
ರಾಯಭಾಗದಲ್ಲಿ ಯುವ ಪ್ರತಿಭೆ ಅರುಣ ಐಹೊಳೆಯವರ ಜನುಮದಿನದ ಸರಳ ಸಮಾರಂಭದಲ್ಲಿ ಚಮಕೇರಿಯ ಬುದ್ಧ ಬಸವ ಅಂಬೇಡ್ಕರ್ ಸಾಮಾಜಿಕ ಮತ್ತು ಸಾಂಸ್ಕ್ರತಿಕ ಪ್ರತಿಷ್ಠಾಣವು ಹಮ್ಮಿಕೊಂಡಿದ್ದ ವೇದಿಕೆಯಲ್ಲಿ ಸನ್ಮಾನಿಸಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅರುಣ ಐಹೊಳೆ ಚಮಕೇರಿಯ ಪ್ರತಿಷ್ಠಾಣವು ಅನೇಕ ಸಮಾಜೋಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತ ,ಅಪ್ಪ ಪ್ರಶಸ್ತಿಯನ್ನು ಸಾಧಕರಿಗೆ ಕೊಡುವುದರ ಮೂಲಕ ಸಂಸ್ಥೆ ಅಪಾರ ಯಶಸ್ಸನ್ನು ಕಂಡಿದೆ ಎಂದರು.
ಕೊರೋನಾ ವೈರಸ್ಸ್ ನಿಂದ ತೊಂದರೆಗೊಳಗಾದ ಸಾವಿರಾರು ನಿರಾಶ್ರಿತರಿಗೆ ಸಹಾಯ ಮಾಡುವ ಮುಖೇನ, ಜನುಮದಿನದ ಈ ಸಂಭ್ರಮಾಚರಣೆಯ ಸವಿ ಘಳಿಗೆಯಲ್ಲಿ ನಿಮ್ಮ ಹೃದಯ ಬಯಸಿದ್ದು ನಿಮಗೆ ಫಲಿಸಲಿ ಎಂದು ಆಶಿಸುತ್ತಾ,
ನೂರಾರು ವರುಷ ನೀವು ಹೀಗೆ ನಗು ನಗುತಾಯಿರಲಿ ಎಂದು ಪ್ರತಿಷ್ಠಾಣ ಅಧ್ಯಕ್ಷ ಮಹಾದೇವ ಬಿರಾದಾರ ಹೇಳಿದರು. ಈ ಸಂದರ್ಭದಲ್ಲಿ ರಂಜಿತಕುಮಾರ ಉಪಸ್ಥಿತರಿದ್ದರು.