ಬ್ರೇಕಿಂಗ್ ನ್ಯೂಸ್ ಆಸಕ್ತಿ ಮತ್ತು ಪರಿಶ್ರಮ ಸಾಧನೆಗೆ ದಾರಿ : ರಾಜು ಚಮಕೇರಿ 24/05/202024/05/2020 admin ಮಹಾಲಿಂಗಪುರ : ಬಡತನದಲ್ಲಿ ಬೆಳೆದು, ಚಿಕ್ಕ ವಯಸ್ಸಿನಲ್ಲಿಯೇ ಚಿತ್ರಕಲೆಯಲ್ಲಿ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಮತ್ತು ಆನ್ ಲೈನ್ ವಾಟರ್ ಕಲರ್ ಕಾಂಪಿಟೇಶನ್ ಪ್ರಶಸ್ತಿ ಪಡೆದು ನಾಡಿಗೆ ಕೀರ್ತಿ ತಂದ ವಿನಾಯಕ ಚಿಕ್ಕೋಡಿ ಇವರ ಸಾಧನೆ ಶ್ಲಾಘನೀಯ ಎಂದು ಪುರಸಭಾ ಸದಸ್ಯ ರಾಜು ಚಮಕೇರಿ ಹೇಳಿದರು.ಸ್ಥಳೀಯ 21 ನೇ ವಾರ್ಡಿನಲ್ಲಿ ಪುರಸಭಾ ಸದಸ್ಯ ರಾಜು ಚಮಕೇರಿ ಅವರ ನೇತೃತ್ವದಲ್ಲಿ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಹಾಗೂ ಆನ್ ಲೈನ್ ವಾಟರ್ ಕಲರ್ ಕಾಂಪಿಟೇಶನ್ ಪ್ರಶಸ್ತಿ ವಿಜೇತ ವಿನಾಯಕ ಚಿಕ್ಕೋಡಿ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು ವಿನಾಯಕ ಚಿಕ್ಕ ವಯಸ್ಸಿನಿಂದಲೂ ಚಿತ್ರಕಲೆಯಲ್ಲಿ ಹೊಂದಿದ್ಧ ಆಸಕ್ತಿ ಮತ್ತು ಪರಿಶ್ರಮ ಇಂದು ಇಷ್ಟು ದೊಡ್ಡ ಸಾಧನೆಗೆ ಕಾರಣ. ಅವರು ಚಿತ್ರಕಲೆಯಲ್ಲಿ ಇನ್ನೂ ದೊಡ್ಡ ಸಾಧನೆ ಮಾಡಲಿ, ಅದಕ್ಕೆ ಸದಾ ತಮ್ಮ ಸಹಕಾರ ಇರುವುದಾಗಿ ಹೇಳಿದರು.ಬಸಣ್ಣ ಬಟಕುರ್ಕಿ, ಪುರಸಭಾ ಮಾಜಿ ಅಧ್ಯಕ್ಷ ಜಿ. ಎಸ್. ಗೊಂಬಿ, ಕೇದಾರಿ ಹುರಕಡ್ಲಿ, ಮಲ್ಲು ಯರಡ್ಡಿ, ಪ್ರಭು ಹೆಗ್ಗಾಣಿ, ಮಹಾಲಿಂಗ ಹೂಗಾರ, ಶಂಕರ ಸೋರಗಾಂವಿ, ಚಿಕ್ಕಪ್ಪ ಮಾಳಿ, ಅನುಪ ಕಂಕಣವಾಡಿ ಉಪಸ್ಥಿತರಿದ್ದರು. Share