ವಿದ್ಯಾರ್ಥಿಗಳಂತೆ ರೈತರಿಗೂ ಉಚಿತ ಊಟ, ವಸತಿ ಜೊತೆಗೆ ಕೌಶಲ್ಯ ತರಬೇತಿ

ಬೆಂಗಳೂರು ಕೃಷಿ ವಿದ್ಯಾಲಯ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಹೇಗೆ ದೂರದ ಊರಿಂದ ಬಂದ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ(Hostel) ಉಳಿದುಕೊಂಡು ವಿದ್ಯಾಭ್ಯಾಸ ಮಾಡ್ತಾರೋ. ಹಾಗೆ ರೈತರು(Farmer) ಇನ್ಮುಂದೆ ಹಾಸ್ಟೆಲ್‌ನಲ್ಲಿ ಉಳಿದುಕೊಂಡು ಕೃಷಿ ಬಗ್ಗೆ ಅರಿಯಬಹುದು. ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಕೇಂದ್ರ ಸರ್ಕಾರದ ಪ್ರಾಯೋಜಕತ್ವದಲ್ಲಿ ಮೊದಲ ಬಾರಿಗೆ ರೈತ ಭವನ ನಿರ್ಮಾಣ ಮಾಡಲಾಗಿದೆ. ಬರೊಬ್ಬರಿ 280 ಕೋಟಿ ವೆಚ್ಚದಲ್ಲಿ ರೈತ ಭವನವನ್ನ ರೆಡಿ ಮಾಡಲಾಗಿದೆ. ಇಲ್ಲಿ ರೈತರಿಗೆ ಉಚಿತ ಊಟ, ವಸತಿ ಜೊತೆಗೆ ಕೃಷಿ(Agriculture) ಚಟುವಟಿಕೆಗೆ ಕೌಶಲ್ಯಾಭಿವೃದ್ಧಿ ತರಬೇತಿ (Training) ನೀಡಲಾಗುತ್ತೆ. ಕೌಶಲ್ಯಾಭಿವೃದ್ಧಿ ಅಭಿವೃದ್ಧಿ ಕೇಂದ್ರದಲ್ಲಿ 40 ಪ್ರತಿಕ್ಷಣಾರ್ಥಿಗಳಿಗೆ 14 ಕೊಠಡಿ ನೀಡಲಾಗುವುದು. 2 ಡಾರ್ಮಿಟರಿ, ತರಬೇತಿ ಸಭಾಂಗಣ, ಅಡುಗೆ ಮತ್ತು ಊಟದ ಕೋಣೆಯನ್ನ ರೈತ ಭವನದಲ್ಲಿ ನಿರ್ಮಿಸಲಾಗಿದೆ. ರಾಜ್ಯದ ಯಾವುದೇ ಜಿಲ್ಲೆಯಿಂದ ರೈತರು ಬಂದು ಇಲ್ಲಿ ತರಬೇತಿ ಪಡೆಯಬಹುದಾಗಿದೆ. ಈ ಹಾಸ್ಟೆಲ್ ನಲ್ಲಿ ಏಕಕಾಲಕ್ಕೆ 45 ರೈತರು ತಂಗಬಹುದಾಗಿದೆ.ಹಾಸ್ಲ್‌ನಲ್ಲಿದ್ದುಕೊಂಡು ಕೃಷಿ ಚಟುವಟಿಕೆಗಳು, ತಂತ್ರಜ್ಞಾನ, ಮಿಶ್ರ ಬೆಳೆಗಳು, ಪ್ರಾಂತ್ಯವಾರು ಬೆಳೆಗಳು ಮತ್ತು ಮಾರುಕಟ್ಟೆ ಸೇರಿದಂತೆ ಆಯಾ ವಿಚಾರದ ಕುರಿತು ತರಬೇತಿ ನೀಡಲಾಗುತ್ತೆ. 

Share
WhatsApp
Follow by Email