ಮಹಾರಾಷ್ಟ್ರ: ಏಕನಾಥ್ ಶಿಂಧೆ ಸರ್ಕಾರವು ಅಲ್ಲಿನ ಸರ್ಕಾರಿ ಕಚೇರಿಗಳಿಗೆ ಅಂತಹ ಒಂದು ಸುಗ್ರೀವಾಜ್ಞೆಯನ್ನು ಹೊರಡಿಸಿದೆ, ಈ ಫರ್ಮಾನಿನ ಕುರಿತು ಅಲ್ಲಿನ ವಿರೋಧ ಪಕ್ಷಗಳು ಗದ್ದಲವನ್ನು ಸೃಷ್ಟಿಸುವ ಸಾಧ್ಯತೆ ಇದೆ. ಮಹಾರಾಷ್ಟ್ರದ ಮೀನುಗಾರಿಕೆ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಧೀರ್ ಮುನಗಂಟಿವಾರ್ ಅವರು ಸರ್ಕಾರಿ ಕಚೇರಿಗಳಲ್ಲಿ ಫೋನ್‌ನಲ್ಲಿ ಹಲೋ ಹೇಳುವ ಬದಲು ವಂದೇ ಮಾತರಂ ಹೇಳುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸುಧೀರ್ ಮುನಗಂಟಿವಾರ್, ಹಲೋ ಎಂಬುದು ವಿದೇಶಿ ಪದ, ಆದ್ದರಿಂದ ಅದನ್ನು ತ್ಯಜಿಸುವುದು ಅವಶ್ಯಕ. ವಂದೇ ಮಾತರಂ ಎಂಬುದು ಪ್ರತಿಯೊಬ್ಬ ಭಾರತೀಯನ ಮನದಾಳದ ಭಾವನೆಯೇ ಹೊರತು ಪದವಲ್ಲ. ಇದು ಸಾರ್ವಜನಿಕರ ಭಾವನೆಯಾಗಿದ್ದು, ಇದನ್ನು ಸರ್ಕಾರಿ ಕಚೇರಿಗಳಲ್ಲಿ ಬಳಸುವುದು ಕಡ್ಡಾಯ ಎಂದಿದ್ದಾರೆ.
ಇಲಾಖೆಯ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಂತೆ ಕ್ರಾರ್ಯಪ್ರವೃತ್ತರಾದ ಸಂಸ್ಕೃತಿ ಇಲಾಖೆಯ ಸಚಿವರು :
ಮಹಾರಾಷ್ಟ್ರದಲ್ಲಿ ಭಾನುವಾರ ಇಲಾಖೆಗಳ ವಿಭಜನೆ ನಡೆದಿದೆ. ಇದರಲ್ಲಿ ಸುಧೀರ್ ಮುನಗಂಟಿವಾರ್ ಅವರಿಗೆ ಸಾಂಸ್ಕೃತಿಕ ಸಚಿವಾಲಯದ ಜವಾಬ್ದಾರಿಯನ್ನು ನೀಡಿದ ತಕ್ಷಣ, ಅವರು ಕಾರ್ಯಪ್ರವೃತ್ತರಾಗಿದ್ದಾರೆ. ಇನ್ನು ಮುಂದೆ ಮಹಾರಾಷ್ಟ್ರದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ನೌಕರರು ವಂದೇ ಮಾತರಂನೊಂದಿಗೆ ದೂರವಾಣಿಯಲ್ಲಿ ಸಂಭಾಷಣೆಯನ್ನು ಪ್ರಾರಂಭಿಸಬೇಕು ಎಂದು ಅವರು ಹೇಳಿದ್ದಾರೆ.