ಹಿರಿಯ ಸಂಸದ ಶ್ರೀನಿವಾಸ ಪ್ರಸಾದ ಅಳಿಯ ಧೀರಜ್ ಪ್ರಸಾದ್ ಗೆ ಕಾಂಗ್ರೇಸ್ ಗಾಳ!

ಹಿರಿಯ ಸಂಸದ ಶ್ರೀನಿವಾಸ ಪ್ರಸಾದ ಅಳಿಯ ಧೀರಜ್ ಪ್ರಸಾದ್ ಗೆ ಕಾಂಗ್ರೇಸ್ ಗಾಳ!

ಬೆಂಗಳೂರು: ಗರಿಗೆದರಿದ ಲೋಕಸಭಾ ಚುನಾವಣಾ ಪೂರ್ವ ತಯಾರಿ ವಿವಿಧ ಪಕ್ಷಗಳ ಚಟುವಟಿಕೆಗಳು ತೀವ್ರ ಸ್ವರೂಪ ಪಡೆದಿದ್ದು, ಕಾಂಗ್ರೇಸ್ ನಿಂದ ಚಾಮರಾಜನಗರ ಕ್ಷೇತ್ರದ ಅಭ್ಯರ್ಥಿಯಾಗಿ ಧೀರಜ್ ಪ್ರಸಾದ್ ಅವರಿಗೆ ಆಹ್ವಾನವಿತ್ತಿದ್ದು ಚಾಮರಾಜನಗರ ಜಿಲ್ಲೆಯ ರಾಜಕಾರಣದಲ್ಲಿ ತೀವ್ರ ಸಂಚಲನ ಉಂಟಾಗಿದೆ. ಇಂದು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ರಾಜಕೀಯ ಬೆಳವಣಿಗೆಗಳನ್ನು ಚರ್ಚಿಸಿರುವುದು ಖಚಿತಪಡಿಸಿದರು.

ಈಗಾಗಲೇ ಸೋದರ ಮಾವನವರಾದ ಹಿರಿಯ ರಾಜಕಾರಣಿ ಶ್ರೀನಿವಾಸ ಪ್ರಸಾದ ಅವರ ಸೋದರಿ ಮಗನಾದ ಧೀರಜ್ ಪ್ರಸಾದ್ ಅವರು ಕಳೆದ ಅವಧಿಯಲ್ಲಿ ಬಿಜೆಪಿ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಯುವಕರನ್ನು ಆಕರ್ಷಿಸುವ ವ್ಯಕ್ತಿತ್ವ ಸೌಮ್ಯ ಸ್ವಭಾವ ಹಾಗೂ ನೇರಮಾತಿನ ವ್ಯಕ್ತಿತ್ವ ಉಳ್ಳ ಧೀರಜ್ ಪ್ರಸಾದ್ ಅವರಿಗೆ ಕಾಂಗ್ರೇಸ್ ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮಾಡಿದರೂ ಅಚ್ಚರಿ ಇಲ್ಲ. ರಾಜಕೀಯ ತಂತ್ರಗಾರಿಕೆಯಲ್ಲಿ ಯಾವಾಗ ಯಾವ ಬದಲಾವಣೆ, ಬೆಳವಣಿಗೆಗಳಾಗುತ್ತವೋ ಕುತೂಹಲಕಾರಿ ಎಂದೇ ಹೇಳಬಹುದು ಆದರೆ ಅತ್ಯುತ್ತಮ ನಾಯಕತ್ವ ಎನಿಸಿಕೊಂಡಿರುವ ಧೀರಜ್ ಪ್ರಸಾದ್ ಅವರಿಗೆ ಬೇಡಿಕೆ ಇರುವುದಂತೂ ನಿಜ.

Share
WhatsApp
Follow by Email