ಸನಾತನ ಧರ್ಮದ ಬಗ್ಗೆ ಹೇಳಿಕೆ: ಬೆದರಿಕೆಗಳಿಗೆಲ್ಲ ನಾ ಹೆದರಲ್ಲ: ಉದಯನಿಧಿ

ಸನಾತನ ಧರ್ಮ ಡೆಂಘೀ, ಮಲೇರಿಯಾ ಇದ್ದಂತೆ ಅದನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕು ಎಂದಿದ್ದ ತಮಿಳುನಾಡು ಸಚಿವ ಉದಯನಿಧಿ ಮಾರನ್‌ ಅವರು, ತಮ್ಮ ತಲೆ ಕತ್ತರಿಸಿದರೆ 10 ಕೋಟಿ ರು. ನೀಡುವುದಾಗಿ ಹೇಳಿರುವ ಅಯೋಧ್ಯೆಯ ಪರಮಹಂಸ ಆಚಾರ್ಯ ಶ್ರೀಗಳಿಗೆ ವ್ಯಂಗ್ಯಭರಿತ ತಿರುಗೇಟು ನೀಡಿದ್ದಾರೆ.

ಚೆನ್ನೈ: ಸನಾತನ ಧರ್ಮ ಡೆಂಘೀ, ಮಲೇರಿಯಾ ಇದ್ದಂತೆ ಅದನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕು ಎಂದಿದ್ದ ತಮಿಳುನಾಡು ಸಚಿವ ಉದಯನಿಧಿ ಮಾರನ್‌ ಅವರು, ತಮ್ಮ ತಲೆ ಕತ್ತರಿಸಿದರೆ 10 ಕೋಟಿ ರು. ನೀಡುವುದಾಗಿ ಹೇಳಿರುವ ಅಯೋಧ್ಯೆಯ ಪರಮಹಂಸ ಆಚಾರ್ಯ ಶ್ರೀಗಳಿಗೆ ವ್ಯಂಗ್ಯಭರಿತ ತಿರುಗೇಟು ನೀಡಿದ್ದಾರೆ. ಇಂಥ ಬೆದರಿಕೆಗೆ ನಾನು ಹೆದರಲ್ಲ. 10 ಕೋಟಿ ರು. ಏಕೆ? ನನ್ನ ತಲೆ ಕತ್ತರಿಸಲು 10 ರು. ಬಾಚಣಿಕೆ ಸಾಕು ಎಂದಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಉದಯನಿಧಿ, ‘ತಮಿಳುನಾಡಿಗೆ ತಮ್ಮ ಜೀವವನ್ನೇ ಸವೆಸಿದ ಕರುಣಾನಿಧಿ (Karunanidhi) ಅವರ ಮೊಮ್ಮಗ ನಾನು. ಬೆದರಿಕೆಗಳಿಗೆ ಹೆದರುವವನಲ್ಲ. ನನ್ನ ತಲೆ ಕತ್ತರಿಸಲು 10 ರು. ಬಾಚಣಿಕೆ ಸಾಕು ಎಂದರು. ತಮಿಳಿನಲ್ಲಿ ತಲೆ ಬಾಚುವುದಕ್ಕೆ ತಲೆ ತೆಗೆಯುವುದು/ಕತ್ತರಿಸುವುದು ಎಂದೂ ಹೇಳುತ್ತಾರೆ. ಹೀಗಾಗಿ ಉದಯನಿಧಿ ಈ ಮಾತು ಹೇಳಿದ್ದಾರೆ.

Share
WhatsApp
Follow by Email