ಸರ್ವೆ ಮಾಡಿ ಯಾವ ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲುತ್ತೆ ಅಲ್ಲಿ ಸೀಟು ಕೊಡಿ: ಜಿ.ಟಿ.ದೇವೇಗೌಡ

ಕಾಂಗ್ರೆಸ್ ಕೂಡ ಇತರ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ. ಅದೆಲ್ಲವನ್ನು ಮನಸಲ್ಲಿ ಇಟ್ಟುಕೊಂಡು ತೀರ್ಮಾನ ಮಾಡಿ. ನರೇಂದ್ರ ಮೋದಿ ಪ್ರಧಾನಿ ಆಗಬೇಕಾ? ಬಿಜೆಪಿಯವರು ಸ್ವಾರ್ಥ ಬಿಡಿ. ಕೇಂದ್ರದ ಜೊತೆ ಮಾತಾಡಿ ತೀರ್ಮಾನ ಮಾಡಿ ಎಂದು ಜಿ.ಟಿ.ದೇವೇಗೌಡ ಹೇಳಿದ್ದಾರೆ.

ಮೈಸೂರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ -ಜೆಡಿಎಸ್(JDS) ಸೀಟು ಹಂಚಿಕೆ ವಿಚಾರವಾಗಿ ಕೇಸರಿ ನಾಯಕರುಗಳೇ ಎಡವಬೇಡಿ. ನಾವು ಸ್ವಂತ ಶಕ್ತಿಯಿಂದ ಸ್ವರ್ಧೆ ಮಾಡಿದ್ರೆ, 6 ಕ್ಷೇತ್ರಗಳಲ್ಲಿ ಗೆಲ್ಲಬಹುದು. 5 ಸಾವಿರ ವೋಟ್ ತಗೊಂಡ್ರು ಸರಿ, 28 ಕ್ಷೇತ್ರಕ್ಕೂ ಅಭ್ಯರ್ಥಿ ಹಾಕುತ್ತೇವೆ. ಮೈತ್ರಿ ಅನಿವಾರ್ಯ ಬಂದರೆ ಇಬ್ಬರೂ ಗೆಲ್ಲವುಂತೆ ನೋಡಿಕೊಳ್ಳಬೇಕು ಎಂದು ಜಿ.ಟಿ.ದೇವೇಗೌಡ(GT Devegowda) ಹೇಳಿದ್ದಾರೆ. ಸರ್ವೆ ಮಾಡಿ ಗೆಲ್ಲುವ ಆಧಾರದಲ್ಲಿ ಸೀಟು ಹಂಚಿಕೆ ಆಗಬೇಕು. ದೇವೇಗೌಡರು, ಕುಮಾರಸ್ವಾಮಿ ಹಾದಿಯಾಗಿ ನಮ್ಮೆಲ್ಲರ ಉದ್ದೇಶ ಈ ಚುನಾವಣೆಯಲ್ಲಿ ಕಾಂಗ್ರೆಸ್(Congress) ಸೋಲಿಸಬೇಕು ಎಂಬುದಾಗಿದೆ. ಸೋಲಿಸಬೇಕಾದ್ರೆ ನಾವು ಬಿಜೆಪಿ(BJP) ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಆದರೆ ಇನ್ನೂ ಸೀಟು ಹಂಚಿಕೆ ಆಗಿಲ್ಲ. ವರಿಷ್ಠರು ನಾಲ್ಕು ವಿಭಾಗದಲ್ಲಿ ಸಭೆ ಮಾಡಲು ಹೇಳಿದ್ದಾರೆ. ನಂತರ ಜಿಲ್ಲಾ ಮಟ್ಟದ ಸರ್ವೆ ಆಗಬೇಕು. ಅಲ್ಲಿ ನಮ್ಮ ಪಕ್ಷದ ಎಷ್ಟು ಜನ ಗೆಲ್ಲುತ್ತಾರೆ ತಿಳಿಸಬೇಕು. ನಂತರ ನಾನು ಮಾತಡುತ್ತೇನೆ ಅಂತ ಹೆಚ್‌.ಡಿ.ದೇವೇಗೌಡರು ಹೇಳಿದ್ದಾರೆ. ನಾವು ಸ್ವಂತ ಶಕ್ತಿಯಿಂದ ಸ್ವರ್ಧೆ ಮಾಡಿದ್ರೆ 6 ಕ್ಷೇತ್ರಗಳಲ್ಲಿ ಶಕ್ತಿ ಪ್ರದರ್ಶನ ಮಾಡುತ್ತೇವೆ. 5 ಸಾವಿರ ವೋಟ್ ತಗೊಂಡ್ರು ಸರಿ, 28 ಕ್ಷೇತ್ರಕ್ಕೂ ಅಭ್ಯರ್ಥಿ ಹಾಕುತ್ತೇವೆ ಎಂದು ಜಿಟಿಡಿ ಹೇಳಿದ್ದಾರೆ.

Share
WhatsApp
Follow by Email