
ಅವರು ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ 14 ದಿನ ಕ್ವಾರಂಟೈನ್ದ್ದ 56 ಜನ ಕೂಲಿ ಕಾರ್ಮಿಕರನ್ನು ಬಿಡುಗಡೆಗೊಳಿಸಿ ಮಾತನಾಡಿ, ಕೊರೋನಾ ವೈರಸ್ ನಿಯಂತ್ರಣಕ್ಕೆ ಎಲ್ಲ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಕ್ವಾರಂಟೈನ್ಲ್ಲಿ ಇದ್ದ ಯಾರಿಗೂ ಯಾವುದೇ ಸಮಸ್ಯೆಯಿಲ್ಲ. ಇದ್ದರಿಂದ ತಾವು ಮನೆಗೆ ಹೋದ ನಂತರ ಯಾರು ಬೇರೆಯವರ ಮನೆ- ಊರಿಗೆ ಹೋಗಬಾರದು. ಇನ್ನು ಏಳು ದಿನಗಳ ಕಾಲ ಸಾಮಾಜಿಕ ಅಂತರ ಕಾಯ್ದುಕೊಂಡು, ಹೊರಗಡೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ ಹಾಕಿಕೊಂಡು ಮನೆಯಲ್ಲಿದ್ದು ಸಹಕರಿಸಿರಿ. ಬೇರೆ ಕೂಲಿ ಕಾರ್ಮಿಕರು ಬೇರೆ ರಾಜ್ಯದಿಂದ ಬಂದರೇ ಕೂಡಲೇ ಆಶಾ ಹಾಗೂ ಗ್ರಾಪಂ ಸಿಬ್ಬಂದಿ, ಪೋಲಿಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಈ ವೇಳೆಯಲ್ಲಿ ಗ್ರಾಪಂ ಪಿಡಿಒ ಈರಪ್ಪ ತಮದಡ್ಡಿ ಮಾತನಾಡಿ, ಕ್ವಾರಂಟೈನ್ದಲ್ಲಿದ್ದ ಎಲ್ಲ ಕಾರ್ಮಿಕರು ತಾವು ಇಲ್ಲಿಯವರೆಗೆ ಸಹಕಾರ ನೀಡಿದ್ದೀರಿ. ಇನ್ನು ಮನೆಯಲ್ಲಿ ಏಳು ದಿನಗಳ ಕಾಲವಿದ್ದು ಸಹಕರಿಸಬೇಕು. ಇಂದು ಮತ್ತೆ 12 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಇದರಂತೆ ಬೇರೆಯವರು ಬಂದಾಗ ನೇರವಾಗಿ ಮಾಹಿತಿ ನೀಡಬೇಕು. ತಾವು ಸಾಮಾಜಿಕ ಅಂತರ ಮತ್ತು ಮಾಸ್ಕ, ಸ್ಯಾನಿಟೈಜರ್ ಬಳಸಿಕೊಂಡು ಮನೆಯಲ್ಲಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಗ್ರಾಮ ಲೆಕ್ಕಾಧಿಕಾರಿ ಸಂಜೀವಕುಮಾರ ರಾಠೋಡ, ಪಿಡಿಒ ಈರಪ್ಪ ತಮದಡ್ಡಿ, ಆರೋಗ್ಯ ಇಲಾಖೆಯ ಎಪ್. ಎಸ್. ಕೋಲಕಾರ, ಮಹ್ಮದ್ ಶೇಖ, ಶಿವು ತೇಲಿ, ಪೋಲಿಸ್ ಅಧಿಕಾರಿ ಶ್ರೀಶೈಲ ಪಾಟೀಲ, ಶ್ರೀಕಾಂತ ಆಲಗೂರ, ಹಣಮಂತ ಕನ್ನಾಳ, ಮಲಿಕಸಾಬ ಪಡಸಲಗಿ, ಶೋಭಾ ಪತ್ತಾರ, ರಾಜಶ್ರೀ ಸತ್ತಿ, ಶೋಭಾ ಬಡಚಿ, ಸೀಮಾ ಝರೆ, ಮಂಜುಳಾ ಗುರಪ್ಪಗೋಳ, ಈಶ್ವರಿ ಮುಧೋಳ, ಲಕ್ಷಿö್ಮÃ ಝರೆ ಸೇರಿದಂತೆ ಅನೇಕರು ಇದ್ದರು.