ಶುಭ ಶನಿವಾರ ಆಗಸ್ಟ್ 08, 2020 ರಾಶಿ ಭವಿಷ್ಯ

ಶುಭ ಶನಿವಾರ ಆಗಸ್ಟ್ 08, 2020 ರಾಶಿ ಭವಿಷ್ಯ

ಶುಭ ಶನಿವಾರ-ಆಗಸ್ಟ್-08,2020 ರಾಶಿ ಭವಿಷ್ಯ
ಸೂರ್ಯೋದಯ: 06:10, ಸೂರ್ಯಸ್ತ: 18:40
ಶಾರ್ವರಿ ಶಕ ಸಂವತ
ಶ್ರಾವಣ ಮಾಸ ದಕ್ಷಿಣಾಯಣ
ತಿಥಿ: ಪಂಚಮೀ – 28:18+ ವರೆಗೆ
ನಕ್ಷತ್ರ: ಉತ್ತರಾ ಭಾದ್ರ – 16:12 ವರೆಗೆ
ಯೋಗ: ಧೃತಿ – ಪೂರ್ಣ ರಾತ್ರಿ ವರೆಗೆ
ಕರಣ: ಕೌಲವ – 15:09 ವರೆಗೆ ತೈತಲೆ – 28:18+ ವರೆಗೆ
ದುರ್ಮುಹೂರ್ತ: 06:10 – 07:00
ದುರ್ಮುಹೂರ್ತ : 07:00 – 07:50
ವರ್ಜ್ಯಂ: 29:39+ – 31:26+
ರಾಹು ಕಾಲ: 09:00 – 10:30
ಯಮಗಂಡ: 13:30 – 15:00
ಗುಳಿಕ ಕಾಲ: 06:00 – 07:30
ಅಮೃತಕಾಲ: 10:52 – 12:39
ಅಭಿಜಿತ್ ಮುಹುರ್ತ: 12:00 – 12:50

ಮೇಷ: ಪರಿವರ್ತನೆಗಾಗಿ ಆಲೋಚಿಸುತ್ತಿರುವ ನಿಮಗೆ ಬೇಕಾದ ನೆರವಿಗಾಗಿ ಸ್ನೇಹಿತರ ಸಹಕಾರವನ್ನು ಪಡೆಯುವಿರಿ. ಶುಭಸಂಖ್ಯೆ: 2
ವೃಷಭ: ಗುಪ್ತ ಶಾಸ್ತ್ರಗಳನ್ನು ವಶ ಮಾಡಿಕೊಳ್ಳಲು ಹೊರಟಿದ್ದೀರಿ. ಗ್ರಹದೋಷ ಎದುರಾದೀತು. ಅದನ್ನು ಕೈಬಿಟ್ಟರೆ ಕ್ಷೇಮವಿದೆ. ಶುಭಸಂಖ್ಯೆ: 1
ಮಿಥುನ: ಇಂಜಿನಿಯರ್​ಗಳು, ವೈದ್ಯಕೀಯ ತಜ್ಞರು, ನರ್ಸ್​ಗಳು, ಹೂ ಹಣ್ಣು ಮಾರಾಟಗಾರರಿಗೆ ಉತ್ತಮ ಲಾಭದ ದಿನವಾಗಿದೆ. ಶುಭಸಂಖ್ಯೆ: 3
ಕಟಕ: ವಿಶೇಷ ಪರಿಣತಿ ಪಡೆಯಲು ಇಚ್ಛಿಸುತ್ತಿರುವ ವಿದ್ಯಾರ್ಥಿಗಳಿಗೆ ಕನಸು ಸಾಕಾರವಾಗಲು ಹೇರಳವಾದ ಅವಕಾಶಗಳಿವೆ. ಶುಭಸಂಖ್ಯೆ: 2

ಸಿಂಹ: ಮುಂದೆ ಬರಲಿರುವ ಕಷ್ಟದ ವಿಚಾರಗಳ ಕುರಿತ ದೂರದರ್ಶಿತ್ವದಿಂದ ಮಾನಸಿಕ ಬಲವನ್ನು ಪಡೆಯುವಿರಿ. ಶುಭಸಂಖ್ಯೆ: 6

ಕನ್ಯಾ: ಸಿಟ್ಟಿನ ಭರದಲ್ಲಿ ಸುಮ್ಮನೆ ಏನನ್ನೋ ಹೇಳಿ ಎಲ್ಲರ ವಿರೋಧವನ್ನು ಕೂಡ ಕಟ್ಟಿಕೊಳ್ಳದಿರಿ. ತಾಳ್ಮೆಯಿಂದಿದ್ದರೆ ಲಾಭವಿದೆ. ಶುಭಸಂಖ್ಯೆ: 5

ತುಲಾ: ಜಾಣರಾಗಿದ್ದರೂ ಎಡವುತ್ತೀರಿ. ನಯವಾದ ಬಿಳಿಯ ಪುಡಿಗಳೆಲ್ಲ ಸಕ್ಕರೆಯೇ ಎಂಬಂಥ ತಪು್ಪ ಕಲ್ಪನೆಯನ್ನು ಬಿಡಿ. ಶುಭಸಂಖ್ಯೆ: 9

ವೃಶ್ಚಿಕ: ಎಲ್ಲರಿಗೂ ಒಳಿತನ್ನು ಉಂಟá-ಮಾಡುವ ವೆಂಕಟೇಶ್ವರನನ್ನು ಭಜಿಸಿ. ಸಂಕಟಗಳಿಂದ ಬಹು ಬೇಗನೆ ಪಾರಾಗುವಿರಿ. ಶುಭಸಂಖ್ಯೆ: 8

ಧನಸ್ಸು: ಪದೋನ್ನತಿಗಾಗಿ ಕೆಲವರಿಗೆ ಹೆಚ್ಚಿನದಾದ ಅವಕಾಶ ಸಿಗಲಿದೆ. ಪೊಲೀಸ್ ಅಧಿಕಾರಿಗಳು ಮೆಚ್ಚುಗೆಯನ್ನು ಗಳಿಸುವರು. ಶುಭಸಂಖ್ಯೆ: 7

ಮಕರ: ಕುಟುಂಬದ ಹತ್ತಿರದ ಬಂಧುಗಳಿಂದ ಒಳಿತಿನ ವಿಚಾರದಲ್ಲಿ ವಿಶೇಷ ರೀತಿಯದಾದ ಒತ್ತಾಸೆಯು ಲಭ್ಯವಾಗಲಿದೆ. ಶುಭಸಂಖ್ಯೆ: 2

ಕುಂಭ: ಪ್ರವಾಸದ ಕಾರ್ಯಕ್ರಮ ಬಂದರೆ ಹೋಗಬೇಡಿ. ಯಶಸ್ಸಿಗೆ ಬೇಕಾದ ಸಿದ್ಧತೆಯನ್ನು ಆರಂಭ ಮಾಡಿಕೊಳ್ಳುವುದು ಉತ್ತಮ. ಶುಭಸಂಖ್ಯೆ: 1

ಮೀನ: ನಿಮ್ಮ ನಿರ್ಧಾರಗಳಿಗೇ ವಿಶೇಷವಾದ ಮಹತ್ವ ನೀಡಿ. ಆದರೆ ಬೇರೆಯವರ ಅಭಿಪ್ರಾಯಗಳನ್ನು ನಿರ್ಲಕ್ಷಿಸಲು ಹೋಗಬೇಡಿ. ಶುಭಸಂಖ್ಯೆ: 3
Share
WhatsApp
Follow by Email