ಬ್ರೇಕಿಂಗ್ ನ್ಯೂಸ್ ವಿದ್ಯುತ್ ತಗಲಿ ವ್ಯಕ್ತಿ ಸಾವು. ಹೆಸ್ಕಾಂ ಉದ್ಯೋಗಿಗಳ ದಿವ್ಯ ನಿರ್ಲಕ್ಷ್ಯತೆಯಿಂದ ಘಟಿಸಿದ ಪ್ರಕರಣ 28/05/202028/05/2020 admin ಮಹಾಲಿಂಗಪೂರ : ಸೈದಾಪೂರ ಗ್ರಾಮದ ತೋಟದಲ್ಲಿ ವಿದ್ಯುತ್ ಪ್ರವಹಿಸಿ ವ್ಯಕ್ತಿ ಓರ್ವ ಮೃತಪಟ್ಟ ಘಟನೆ ನಡೆದಿದೆ.ಸಮೀಪದ ರಬಕವಿ – ಬನಹಟ್ಟಿ ತಾಲೂಕಿನ ಸೈದಾಪೂರ ಗ್ರಾಮದ ಶಂಕ್ರೆಪ್ಪ ಬೆಳಗಲಿ ಇವರ ಜಮೀನನ ಭಾವಿ ಹತ್ತಿರವಿರುವ ಹಳೆ ಟಿಸಿ ಕಂಬದ ಮೇಲೆ ಹತ್ತಿ ಜಂಪ ಹಾಕುವಾಗ ಆಕಸ್ಮಿಕ ವಿದ್ಯುತ್ ಸಂಚರಿಸಿ ಪೀಡಿ ಬುದ್ನಿಯ ತೋಟದ ನಿವಾಸಿ ಲಕ್ಷ್ಮಣ ಮಾರುತಿ ಪವಾರ ಎಂಬ 50ವರ್ಷದ ವ್ಯಕ್ತಿ ಮೃತಪಟ್ಟಿದ್ದಾನೆ.ಸಲೀಂ ಉಮರ ಹಣಗಿ,ಬಸವರಾಜ ಮಹಾದೇವಪ್ಪ ಶಿರಗುಪ್ಪ, ರಾಜಕುಮಾರ ಸದಾಶಿವ ಸರಿಕರ ಈ ಮೂವರು ಮಹಾಲಿಂಗಪೂರ ಹೆಸ್ಕಾಂ ವಿದ್ಯುತ್ ಸರಭರಾಜು ಕಂಪನಿಯಲ್ಲಿ ಉದ್ಯೋಗಿಗಳಾಗಿದ್ದು ಇವರ ದಿವ್ಯ ನಿರ್ಲಕ್ಷ್ಯತೆಯಿಂದ ಮೇ.27ರಂದು 1.45ಕ್ಕೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿರುತ್ತದೆ. ಸ್ಥಳೀಯ ಪೋಲಿಸ್ ಠಾಣೆಯಲ್ಲಿ ಮೃತನ ಹೆಂಡತಿ ಯಮನವ್ವ ಲಕ್ಷ್ಮಣ ಪವಾರ ಹೆಚ್ಚಿನ ತನಿಖೆಗೆ ಪ್ರಕರಣ ದಾಖಲಿಸಿದ್ದಾರೆ.ಘಟನಾ ಸ್ಥಳಕ್ಕೆ ಪಿಎಸ್ಸೈ. ಜಿ.ಎಸ್.ಉಪ್ಪಾರ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶಿಲಿಸಿದ್ದಾರೆ. Share