
ಕಿತ್ತೂರು ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಇಲಾಖೆಯಿಂದ ಸಬ್ಸಿಡಿ ದರದಲ್ಲಿ ಮಂಜೂರಾದ ಪೈಪಗಳನ್ನು ರೈತರಿಗೆ ವಿತರಿಸಿ ಮಾತನಾಡಿ ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರ ಸರಕಾರ ರೈತರ ಅನುಕೂಲಕ್ಕಾಗಿ, ಹಾಗೂ ಶ್ರೇಯೋಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ರೈತರ ಕೃಷಿ ಉಪಕರಣಗಳಿಗಾಗಿ ಸಾಕಷ್ಟು ಹಣ ಖರ್ಚು ಮಾಡುತ್ತಿದೆ ರೈತರ ಸಮಸ್ಯಗಳನ್ನು ನೀಗಿಸುವ ಉದ್ದೇಶದಿಂದ ಈ ಯೋಜನೆಗಳನ್ನು ಜಾರಿಗೆ ತಂದಿದೆ ರೈತರು ಯೋಜನೆಗಳ ಕುರಿತು ಸಮಗ್ರವಾಗಿ ತಿಳಿದುಕೊಂಡು ಅದರ ಲಾಭ ಪಡೆಯಬೇಕೆಂದರು.
ಬಿಜೆಪಿ ಬ್ಲಾಕ್ ಅಧ್ಯಕ್ಷ ಡಾ|| ಬಸವರಾಜ ಪರವಣ್ಣವರ .ಉಳವಪ್ಪ ಉಳ್ಳೇಗಡ್ಡಿ, ಕಿರಣ ಪಾಟೀಲ, ಕೃಷಿ ಅಧಿಕಾರಿಗಳಾದ .ಪಿ.ಕೆ.ಇಟ್ನಾಳ, ಮಂಜುನಾಥ ಕೆಂಚರಾಹುತ, ಸ.ಕೃ.ಅಧಿಕಾರಿ ಎಸ್.ಎಸ್.ಹಂಚಿನಮನಿ ಮತ್ತು .ಎಸ್.ಈ.ನಿಂಬಲಗುAದಿ ಹಾಗೂ ರೈತಬಾಂಧವರು ಹಾಜರಿದ್ದರು.