ಕೊರೊನಾ ಭೀತಿ: ಸ್ಲಂ ಜನರಿಗೆ ವೈರಸ್ ಕುರಿತು ಮಾಹಿತಿ ನೀಡಿ ಮಾಸ್ಕ್, ಆಹಾರ ಧಾನ್ಯಗಳನ್ನು ನೀಡುತ್ತಿರುವ ಪಬ್ಲಿಕ್ ಹೀರೋ ಡಾ. ಪ್ರವೀಣ ಹಿರೇಮಠ್

ಕೊರೊನಾ ವೈರಸ್ ಕುರಿತು ಸಾರ್ವಜನಿಕರಿಗೆ ಜಾಗೃತಿ ಇರುತ್ತದೆ. ಆದ್ರೆ ಸ್ಲಂ ಏರಿಯಾದಲ್ಲಿ ಜೀವಿಸುವ ಜನರಿಗೆ ಮಾತ್ರ ಕೊರೊನಾ ವೈರಸ್ ಹರಡದಂತೆ ಯಾವ ಮುಂಜಾಗೃತೆ ಕ್ರಮಗಳನ್ನು ತಗೆದುಕೊಳ್ಳಬೇಕು ಅರಿವು ಇರೋದಿಲ್ಲ, ಹಾಗಾಗಿ
ಗುಡಿಸಲಿನಲ್ಲಿ ವಾಸಿಸುವ ಜನರಿಗೆ ಮಹಾಮಾರಿ ಕೊರೊನಾ ಸೋಂಕಿನ ಕುರಿತು ವಿಶ್ವಮಾನವ ಹಕ್ಕುಗಳ ಆಯೋಗ ಮಾಹಿತಿ ನೀಡಿ ಮಾಸ್ಕ್, ಸ್ಯಾನಿಟೈಸರ್ಸ್, ಆಹಾರ ಧಾನ್ಯ ಮತ್ತು ತರಕಾರಿ ವಿತರಿಸುವ ಮೂಲಕ ವಿಶ್ವಮಾನವ ಹಕ್ಕುಗಳ ಆಯೋಗ ಮಾನವೀಯತೆ ಮೆರೆದಿದೆ.
ಹೌದು ವಿಶ್ವದೆಲ್ಲೆಡೆ ಮರಣ ಮೃದಂಗ ಭರಿಸುತ್ತಿರುವ ಕೊರೊನಾ ವೈರಸ್ ಸ್ಲಂ ದಲ್ಲಿ ವಾಸಿಸುವ ಜನರಿಗೆ ಕೊರೊನಾ ವೈರಸ್ ಕುರಿತು ಯಾವುದೇ ಪ್ರಾಥಮಿಕ ಮಾಹಿತಿಯಿಲ್ಲ. ಇಲ್ಲದೆ ಎಂದಿನಂತೆ ಕಾಮನ್ ಆಗಿ ತಿರುಗಾಡುತ್ತಿದ್ದಾರೆ.
ಆದ್ದರಿಂದ ಸ್ಲಂ ಜನರ ನೆರವಿಗೆ ವಿಶ್ವಮಾನವ ಹಕ್ಕುಗಳ ಆಯೋಗ ಬಂದಿದೆ. ಬೆಳಗಾವಿಯ ಶ್ರೀನಗರ ಗಾರ್ಡನ್, ಶಾಹುನಗರ ಸೇರಿದಂತೆ ನಗರದ ಅನೇಕ ಕಡೆಗಳಲ್ಲಿ ಗುಡಿಸಲುಗಳಲ್ಲಿ ವಾಸಿಸುವ ಕುಟುಂಬಗಳಿಗೆ ಕೊರೊನಾ ಸೋಂಕಿನ ಕುರಿತು ಜಾಗೃತಿ ಮೂಡಿಸಿ ಮಾಸ್ಕ್, ಸ್ಯಾನಿಟೈಸರ್ಸ್, ಆಹಾರ ಧಾನ್ಯವನ್ನು ವಿತರಿಸುವ ಮೂಲಕ ಧೈರ್ಯ ತುಂಬುವ ಕೆಲಸವನ್ನು ವಿಶ್ವಮಾನವ ಹಕ್ಕುಗಳ ಆಯೋಗ ಮಾಡುತ್ತಿದೆ. ಇವರು ಮಾಡುತ್ತಿರುವ ಕಾರ್ಯಕ್ಕೆ ಪ್ರಜ್ಞಾವಂತ ಜನರು ವಿಶ್ವ ಮಾನವ ಹಕ್ಕುಗಳ ಆಯೋಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಪ್ರವೀಣ ಹಿರೇಮಠ ಪಬ್ಲಿಕ್ ಹೀರೋ ಎಂದು ಹೊಗಳುತ್ತಿದ್ದಾರೆ.
Share
WhatsApp
Follow by Email