ಗುಜರಾತ್ ನಲ್ಲಿ  ಲೋಕಾರ್ಪಣೆ ಗೊಂಡ ಅಟಲ್ ಸೇತುವೆಯ ವಿಶೇಷತೆ ಏನು?

ಗುಜರಾತ್ ನಲ್ಲಿ ಲೋಕಾರ್ಪಣೆ ಗೊಂಡ ಅಟಲ್ ಸೇತುವೆಯ ವಿಶೇಷತೆ ಏನು?

ಅಟಲ್ ಸೇತುವೆ ಯ ಚಿತ್ರ.

ಅಹಮದಾಬಾದ್: ಗುಜರಾತ್ ನ ಅಹಮದಾಬಾದ್ ನಗರದಲ್ಲಿರುವ ಸಬರಮತಿ ನದಿ ದಾಟಲು ನೂತನ ನಿರ್ಮಿಸಿದ್ದ ಪ್ರಸಿದ್ಧ ಅಟಲ್ ಸೇತುವೆಯನ್ನು ಶನಿವಾರ (ಆಗಸ್ಟ್ 27) ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದಾರೆ.

ಈ ಸೇತುವೆಯನ್ನು ವಿಶೇಷವಾಗಿ ಗಾಳಿಪಟದ ಥೀಮ್‌ನೊಂದಿಗೆ ನಿರ್ಮಿಸಲಾಗಿದೆ. ಈ ಸೇತುವೆಯನ್ನು ಪಾದಚಾರಿಗಳ ಸಂಚಾರಕ್ಕಾಗಿಯೇ ನಿರ್ಮಿಸಲಾಗಿದೆ.

ಸೇತುವೆಯ ಮಧ್ಯ ಭಾಗದಲ್ಲಿ ಜನರಿಗೆ ಕುಳಿತುಕೊಂಡು ನದಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದಕ್ಕೂ ಅವಕಾಶ ಮಾಡಿಕೊಡಲಾಗಿದೆ.300 ಮೀಟರ್‌ ಉದ್ದವಿರುವ ಸೇತುವೆಯು 10-14 ಮೀಟರ್‌ ಅಗಲವಿದೆ.

ವಿಶೇಷ ಸೈಕಲಿಂಗ್‌ ಹಾದಿಯೂ ಇದರಲ್ಲಿದೆ. ಸೇತುವೆಯ ಬಳಿಯ ಕಲಾಕೃತಿ ಪ್ರದರ್ಶನವನ್ನೂ ಕಾಣಬಹುದು.

ಅಟಲ್ ಸೇತುವೆಯ ವಿಶೇಷತೆಗಳೇನು?

  • ಈ ಸೇತುವೆ ಕೇವಲ ಪಾದಚಾರಿಗಳ ಉಪಯೋಗಕ್ಕೆ ಮಾತ್ರ. ಇದನ್ನು ಎಲ್ಲಿಸ್ ಸೇತುವೆ ಮತ್ತು ಸರ್ದಾರ್ ಸೇತುವೆ ನಡುವೆ ನಿರ್ಮಿಸಲಾಗಿದೆ.
  • ಸೇತುವೆ ಮೇಲಿನ ರೂಫ್ ಅನ್ನು ಬಣ್ಣಬಣ್ಣದ ಫ್ಯಾಬ್ರಿಕ್ ನಿಂದ ನಿರ್ಮಿಸಲಾಗಿದೆ. ರೈಲಿಂಗ್ ಅನ್ನು ಗಾಜು ಮತ್ತು ಸ್ಟೈನ್ ಲೆಸ್ ಸ್ಟೀಲ್ ನಿಂದ ನಿರ್ಮಾಣ ಮಾಡಲಾಗಿದೆ.
  • ಪ್ರಸಿದ್ಧ ಅಟಲ್ ಬ್ರಿಡ್ಜ್ ಕಣ್ಮನ ಸೂರೆಗೊಳ್ಳುವ ರೀತಿಯ ಡಿಸೈನ್ ನಲ್ಲಿ ನಿರ್ಮಾಣ ಮಾಡಲಾಗಿದ್ದು, ಎಲ್ ಇಡಿ ಕೂಡಾ ಬಳಕೆ ಮಾಡಲಾಗಿದೆ. ಈ ಸೇತುವೆ ಸುಮಾರು 300 ಮೀಟರ್ ಉದ್ದವಿದ್ದು, 14 ಮೀಟರ್ ಅಗಲಿದೆ.
  • ಅಟಲ್ ಸೇತುವೆಯನ್ನು 2,600 ಮೆಟ್ರಿಕ್ ಟನ್ ಗಳಷ್ಟು ಸ್ಟೀಲ್ ಪೈಪ್ಸ್ ಉಪಯೋಗಿಸಿ ನಿರ್ಮಾಣ ಮಾಡಲಾಗಿದೆ.
  • ಪಾದಚಾರಿಗಳನ್ನು ಹೊರತು ಪಡಿಸಿ ಅಟಲ್ ಸೇತುವೆಯನ್ನು ಸೈಕಲಿಸ್ಟ್ ಗಳು ಬಳಸಬಹುದಾಗಿದೆ. ಪ್ರವಾಸಿಗರ ವೀಕ್ಷಣೆಗೂ ಅವಕಾಶ ಕಲ್ಪಿಸಲಾಗಿದೆ.
Share
WhatsApp
Follow by Email