600 ಪೊಲೀಸ್‌ ಬಂದೋಬಸ್ತ್‌ ನಡುವೆ ಎಪಿ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಧನ..!

ಮಧ್ಯರಾತ್ರಿ 12 ಗಂಟೆಯ ನಂತರ 600ಕ್ಕೂ ಹೆಚ್ಚು ಪೊಲೀಸರು ನಂದ್ಯಾಲ ತಲುಪಿದರು. ಪೊಲೀಸರು ಚಂದ್ರಬಾಬು ತಂಗಿದ್ದ ಆರ್ ಕೆ ಫಂಕ್ಷನ್ ಹಾಲ್ ಸುತ್ತುವರಿದಿದ್ದರು. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಚಂದ್ರಬಾಬು ತಂಗಿದ್ದ ಕ್ಯಾರಿವ್ಯಾನ್‌ಗೆ ಪೊಲೀಸರು ತೆರಳಿ ಬಂದಿಸಿದ್ದರು.

ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು (ಸೆ.9) ಮುಂಜಾನೆ ಸಿಐಡಿ ಪೊಲೀಸರು ಬಂಧಿಸಿದ್ದಾರೆ. ‘ಬಾಬು ಶ್ಯೂರಿಟಿ-ಭವಿಷ್ಯಕ್ಕೆ ಗ್ಯಾರಂಟಿ’ ಎಂಬ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ರಾತ್ರಿ ನಂದ್ಯಾಲದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಚಂದ್ರಬಾಬು ಭಾಗವಹಿಸಿದ್ದರು. ಬಳಿಕ ಆರ್.ಕೆ ಫಂಕ್ಷನ್ ಹಾಲ್‌ನಲ್ಲಿ ತಂಗಿದ್ದರು, ಬಿಗಿ ಪೊಲೀಸ್‌ ಬಂದೋಬಸ್ತ್ ನಡುವೆ ಅವರನ್ನು ಬಂಧಿಸಲಾಗಿದೆ.

ಮಧ್ಯರಾತ್ರಿ 12 ಗಂಟೆಯ ನಂತರ 600ಕ್ಕೂ ಹೆಚ್ಚು ಪೊಲೀಸರು ನಂದ್ಯಾಲ ತಲುಪಿದರು. ಪ್ರತಿ ಹಂತದಲ್ಲೂ ಚೆಕ್‌ಪೋಸ್ಟ್ ಮತ್ತು ಬ್ಯಾರಿಕೇಡ್‌ಗಳನ್ನು ಸ್ಥಾಪಿಸಲಾಗಿದೆ. ಎಸ್ಪಿ ರಘುವೀರ್ ರೆಡ್ಡಿ ನೇತೃತ್ವದಲ್ಲಿ ನೂರಾರು ಪೊಲೀಸರು ಚಂದ್ರಬಾಬು ನಾಯ್ಡು ತಂಗಿದ್ದ ಆರ್ ಕೆ ಫಂಕ್ಷನ್ ಹಾಲ್ ಸುತ್ತುವರಿದಿದ್ದರು. 

Share
WhatsApp
Follow by Email