ಅನಾವಶ್ಯಕ ಸಂಚರಿಸುತಿದ್ದವರ ಬೈಕ್ ವಶಕ್ಕೆ ಪಡೆದ ಪೊಲೀಸರು

ಜಮಖಂಡಿ: ಕೊವೀಡ್ ಲಾಕ್‌ಡೌನ್ ಹಿನ್ನಲೆಯಲ್ಲಿ ಅನಾವಶ್ಯಕವಾಗಿ ಸುತ್ತಾಡುತಿದ್ದ ಬೈಕ್‌ಸವಾರರ ಬೈಕ್‌ಗಳನ್ನು ನಗರ ಹಾಗೂ ಗ್ರಾಮಿಣ ಪೊಲೀಸ್ ಠಾಣೆಯ ಸಿಬ್ಬಂದಿಗಳು ವಶಕ್ಕೆ ಪಡೆದುಕೊಂಡರು.
ಸರ್ಕಾರ ಭಾನುವಾರ ಒಂದು ದಿನದ ಮಟ್ಟಿಗೆ ಘೋಷಿಸಿದ ಲಾಕ್‌ಡೌನ್‌ನಲ್ಲಿ ನಗರದಲ್ಲಿನ ಔಷಧಿ ಅಂಗಡಿ, ಹಾಲಿನ ಅಂಗಡಿ, ಆಸ್ಪತ್ರೆಗಳನ್ನು ಹೊರತು ಪಡಿಸಿ ಉಳಿದ ಅಂಗಡಿ ಮುಗ್ಗಟ್ಟುಗಳು ಬಂದ ಮಾಡಿ ನಗರ ಸಂಪೂರ್ಣ ಸ್ತಬ್ದವಾಗಿತ್ತು.
ನಗರದಲ್ಲಿ ಕಳೆದ ಒಂದು ವಾರದಿಂದ ವಾಹನಗಳ, ಜನಜಂಗುಳಿಯಿAದ ತುಂಬಿರುತಿದ್ದ ಪ್ರಮುಖ ರಸ್ತೆಗಳು ಭಾನುವಾರ ಜನದಟ್ಟನೆ ವಾಹನಗಳು ಕಂಡು ಬರದೆ ರಸ್ತೆಗಳು ಬಿಕೋ ಎನ್ನುತಿದ್ದವು.
ಕಳೆದ ನಾಲ್ಕಾರು ದಿನಗಳಿಂದ ಬಸ್ ಸಂಚಾರ ಸರ್ಕಾರ ಪ್ರಾರಂಭಿಸಿತ್ತು ಆದರೆ ಲಾಕ್‌ಡೌನ್ ಹಿನ್ನಲೆಯಲ್ಲಿ ಬಸ್ ಸಂಚಾರ ಬಂದ ಮಾಡಿದ್ದರ ಪರಿಣಾಮ ಬಸ್ ನಿಲ್ದಾಣ ಬಿಕೋ ಎನ್ನುತಿತ್ತು.
ನಗರದಲ್ಲಿನ ಆಟೊ, ಖಾಸಗಿ ವಾಹನಗಳು, ಟಂಟ, ಮ್ಯಾಕ್ಸಿಕ್ಯಾಬ್‌ಗಳು ಸಂಚಾರ ಸ್ಥಗಿತಗೊಂಡಿದ್ದವು.
ಸೋಮವಾರದAದು ರಂಜಾನ್ ಹಬ್ಬದ ಆಚರಣೆಗೆ ವಸ್ತುಗಳ ಖರಿದಿಗೆ ಅಂಗಡಿ ಮುಗ್ಗಟ್ಟುಗಳು ಬಂದ ಇರುವದರಿಂದ ಮುಸ್ಲಿಂ ಬಾಂದವರು ಪರದಾಡುವಂತಾಯಿತು.
ಕುoಟು ನೇಪಕ್ಕೆ ಬೆತ್ತದ ರುಚಿ:
ಅನಾವಶ್ಯಕವಾಗಿ ರಸ್ತೆಯಲ್ಲಿ ಸುತ್ತಾಡುವವರ ಕುಂಟು ನೆಪಕ್ಕೆ ಪೊಲೀಸ್ ಸಿಬ್ಬಂದಿಗಳು ಯಾವುದೆ ಸೊಪ್ಪು ಹಾಕದೆ ಅವರಿಗೆ ಬೆತ್ತದ ರುಚಿತೋರಿಸಿದರು.
Share

WhatsApp
Follow by Email