ಮುದ್ದೇಬಿಹಾಳ ಪಟ್ಟಣದ ಸೇರಿದಂತೆ ತಾಲೂಕಿನಾದ್ಯಂತ ಉತ್ತಮ ಪ್ರತಿಕ್ರೀಯೆ ದೊರೆತಿದೆ

ಮುದ್ದೇಬಿಹಾಳ ಪಟ್ಟಣದ ಸೇರಿದಂತೆ ತಾಲೂಕಿನಾದ್ಯಂತ ಉತ್ತಮ ಪ್ರತಿಕ್ರೀಯೆ ದೊರೆತಿದೆ

ಮುದ್ದೇಬಿಹಾಳ:
ಕೋರೊನಾ ವೈರಾಣು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ರವಿವಾರ ಲಾಕ್ ಡೌನ್ ಬಿಗಿಗೊಳಿಸುವ ಆದೇಶಕ್ಕೆ ಮುದ್ದೇಬಿಹಾಳ ಪಟ್ಟಣದ ಸೇರಿದಂತೆ ತಾಲೂಕಿನಾದ್ಯಂತ ಉತ್ತಮ ಪ್ರತಿಕ್ರೀಯೆ ದೊರೆತಿದೆ.
ಕಳೇದ ಎರಡು ವರೆ ತಿಂಗಳಿAದ ಕೊರೊನಾ ವೈರಾಣು ಕರ್ನಾಟಕದೊಳಗೆ ನುಸುಳದಂತೆ ಏನೆಲ್ಲ ಬಿಗಿ ಕಾನೂನು ರೂಪಿಸಿ ಲಾಕ್ ಡೌನ್, ಸಿಲ್ ಡೌನ್ ಹೇರಿಕೆ ಪಟ್ಟಣದಲ್ಲಿ ತಾಲೂಕಾ ಆಡಳಿತ, ಪುರಸಭೆ ಇಲಾಖೆ, ಪೋಲಿಸ್ ಇಲಾಖೆ, ತಾಲೂಕಾ ಆರೊಗ್ಯ ಇಲಾಖೆ ಸೇರಿದಂತೆ ಇತರೇ ಸರಕಾರಿ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಬಹಳ ಯಶಸ್ವಿಯಾಗಿ ನಿರ್ವಹಿಸಿದ ಬಳಿಕ ವಾರದ ಹಿಂದಷ್ಟೇ ಸರಕಾರ ಲಾಕ್ ಡೌನ ಸಡಿಲಿಕೆಗೊಳಿಸಿದ್ದರಿಂದ ಪಟ್ಟಣ ಸೇರಿದಂತೆ ತಾಲೂಕಿನೆಲ್ಲೇಡೆ ಜನಸಾಗರವೇ ಹರಿದು ಬಂದು ಜನಜಂಗುಳಿಯಿAದ ಕೂಡಿದ ಭರ್ಜರಿ ವ್ಯಾಪಾರ ಪ್ರಾರಂಭಗೊAಡಿತ್ತು.
ಕೊರೊನಾ ವೈರಸ್ ನ ಯಾವೂದೇ ಭಯವೂ ಇಲ್ಲದೇ ಸಾರ್ವಜನಿಕರು ರಸ್ತೆಗಳಿದು ಸಂಚಾರ, ದ್ವೀಚಕ್ರ ವಾಹನಗಳು, ಗೂಡ್ಸ್ ವಾಹನಗಳ ವಾಹಗಳ ಓಡಾಟ ಪ್ರಾರಂಭಿಸಿಬಿಟ್ಟಿದ್ದವೂ. ಮೊದಲೇ ಮದುವೆ ಸೀಜನ್ ಇರುವುದರಿಂದ ಸರಕಾರದ ನಿಯಮಾನುಸು 50 ಜನರನ್ನು ಮೀರದಂತೆ ಮದುವೆ ಮಾಡಿಕೊಳ್ಳಬಹುದು ಎಂಬ ನಿಯಮಾನುಸಾರ ಜನರು ಮದುವೆ ಫಿಕ್ಸ್ ಮಾಡಿಕೊಂಡು ಹೇಣ್ಣಿನ ಹಾಗೂ ಗಂಡಿನ ಕಡೆಯವರು ಬಂಗಾರ, ಬಟ್ಟೆ, ಪಾತ್ರೆಗಳನ್ನು ಖರಿದಿ ಮಾಡುವವರ ಸಂಖ್ಯೆ ದಿನದಿನಕ್ಕೆ ಹೆಚ್ಚಳಗೊಂಡಿತ್ತು.
ಆದರೇ ಸರಕಾರ ರವಿವಾರ ಲಾಕ್ ಡೌನ್‌ನ್ನು ಮತ್ತಷ್ಟು ಬಿಗಿಗೊಳಿಸಿ ಕಠೀಣ ಕಾನೂನು ಕೈಗೊಂಡಿದ್ದರೀಮದಾಗಿ ಪಟ್ಟಣದಲ್ಲಿ ಯಾವೂದೇ ಸರಕಾರಿ ಬಸ್ ಗಳ ಓಡಾಟ, ವಾಹನಗಳ ಓಡಾಟ, ದ್ವೀಚಕ್ರ ವಾಹನಗಳ ಓಡಾಟ ಹಾಗೂಸಾಮನ್ಯ ಜನರ ಸಂಚಾರವಿಲ್ಲದೇ ಬಿಕೋ ಎನ್ನುತ್ತಿತ್ತು.
ಪಟ್ಟಣದ ಬಸವೇಶ್ವರ ವೃತ್ತ, ಅಂಬೇಡ್ಕರ ವೃತ್ತ, ಇಂದಿರಾ ವೃತ್ತ, ರಾಣಿ ಚನ್ನಮ್ಮ ವೃತ್ತ, ಹುಡ್ಕೀಓ ಬಡಾವಣೆಯ ಲ್ಲಿನ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿರುವ ಕಿರಾಣಿ, ಅಡತಿ ಬಜಾರ, ಬಟ್ಟೆ, ಸ್ಟೇಷನರಿ,ಹೇರ್ ಸಲೂನ, ಬೇಕರಿ,ವೈನ್ ಶಾಪ್ ಗಳು, ಹೋಟೆಲ್ ಗಳು, ಪುಟ್ ವೇರ್, ಇಲೇಕ್ಟಿçÃಕಲ್, ಇಲೆಟ್ರಾನಿಕ್ಸ್, ಮೋಬೈಲ್, ಅಂಗಡಿಗಳು, ತರಕಾರಿ ವ್ಯಾಪರಸ್ತರು,ಹಣ್ಣಿನ ವ್ಯಾಪಾರಸ್ತರು ಸೇರಿದಂತೆ ಔಷಧಿ ಅಂಗಡಿ ಹೊರತುಪಡಿಸಿ ಇತರೇ ಯಾವೂದೇ ಅಂಗಡಿಗಳು ತೆರೆಯದೇ ಬಂದ್ ಮಾಡಿ ಸರಕಾರದ ಲಾಕ್ ಡೌನ್ ಆದೇಶಕ್ಕೆ ಎಲ್ಲ ವ್ಯಾಪಾರಸ್ತರು ಜನಸಾಮನ್ಯರು ಸಂಪೂರ್ಣ ಬೆಂಬಲ ನೀಡಿ ಕಂಡು ಬಂದಿದೆ.
ಪ್ರತಿ ವರ್ಷವೂ ಮುಸ್ಲಿಂ ಸಮಾಜದ ಅತ್ಯಂತ ಪವಿತ್ರ ರಮಜಾನ್ ಹಬ್ಬವನ್ನು ಅದ್ದೂರಿಯಿಂದ ಶ್ರದ್ದಾಭಕ್ತಿಯಿಂದ ಆಚರಿಸಲಾಗುತ್ತಿತ್ತು ಈ ವೇಳೆ ಭರ್ಜರಿ ಬಟ್ಟೆ, ದಿನಸಿ ಆಹಾರ ಸಾಮಗ್ರಿಗಳು ಸೇರಿದಂತೆ ಹಲವು ಬಗೆಯ ಖರಿಧಿ ಜೋರೋಗಿರುತ್ತಿತ್ತು. ಸಧ್ಯ ಕೊರೊನಾ ಹಿನ್ನೇಲೆಯಲ್ಲಿ ಲಾಕ್ ಡೌನ್ ಆದೇಶದಿಂದ ಈ ಬಾರಿ ರಂಜಾನ್ ಹಬ್ಬದಲ್ಲಿ ಮುಸ್ಲಿಂ ಸಮಾಜ ಬಾಂಧವರು ಸ್ವಯಂ ಪ್ರೇರಣೆಯಿಂದ ಈ ಬಾರಿ ಅದ್ದೂರಿ ರಂಜಾನ ಹಬ್ಬ ಆಚರಣೆಯನ್ನು ಕೈಬಿಟ್ಟು ಯಾವೂದೇ ವಸ್ತುಗಳನ್ನು ಖರಿಧಿಸದೇ ಕೇವಲ ಸಾಂಕೇತಿಕ ಆಚರಣೆಗೆ ತಿರ್ಮಾನಿಸಿದ್ದಾರೆ ಎಂಬುದು ತಿಳಿದು ಬಂದಿದೆ.
ತಹಶಿಲ್ದಾರ ಜಿ ಎಸ್ ಮಳಗಿ, ಸಿಪಿಐ ಆನಂದ ವಾಗ್ಮೋರೆ, ಪಿಎಸೈ ಮಲ್ಲಪ್ಪ ಮಡ್ಡಿ ಅವರು ತಾಲೂಕಾ ಆಡಳಿತ, ಹಾಗೂ ಪುರಸಭೆ, ಪೋಲಿಸ್ ಇಲಾಖೆ ಪಟ್ಟಣದ ಬಹುತೇಕ ಎಲ್ಲ ಮುಖ್ಯ ವೃತ್ತಗಳಲ್ಲಿ ವ್ಯಾಪಕ ಬಿಗಿ ಪೋಲಿಸ್ ಬಂಧೋಭಸ್ತ ಒದಗಿಸಿದ್ದಲ್ಲದೇ ಅನಗತ್ಯವಾಗಿ ಸಂಚರಿಸುವವರ ಮೇಲೆ ತಿವೃ ನಿಗಾವಹಿಸಿ ದಂಡ ವಸೂಲಿ ಮಾಡಿ ಜಾಗೃತಿ ಮೂಡಿಸುವ ಕಾರ್ಯ ಯಶಸ್ವಿಯಾಗಿ ನಿರ್ವಹಿಸುತ್ತಿರುವ ಘಟನೆ ಕಂಡು ಬಂತು.
Share
WhatsApp
Follow by Email