು ಹೋದ ಕಾರ್ಮಿಕರು ಮರಳಿ ಬರುತ್ತಿದ್ದಾರೆ. ಅವರನ್ನು ಆರೋಗ್ಯ ತಪ್ಪಾಸನೆ ಮಾಡಿಸಿ ಅವಶ್ಯವಿದರೆ ಹೋಂಕ್ವಾರಟೇನ್ ಮಾಡಬೇಕಾಗುತ್ತದೆ ಎಂದು ಗ್ರಾಪಂ ಪಿಡಿಒ ಎ. ಜಿ. ಎಡಕೆ ಹೇಳಿದರು.ಗ್ರಾಮದಲ್ಲಿ ಶುಕ್ರವಾರ ಗಾಮ ಪಂಚಾಯತ ಕಾರ್ಯಾಲಯದಲ್ಲಿ ನಡೆದ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಪಂ ಸದಸ್ಯರ ಸಭೆಯಲ್ಲಿ ಮಾತನಾಡಿ, ಕರೊನಾ ವೈರಸ್ ಹರಡದಂತೆ ಸರ್ಕಾರ ಮುಂಜಾಗ್ರತೆ ವಹಿಸಿದೆ. ಆದರೆ ಜನರು ಮಾತ್ರ ಸ್ಪಂದಿಸುತ್ತಿಲ್ಲ. ಬೇರೆಡೆಯಿಂದ ಬಂದವರನ್ನು ಶಾಲೆಯಲ್ಲಿ ಅವರನ್ನು ಹೊಂಕ್ವಾರAಟೇನ್ ಮಾಡಬೇಕಾಗುತ್ತದೆ. ಗ್ರಾಮ ಪಂಚಾಯತ ವ್ಯಾಪ್ತಯಲ್ಲಿ ಕೋವಿಡ್ 19 ಕರೊನಾ ವೈರಸ್ ಸೋಂಕು ಹರಡದಂತೆ ತಡೆಗಟ್ಟಲು ನಿರಂತರವಾಗಿ ಎಲ್ಲರು ಒಗ್ಗಟ್ಟಿನಿಂದ ಶ್ರಮಿಸಬೇಕಾಗಿದೆ. ಕೊರಾನ್ ವೈರಸ್ ಬಗ್ಗೆ ಯಾರಲು ಭಯಬೇಡಾ, ಎಲ್ಲರು ಎಚ್ಚರವಹಿಸಿದರೆ ಸಾಕು ಕರೋನಾ ವೈರಸ್ ತಗುಲುವುದಿಲ್ಲ. ಸರ್ಕಾರ ಆದೇಶದಂತೆ ಅಂತರ ಕಾಯ್ದುಕೊಳ್ಳುವುದು, ಮುಖ ಮಾಸ್ಕ್ ಅವಶ್ಯ ಎಂದರು.ಗ್ರಾಮ ಲೇಕ್ಕಾಧಿಕರಿ ಆರ್. ಖ. ಶೇಖ ಮಾತನಾಡಿ, ನಿಮ್ಮ ಕಣ್ಣು, ಮೂಗು ಮತ್ತು ಬಾಯಿಯನ್ನು ಪದೇ ಪದೇ ಮುಟ್ಟಿಕೊಳ್ಳಬಾರದು. ಕೆಮ್ಮುವಾಗ, ಸೀನುವಾಗ ಮಾಸ್ಕ್ ಧರಿಸಿ. ಎಲ್ಲರು ಅಂತರ ಕಾಯ್ದುಕೊಳ್ಳಿ. ಬೇರೆಡೆಯಿಂದ ಬಂದವರ ಮೇಲೆ ಎಲ್ಲರು ನಿಗಾ ಇಡಿ. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಸಾಕಷ್ಟ ಕರೊನಾ ವಿರುದ್ಧ ಕೆಲಸ ಮಾಡಿದ್ದಿರಿ ಎಂದರು.ಗ್ರಾಮ ಪಂಚಾಯತ ವತಿಯಿಂದ ಎಲ್ಲರಿಗೂ ಮಾಸ್ಕ್ ಹಾಗೂ ಸ್ಯಾನಿಟೈಜರ್ ವಿತರಿಸಿದರು. ಗ್ರಾಪಂ ಸದಸ್ಯ ಹಣಮಂತ ಪೂಜಾರಿ, ರಾಮಪ್ಪ ಭಂಡಾರಿ, ರಮೇಶ ಜಾಧವ, ಮಾಳಪ್ಪ ಕಾಂಬಳೆ, ಸುರೇಶ ನಾಯಿಕ, ಅಂಗನವಾಡಿ ಕಾರ್ಯಕರ್ತೆ ಸುನಿತಾ ಡಂಗಿ, ಭುವನೇಶ್ವರಿ ಮರಡಿ, ಶಾಂತಾ ಕಟ್ಟಿಮನಿ, ಮಾಲಾ ಕಾಂಬಳೆ, ಆಶಾ ಕಾರ್ಯಕರ್ತೆಯರಾದ ಅಮೃತಾ ಡಂಗಿ, ರೇಣುಕಾ ಇಲಗಾರ, ಎಮ್. ಪಿ. ಪಾಟೀಲ, ಇದ್ದರು. Share