ಶುಭ ಭಾನುವಾರ-ಆಗಸ್ಟ್-09,2020 ರಾಶಿ ಭವಿಷ್ಯ

ಶುಭ ಭಾನುವಾರ-ಆಗಸ್ಟ್-09,2020 ರಾಶಿ ಭವಿಷ್ಯ

ಶುಭ ಭಾನುವಾರ-ಆಗಸ್ಟ್-09,2020 ರಾಶಿ ಭವಿಷ್ಯ
ಸೂರ್ಯೋದಯ: 06:10, ಸೂರ್ಯಸ್ತ: 18:39
ಶಾರ್ವರಿ ನಾಮ ಸಂವತ್ಸರ
ಶ್ರಾವಣ ಮಾಸ, ದಕ್ಷಿಣಾಯಣ
ತಿಥಿ: ಷಷ್ಠೀ – ಪೂರ್ಣ ರಾತ್ರಿ ವರೆಗೆ
ನಕ್ಷತ್ರ: ರೇವತಿ – 19:06 ವರೆಗೆ
ಯೋಗ: ಧೃತಿ – 06:45 ವರೆಗೆ
ಕರಣ: ಗರಜ – 17:29 ವರೆಗೆ ವಣಿಜ – ಪೂರ್ಣ ರಾತ್ರಿ ವರೆಗೆ
ದುರ್ಮುಹೂರ್ತ: 16:59 – 17:49
ರಾಹು ಕಾಲ: 16:30 – 18:00
ಯಮಗಂಡ: 12:00 – 13:30
ಗುಳಿಕ ಕಾಲ: 15:00- 16:30
ಅಮೃತಕಾಲ: 16:25 – 18:12
ಅಭಿಜಿತ್ ಮುಹುರ್ತ: 12:00 – 12:49

ಮೇಷ: ಸಮಾಜ ಸುಧಾರಕರು, ರಾಜಕಾರಣಿಗಳು ಯಶಸ್ಸಿನ ಸವಿ ಪಡೆಯವರು. ಕೆಟ್ಟ ಮಾತು ಆಡುವವರನ್ನು ನಿರ್ಲ್ಷ. ಶುಭಸಂಖ್ಯೆ: 1

ವೃಷಭ: ವಿಶಿಷ್ಟವಾದ ಕ್ರಿಯಾಶೀಲ ವ್ಯಕ್ತಿತ್ವದಿಂದ ನಿಮ್ಮ ಉದ್ದೇಶಗಳು ಅಡೆತಡೆಗಳು ಇಲ್ಲದೆ ಜಯ ಸಾಧಿಸಲಿವೆ. ಶುಭಸಂಖ್ಯೆ: 3

ಮಿಥುನ: ಕನಸಿನ ಯೋಜನೆ ಸಾಕಾರಗೊಳ್ಳಲಿದೆ. ಹಳೆಯ ವಿವಾದವೊಂದರಲ್ಲಿ ಗೆಲುವನ್ನು ಸಾಧಿಸಿ ವಿಜೃಂಭಿಸುವಿರಿ. ಶುಭಸಂಖ್ಯೆ: 4

ಕಟಕ: ಜೀವನಸಂಗಾತಿಯ ಕಾರಣದಿಂದ ನಿಮ್ಮ ಘನತೆ ಹೆಚ್ಚಲಿದೆ. ಹೊಸ ಕಾರ್ಯಗಳನ್ನು ಆರಂಭಿಸಲು ಸುದಿನವಿದು. ಶುಭಸಂಖ್ಯೆ: 6

ಸಿಂಹ: ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡು ಅವಸರ ಮಾಡಬೇಡಿ. ಹೊಸ ಉತ್ಸಾಹದಿಂದ ಕಾರ್ಯವನ್ನು ಮುಂದುವರಿಸಿ. ಶುಭಸಂಖ್ಯೆ: 5

ಕನ್ಯಾ: ಈ ಸಂದರ್ಭದಲ್ಲಿ ಗ್ರಹಗತಿ ಪ್ರತಿಕೂಲಕರವೇ ಆಗಿದೆ. ವಿದೇಶದಲ್ಲಿ ಹೆಚ್ಚಿನ ಓದಿನ ಉದ್ದೇಶ ಇಟ್ಟುಕೊಳ್ಳುವುದು ಬೇಡ. ಶುಭಸಂಖ್ಯೆ: 2

ತುಲಾ: ಏನೋ ಕೆಲಸ ಮಾಡುವುದಕ್ಕೆ ಹೋಗಿ ಇನ್ನೇನೋ ಅಪಚಾರವಾದೀತು. ಎಚ್ಚರ ಇರಲಿ. ಗಣೇಶ ಸ್ತೋತ್ರ ಪಠಿಸಿ. ಶುಭಸಂಖ್ಯೆ: 8

ವೃಶ್ಚಿಕ: ವೃತ್ತಿಯ ಕ್ಷೇತ್ರದಲ್ಲಿ ಪದೋನ್ನತಿಯ ಅವಕಾಶವಿದೆ. ಆದರೆ ದೂರದ ಊರಿಗೆ ವರ್ಗಾವಣೆ ಕೂಡ ಆದೀತು. ಶುಭಸಂಖ್ಯೆ: 7

ಧನಸ್ಸು: ಸ್ನೇಹಿತರ ಜತೆಗೆ ಮಾತನಾಡುವುದರ ಮೂಲಕ ಮನಸ್ಸಿನ ತೊಳಲಾಟಗಳನ್ನು ಕೊಡವಿಕೊಳ್ಳಿ. ನೆರವು ಲಭ್ಯ. ಶುಭಸಂಖ್ಯೆ: 9

ಮಕರ: ನಿಮ್ಮ ಸಹನೆಯನ್ನು ಮಕ್ಕಳು ಪರೀಕ್ಷೆ ಮಾಡಬಹುದು. ಬುದ್ಧಿವಂತಿಕೆಯಿಂದ ಅವರನ್ನು ನಿಯಂತ್ರಿಸಿಬಿಡಿ. ಶುಭಸಂಖ್ಯೆ: 1

ಕುಂಭ: ಹಿತೈಷಿಗಳ ಹಾರ್ದಿಕ ಬೆಂಬಲದಿಂದ ನಿಮ್ಮ ಯೋಜನೆ ಸಾಕಾರಗೊಳ್ಳಲಿದೆ. ಕುಲದೇವರ ಪ್ರಾರ್ಥನೆ ಮಾಡಿ. ಶುಭಸಂಖ್ಯೆ: 4

ಮೀನ: ಮಾತಿನ ಶಕ್ತಿಯಿಂದಲೇ ಜನರ ಗಮನ ಸೆಳೆಯುವ ನೀವು ಪ್ರಶಂಸೆಗೆ ಉಬ್ಬದಿರಿ. ಕಾರ್ಯಗಳು ಸಫಲವಾಗಲಿವೆ. ಶುಭಸಂಖ್ಯೆ: 3
Share
WhatsApp
Follow by Email