ಪುರಸಭೆಯ ಅಧಿಕಾರಿಗಳಿಂದ ಮನೆಮನೆಗೆ ಹಾಲು ವಿತರಣೆ

ಗೋಕಾಕ : ಮಾಹಾಮಾರಿ ಕರೋನಾದಿಂದ ಅನ್ನದಾತ ರೈತರು‌ ಸಂಕಷ್ಟದಲ್ಲಿದ್ದ ಕಾರಣ ತರಕಾರಿ‌ ಹಾಲುಗಳಂತಹ ವಸ್ತುವನ್ನು ಬೀದಿಗೆ ಚೆಲ್ಲುತ್ತಿರುವುದು ಒಂದು ಕಡೆಯಾದರೆ ಹಸಿವಿನಿಂದ ಬಳಲುತ್ತಿರುವ ಜನ ಇನ್ನೊಂದು ಕಡೆ,
ಹೀಗಿರುವಾಗ ಗೋಕಾಕ ತಾಲೂಕಿನ ಕೊಣ್ಣೂರ ಪುರಸಭೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಅಂಬೇಡ್ಕರ ನಗರದ ನಿವಾಸಿಗಳಿಗೆ ಸದಸ್ಯರನ್ನೊಳಗೊಂಡು ಆಯಾ ಸದಸ್ಯರ ವಾರ್ಡಿಗೆ ತೆರಳಿ ಹಸಿವು ನೀಗಿಸಲು ಕೆ,ಎಮ್,ಎಪ್, ಹಾಲನ್ನು ಪ್ರತಿಯೊಂದು ಮನೆಗೆ ತೆರಳಿ ಹಾಲು ವಿತರಿಸಿದರು,
ಇದರ ಜೊತೆಯಲ್ಲಿ‌ ಮನೆಯಿಂದ ಯಾರು ಹೊರಗೆ ಬರದಂತೆ ತಿಳಿಸಿ ಕರೋನಾ ವೈರಸ್ ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿ ಗುಂಪಾಗಿ ಸೇರದೆ ಸಾಮಾಜಿಕ ಅಂತರ ಕಾಯ್ದು ಕೊಳ್ಳಲು ತಿಳಿಸಿದರು
ಈ ಸಂದರ್ಭದಲ್ಲಿ ಪುರಸಭೆಯ ಕಿರಿಯ ಆರೋಗ್ಯ ನೀರಿಕ್ಷರಾದ ಬಾಳನಾಯಕ ಕುಮರೇಶಿ, ಸಮುದಾಯ ಸಂಘಟಕರಾದ ಮಲ್ಲಪ್ಪ ಪೇದನ್ನವರ ಸಿಬ್ಬಂದಿಗಳಾದ ರಮೇಶ ಭಾವನೆ, ಹಿರಿಯ ಸದಸ್ಯರಾದ ಪ್ರಕಾಶ ಕರನಿಂಗ,ವಿನೋದ ಕರನಿಂಗ,ಕುಮಾರ ಕೊಣ್ಣೂರ ,ಮುಖಂಡರಾದ ದನ್ಯಕುಮಾರ ಮೇಗೇರಿ,ಚಿನ್ನ ಕಾಡು, ಸುಧೀರ ಹುಲ್ಲೋಳಿ, ಸಿಬ್ಬಂದಿಗಳು, ಸದಸ್ಯರು ಆರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾದಿಕಾರಿ ಬಾಲನಾಯಕ ಲಮಾನಿ ಜೊತೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು
Share
WhatsApp
Follow by Email