ಜಿಲ್ಲೆಯಲ್ಲಿ ಮೊದಲ ಬಾರಿಗೆ 3 ಜನರಿಗೆ ಕರೊನಾ ಸೋಂಕು ತಗುಲಿರುವದು ದೃಡಪಟ್ಟಿದೆ : ಲಕ್ಷ್ಮಣ ಸವದಿ

ಅಥಣಿ: ಕರೊನಾ ವೈರಸ್ ದೇಶಾದ್ಯಾಂತ ಹರಡುತ್ತಿರುವ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಬಾರಿಗೆ 3 ಜನರಿಗೆ ಕರೊನಾ ಸೋಂಕು ತಗುಲಿರುವದು ದೃಡಪಟ್ಟಿರುವ ಕಾರಣಕ್ಕೆ ಅಥಣಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತುರ್ತು ತಾಲೂಕಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಡಿಸಿಎಂ ಲಕ್ಷ್ಮಣ ಸವದಿ ಅವರು ಸದ್ಯ ಕರೊನಾ ವೈರಸ್ ಹರಡುತ್ತಿರುವ ಬಗ್ಗೆ ಹಾಗೂ ಲಾಕ್ ಡೌನ್ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಮೊದಲ ಬಾರಿಗೆ ಬೆಳಗಾವಿ ಜಿಲ್ಲೆಯಲ್ಲಿ ಮೂರು ಜನರಿಗೆ ಕರೋನ ಸೋಂಕು ತಗಲಿರುವದು ದೃಡಪಟ್ಟಿದೆ. ಎರಡನೇ ಹಂತದ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಡಿಸಿಎಂ ಸವದಿ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಸರಕಾರ ನೀಡಿರು ಲಾಕ್ ಡೌನ ಆದೇಶವನ್ನು ಪಾಲಿಸಬೇಕು. ದೇಹಲಿ ಪ್ರಕರಣ ನಮ್ಮ ರಾಜ್ಯದಲ್ಲಿನ 4 ನೂರಕ್ಕು ಹೆಚ್ಚು ಜನರು ದಾರ್ಮಿಕ ಸಭೆಯಲ್ಲಿ ಭಾಗಿಯಾಗಿರುವ ಮಾಹಿತಿ ಸಿಕ್ಕಿದೆ. ಅವರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 67 ಜನರನ್ನು ಇಗಾಗಲೆ ಗುರಿತುಸಲಾಗಿದೆ. ದೇಹಲಿಗೆ ಹೋಗಿ ಬಂದವರಲ್ಲೇ ಈಗ ಮೂರು ಜನರು ಪಾಜೀಟಿವ್ ವರದಿಗಳು ಲಭ್ಯವಾಗಿವೆ ಎಂದು ತಿಳಿಸಿದರು.
ರಾಜ್ಯದ ರೈತರ ದ್ರಾಕ್ಷಿ, ಡಾಳಂಬರಿ, ಕೃಷಿ ಉತ್ಪನ್ನಗಳನ್ನು ನೆರೆಯ ಮಹಾರಾಷ್ಟç ರಾಜ್ಯಕ್ಕೆ ಅಂತರಾಜ್ಯ ರಸ್ತೆಗಳನ್ನು ಮುಕ್ತ ಮಾಡುವಂತೆ ಎರಡು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಜೊತೆಗೆ ಸಭೆ ನಡೆಸಿ ಅಂತರರಾಜ್ಯ ಕೃಷಿ ಉತ್ಪನ್ನಗಳನ್ನು ಸಾಗಿಸಲು ಅನಕೂಲ ಕಲ್ಪಿಸಲಾಗದೆ. ಪೊಲೀಸ್ ಹಾಗೂ ಕೃಷಿ ಅಧಿಕಾರಿಗಳ ಜೊತೆಗೆ ಮಾತನಾಡಿದ್ದು ರೈತರ ಕೃಷಿ ಉತ್ಪನ್ನಗಳನ್ನು ಸಾಗಿಸಲು ಯಾವುದೆ ತೊಂದರೆ ಆಗದಂತೆ ಕ್ರಮ ವಹಿಸಿಲು ಸೂಚಿಸಲಾಗಿದೆ. ನೆರೆಯ ಕೆರಳ ರಾಜ್ಯದ ಗಡಿ ರಸ್ತೆ ಮುಕ್ತ ಮಾಡಲು ಅಡಚನೆ ಇದೆ. ಇದು ಇಗಾಗಲೆ ಕೋರ್ಟನಲ್ಲಿ ವ್ಯಾಜ್ಯ ಇರುವದರಿಂದ ಏನು ಮಾಡಲು ಸಾದ್ಯವಿಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದರು.
ನಮ್ಮ ದೇಶದಲ್ಲಿ ಕರೊನಾ ವೈರಸ್ ಹರಡಿರುವದು ಕಡಿಮೆ ಇದೆ ಉಳಿದ ದೇಶಗಳಿಗೆ ವ್ಯಾಪಿಸಿರುವದನ್ನು ಗಮನಿಸಿದರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡಿರುವ ಲಾಕ್ ಡೌನ್ ಕ್ರಮದಿಂದಾಗಿ ಇದು ಸಾದ್ಯವಾಗಿದೆ. ಅದರಲ್ಲಿ ಇಡಿ ದೇಶದಲ್ಲಿ ನಮ್ಮ ಕರ್ನಾಟಕ ರಾಜ್ಯ 9 ನೇ ಸ್ಥಾನದಲ್ಲಿದೆ. ಅಧಿಕಾರಿಗಳು ಸಹ ಯುದ್ದೋಪಾಧಿಯಲ್ಲಿ ತಮ್ಮ ಕರ್ತವ್ಯಗಳನ್ನು ಮಾಡುತ್ತಿದ್ದಾರೆ. ಇನ್ನು ಕೆಲವು ಕಡೆ ಆಶಾ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಹಲ್ಲೆಗಳನ್ನು ರಾಜ್ಯ ಸರಕಾರ ಗಂಬೀರವಾಗಿ ಪರಿಗಣಿಸಿದ್ದು, ಎಷ್ಟೇ ಪ್ರಭಾವಿ ವ್ಯಕ್ತಿ, ಅಥವಾ ಯಾವುದೆ ದರ್ಮದ ವ್ಯಕ್ತಿ ಇಂತಹ ಕೃತ್ಯಗಳನ್ನು ಮಾಡಿದರೆ ಅಂತಹ ವ್ಯಕ್ತಿಗಳ ಮೇಲೆ ಪೊಲೀಸ್ ಇಲಾಖೆ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಲು ಮುಕ್ತ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು
Share
WhatsApp
Follow by Email