ಕೆಎಲ್‌ಇ ಪಾಲಿಟೆಕ್ನಿಕ್‌ನಲ್ಲಿ ಕೊರೊನಾ ಆನ್‌ಲೈನ್ ಸ್ಪರ್ಧೆಗಳು ವೈರಸ್ ಹರಡದಂತೆ ಜಾಗೃತಿ ಜೊತೆಗೆ  ಅರ್ಥಪೂರ್ಣ ಸಂದೇಶ ಸಾರಿದ ವಿಧ್ಯಾರ್ಥಿಗಳು

ಕೆಎಲ್‌ಇ ಪಾಲಿಟೆಕ್ನಿಕ್‌ನಲ್ಲಿ ಕೊರೊನಾ ಆನ್‌ಲೈನ್ ಸ್ಪರ್ಧೆಗಳು ವೈರಸ್ ಹರಡದಂತೆ ಜಾಗೃತಿ ಜೊತೆಗೆ ಅರ್ಥಪೂರ್ಣ ಸಂದೇಶ ಸಾರಿದ ವಿಧ್ಯಾರ್ಥಿಗಳು

ಮಹಾಲಿಂಗಪುರ: ಸ್ಥಳೀಯ ಕೆಎಲ್‌ಇ ಪಾಲಿಟೆಕ್ನಿಕ್‌ನಲ್ಲಿ ಕಳೆದ 10 ವಾರಗಳಿಂದ ಆನ್‌ಲೈನ್ ಕ್ಲಾಸ್ ಮತ್ತು ಪರೀಕ್ಷೆ ನಡೆಯುತ್ತಿದ್ದು, ಇದರ ಜೊತೆ ಇದೀಗ ಆನ್‌ಲೈನ್‌ನಲ್ಲೇ ವಿದ್ಯಾರ್ಥಿಗಳಿಗೆ ಕೊರೊನಾ ವಿಷಯವಾಗಿ ಜಾಗೃತಿ ಹಾಗೂ ನಾನಾ ಸ್ಪರ್ಧೆ ಏರ್ಪಡಿಸಿ ವಿಧ್ಯಾರ್ಥಿಗಳಿಗೆ ಅರಿವಿನ ಕೆಲಸದಲ್ಲಿ ಭಾಗಿಯಾಗುವಂತೆ ಮಾಡಿದೆ.
ಆನ್‌ಲೈನ್ ಕ್ಲಾಸ್‌ನಲ್ಲಿ ಸಕ್ರಿಯರಾದ ಎಲ್ಲ ವಿದ್ಯಾರ್ಥಿಗಳಿಗೆ ಶನಿವಾರ ಕೋವಿಡ್-19 ವೈರಸ್ ಹರಡದಂತೆ ಜಾಗೃತಿ ಮೂಡಿಸುವ ಪೋಸ್ಟರ್ ಮೇಕಿಂಗ್ ಸ್ಪರ್ಧೆ ಏರ್ಪಡಿಸಲಾಗಿ 26 ವಿದ್ಯಾರ್ಥಿಗಳು ಭಾಗಿಯಾಗಿದ್ದರು.ಇವರು ಅರ್ಥಪೂರ್ಣ ಸಂದೇಶ ಸಾರುವ ಪರಿಣಾಮಕಾರಿ ಪೋಸ್ಟರ್ ತಯಾರಿಸಿ ಆನ್‌ಲೈನ್‌ನಲ್ಲೇ ಅಪ್‌ಲೋಡ್ ಮಾಡುವ ಮುಖಾಂತರ ಗಮನ ಸೆಳೆದರು.
ರಮೇಶ ಉಪ್ಪಾರ್ (ಸಿವಿಲ್) ಪ್ರಥಮ, ಪ್ರವೀಣ ಬರಗಲ್ (ಇಲೆಕ್ಟಿçಕಲ್ ಇಂಜಿನಿಯರಿAಗ್), ಸಿದ್ದು ಗುಳೇದ (ಸಿವಿಲ್) ದ್ವಿತೀಯ, ಇಜಾಜ್ ಯಾದವಾಡ (ಸಿಎಸ್), ಶಾಹಿನ್ ನಾಯಕವಾಡಿ (ಇಲೆಕ್ಟಾçನಿಕ್ಸ್), ಶ್ರೇಯಸ್ ಹೂಲಿ (ಮೆಕ್ಯಾನಿಕಲ್) ತೃತೀಯ ಸ್ಥಾನ ಪಡೆದರು.
ಮಂಗಳವಾರ ಬೆಳಗ್ಗೆ 10ರಿಂದ 11 ಗಂಟೆ ವರೆಗೆ ಆನ್‌ಲೈನ್‌ನಲ್ಲೇ ಕೊರೊನಾ ಜಾಗೃತಿ ಪಾಠ ಮಾಡಿ ನಂತರ ಕೊರೊನಾ ಜಾಗೃತಿ ವಿಷಯವಾಗಿ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಯಿತು.
15 ಗ್ರುಪ್‌ನ 380 ವಿದ್ಯಾರ್ಥಿಗಳು ಭಾಗವಹಿಸಿದ್ದರು. 50 ಅಂಕಗಳ ರಸಪ್ರಶ್ನೆ ಇದಾಗಿತ್ತು. ಅತಿ ಶಿಘ್ರ ಉತ್ತರ ನೀಡಿ 50 ಕ್ಕೆ 50 ಅಂಕ ಪಡೆದವರಿಗೆ ಬಹುಮಾನವಿತ್ತು. ರೇವಣ್ಣ ನಾವಿ (ಮೆಕ್ಯಾನಿಕಲ್) ಪ್ರಥಮ, ಶಿವರಾಜ ಪೂಜಾರಿ (ಸಿವಿಲ್) ದ್ವಿತೀಯ, ಮೋಹಿನಕಾಂತ ತಾಳಿಕೋಟಿ (ಇಲೆಕ್ಟಿçಕಲ್) ತೃತೀಯ ಸ್ಥಾನ ಪಡೆದರು.
ಪ್ರಾಚಾರ್ಯ ಎಸ್.ಐ.ಕುಂದಗೋಳ ಮಾರ್ಗದರ್ಶನದಲ್ಲಿ, ನಾನಾ ವಿಭಾಗಗಳ ಮುಖ್ಯಸ್ಥರ ನೇತೃತ್ವದಲ್ಲಿ ಎಲ್ಲ ಉಪನ್ಯಾಸಕ ಸಿಬ್ಬಂದಿ ಸಂಘಟಿಸಿದ್ದರು.
Share
WhatsApp
Follow by Email