ಬ್ರೇಕಿಂಗ್ ನ್ಯೂಸ್ ಬೆಳಗಾವಿ ಲಾಕ್,ಡೌನ್ ,ಬೆಳಗಾವಿ ಪೋಲೀಸರಿಂದ ಕಾರ್ಯಾಚರಣೆ ಆರಂಭ 23/03/202023/03/20201 min read admin ಬೆಳಗಾವಿ-ಬೆಳಗಾವಿ ಪೋಲೀಸರು ನಗರದ ಮಾರುಕಟ್ಟೆ ಪ್ರದೇಶಗಳಲ್ಲಿ ಸರ್ಕಾರದ ಲಾಕ್ ಡೌನ್ ಆದೇಶವನ್ನು ಅನುಷ್ಠಾನಗೊಳಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಪಕ್ಕದ ಮಹಾರಾಷ್ಟ್ರ ದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ,ರಾಜ್ಯ ಸರ್ಕಾರ ಹಲವಾರು ನಗರಗಳು ಸೇರಿದಂತೆ ಬೆಳಗಾವಿ ನಗರವನ್ನು ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿದ್ದು ಇಂದು ಬೆಳ್ಳಂ ಬೆಳಿಗ್ಗೆ ಬೆಳಗಾವಿ ಪೋಲೀಸರು ಲಾಕ್ ಡೌನ್ ಕಾರ್ಯಾಚರಣೆ ಆರಂಭಿಸಿದ್ದಾರೆ. ಬೆಳಗಾವಿಯ ಖಡೇಬಝಾರ್ ನಿಂದ ಕಾರ್ಯಾಚರಣೆ ಆರಂಂಭಿಸಿರುವ ಪೋಲೀಸರು ಕಿರಾಣ,ಡೈರಿ,ಔಷಧಿ,ಹಣ್ಣು,ತರಕಾರಿ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ಮಳಿಗೆಗಳನ್ನು ಪೋಲೀಸರು ಬಂದ್ ಮಾಡಿಸುತ್ತಿದ್ದಾರೆ. ನಗರದ ಹೊಟೇಲ್ ಗಳಲ್ಲಿ ಸರ್ವಿಸ್ ಇರುವುದಿಲ್ಲ, ಕೇವಲ ಪಾರ್ಸಲ್ ತೆಗೆದುಕೊಂಡು ಹೋಗಲು ಅವಕಾಶವಿದೆ,ನಗರದ ಎಲ್ಲ ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳನ್ನು,ವೈನ್ ಶಾಪ್ ಗಳನ್ನು ,ಗಾರ್ಮೆಂಟ್,ಸೇರಿಂತೆ ಇತರ ಎಲ್ಲ ಅಂಗಡಿಗಳನ್ನು ,ಬಂದ್ ಮಾಡಿಸುವ ಕಾರ್ಯಾಚರಣೆ ಆರಂಭವಾಗಿದೆ. ನಿನ್ನೆಯ ದಿನ ಸರ್ಕಾರ,ಬೆಳಗಾವಿ ನಗರವನ್ನು ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿತ್ತು ಆದರೆ ಇಂದು ಬೆಳಿಗ್ಗೆ ಬೆಳಗಾವಿ ನಗರದಲ್ಲಿ ಎಲ್ಲ ಅಂಗಡಿಗಳು ತೆರೆದ ಕಾರಣ ಪೋಲೀಸರು ಸರ್ಕಾರದ ಆದೇಶ ಪಾಲನೆ ಮಾಡಿ ಎಲ್ಲ ಅನಗತ್ಯ ಅಂಗಡಿಗಳನ್ನು ಬಂದ್ ಮಾಡಿಸಿ ಜನರ ಜೀವನೋಪಾಯಕ್ಕಾಗಿ ಅತೀ ಅವಶ್ಯವಿರುವ ಅಂಗಡಿಗಳು ಮಾತ್ರ ತೆರೆದಿರುತ್ತವೆ. Share