ಸಾಮಾಜಿಕ ಅಂತರದಲ್ಲಿ ಮಾರಾಟ ಹಾಗೂ ಖರಿದಿ ಮಾಡಲು ರಕ್ಷಾ ರೇಖೆಗಳನ್ನು ಹಾಕಲಾಯಿತು.

ಮುದ್ದೇಬಿಹಾಳ: ತಾಲೂಕಿನ ವಿವಿಧ ಗ್ರಾಮಗಳಿಂದ ರೈತರು ತಾವು ಬೆಳೆದ ತರಕಾರಿಯನ್ನು ಹಾರಾಜಿನ ಮೂಲಕ ಮುಕ್ತವಾಗಿ ಮಾರಾಟ ಮಾಡಲು ಪಟ್ಟಣದ ಎಪಿಎಂಸಿ ವ್ಯಾಪ್ತಿಯ ಜಾನುವಾರು ಸಂತೆ ಬಜಾರದ ಖಾಲಿ ಮೈದಾನ ಹಾಗೂ ಬಸವ ನಗರ ಸಾರ್ವಜನಿಕ ಮೈದಾನಗಳಲ್ಲಿ ಪುರಸಭೆ ಮುಖ್ಯಾಧಿಕಾರಿ ಜಿ ಎಚ್ ಕಾಸೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಸಾಮಾಜಿಕ ಅಂತರದಲ್ಲಿ ಮಾರಾಟ ಹಾಗೂ ಖರಿದಿ ಮಾಡಲು ರಕ್ಷಾ ರೇಖೆಗಳನ್ನು ಹಾಕಲಾಯಿತು.
ಈ ವೇಳೆ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಜಿ ಎಚ್ ಕಾಸೆಯವರು ಈಗಾಗಲೇ ಎಲ್ಲೇಡೆ ಸರಕಾರ ಲಾಕ್ ಡೌನ ಆದೇಶ ನೀಡಿದೇ ಇಂತಹ ಸಂದರ್ಭದಲ್ಲಿ ಸಾರ್ವಜನಿಕರಿಗೆ ನಿತ್ಯ ತರಕಾರಿ ಸೇರಿದಂತೆ ಜೀವನಾಂಶಕ ವಸ್ತುಗಳನ್ನು ಒದಗಿಸುವಚಿತೆ ಸರಕಾರದ ಆದೇಶವಿರುದರಿಂದ.
ತಾಲೂಕಿನ ಬಹುತೇಕ ರೈತರು ವಿವಿಧ ತರಕಾರಿ ಬೆಳೆದಿದ್ದಾರೆ ಆದರೇ ಲಾಕ್ ಡೌನ ವೇಳೆ ಪಟ್ಟಣಕ್ಕೆ ಬರಲು ಸಾಧ್ಯವಾಗದೇ ಲಕ್ಷಾಂತರ ರೂಪಾಯಿ ಹಾಳಗಿ ಹೋಗುತ್ತಿದೆ ಎಂಬ ಕೂಗು ಕೇಳಿಬರುಯತ್ತಿರುವ ಹಿನ್ನೇಯಲ್ಲಿ ಸಧ್ಯ ಪಟ್ಟಣದ ಎರಡು ಕಡೆ ದಲ್ಲಾಳಿಗಳ ಮೂಲಕವೋ ಅಥವಾ ಖರಿದಿದಾರರಿಗೋ ಹರಾಜಿನ ಮೂಲಕ ರೈತರು ನೇರವಾಗಿ ಬಂದು ತಾವು ಬೆಳೆದ ತರಕಾರಿಯನ್ನು ಮಾರಾಟ ಮಾಡಲು ಮುಕ್ತ ಅವಕಾಶ ಕಲ್ಪಿಸುವ ಉದ್ದೇಶ ಇದಾಗಿದೆ.
ಈ ಮೊದಲಿದ್ದ ಪಟ್ಟಣದ ಇಂದಿರಾ ವೃತ್ತದಲ್ಲಿ ತರಕಾರಿ ಮಾರಾಟ ಬಜಾರದಲ್ಲಿಯೇ ರೈತರು ತರಕಾರಿ ತಂದು ದಲ್ಲಾಳಿಗಳ ಮೂಲಕ ಹರಾಜು ಮಾಡಿ ಮಾರಾಟ ಮಾಡಲಾಗುತ್ತಿತ್ತು. ಆದರೇ ಸದ್ಯ ಅಲ್ಲಿಯೇ ಮಾರಾಟ ಮಾಡಿದರೇ ಜನಜಂಗುಳಿ ಹೆಚ್ಚಾಗುತ್ತದೆ ಇದರಿಂದಾಗಿ ಸರಕಾರದ ಆದೇಶ ಪಾಲನೆಯಾಗುವುದಿಲ್ಲ ಎಂಬ ಕಾರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಹರಾಜು ನಡೆಸಲು ಮಾತ್ರ ಈ ವ್ಯವಸ್ಥೆ ಕೈಗೊಳ್ಳಲಾಗಿದೆ. ಇಲ್ಲಿ ಹರಾಜು ಮೂಲಕ ತರಕಾರಿ ಖರಿದಿಸಿ ಒಂದೆ ಕಡೆ ನಿಲ್ಲಿಸಿ ವ್ಯಾಪಾರ ಮಾಡುವಂತೆ ಇಲ್ಲ ಬದಲಾಗಿ ಪಟ್ಟಣದ ಎಲ್ಲ ವಾರ್ಡುಗಳಲ್ಲಿ ತಳ್ಳುವ ಗಾಡಿಯ ಮೂಲಕ ತರಕಾರ ಮಾಡಬಹುದಾಗಿದೆ ಇದರಿಂದ ಗುಂಪು ಗುಂಪಾಗಿ ನಿಲ್ಲುವುದನ್ನು ತಪ್ಪಿಸಬಹುದಾಗಿದೆ ಎಂದರು
Share
WhatsApp
Follow by Email