ವರದಿ : ಮೀರಾ.ಎಲ್.ತಟಗಾರ ಮಹಾಲಿಂಗಪುರ : ಸಮೀಪದ ರನ್ನಬೆಳಗಲಿಯ ಬಂದಲಕ್ಷ್ಮೀ ಜಾತ್ರಗೆ ಬಂದ ಜೇಕು, ತೊಟ್ಟಿಲು, ಕುದುರೆ ಸವಾರಿ, ಮಕ್ಕಳ ಜಂಪಿAಗ್ ಸಲಕರಣೆಗಳ ಮಾಲಕರು ಮತ್ತು ಪರಿವಾರ ಲಾಕ್ ಡೌನ್ ನಿಂದ ಲಾಕ್ ಆಗಿ ತುತ್ತು ಕೂಳಿಗೂ ಪರದಾಡುವಂತಾಗಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರನ್ನ ಬೆಳಗಲಿ ಗ್ರಾಮದಲ್ಲಿ ಯುಗಾದಿಯ ನಂತರ ನಡೆಯುವ ಜಾತ್ರೆಯಲ್ಲಿ ಎಲ್ಲ ವಯೋಮಾನದವರ ಮೋಜು ಮಸ್ತಿಗಾಗಿ ದೊಡ್ಡ ತೊಟ್ಟಿಲು ಜೇಕು, ಕುದುರೆ ಸವಾರಿ, ಮಕ್ಕಳ ಜಂಪಿಂಗ್ ಹೀಗೆ ಹಲವಾರು ತರಹದ ಮನರಂಜನೆಯ ಸಹಸ್ರ ಸಹಸ್ರ ರೂಪಾಯಿಗಳ ಬಾಡಿಗೆ ನೀಡಿ ಪರಿಕರಗಳನ್ನು ಹೊತ್ತ ಚಡಚಣ ಊರಿನ ಗಾಳೆಪ್ಪ ಶಾಮರಾವ ಮಾಳವೆ ಅವರ ಒಟ್ಟು 15 ಜನರ ಪರಿವಾರ ಬಂದಿಳಿಯಿತು. ಹೊಟ್ಟೆ ಹೊರೆಯುವ ಹಾಗೂ ಹೋಗು ಬರುವ 80 ಸಾವಿರ ಬಾಡಿಗೆ ಸಮೇತ ಮಾಡಿದ ಸಾಲ, ಬಡ್ಡಿ ಹರಿಯುವ ಲೆಕ್ಕಾಚಾರವನ್ನು ಹಾಕುತ್ತಾ ಈ ಜಾತ್ರೆ ತರುವಾಯ ಸೈದಾಪೂರ ಫ್ಯಾಕ್ಟರಿ, ಯಾದವಾಡ, ಗುಡೂರ ಜಾತ್ರೆಗಳನ್ನು ಮತ್ತು ಗಲಗಲಿ ಉರುಸ್ ಮುಗಿಸಿಕೊಂಡು ಹೋಗುವ ಲೆಕ್ಕಾಚಾರ ಹಾಕಿಕೊಂಡು ಬಂದ ಪರಿವಾರಕ್ಕೆ ತಾನೊಂದು ಬಗೆದರೆ ದೈವ ಒಂದು ಬಗೆಯಿತು ಎನ್ನುವಂತಾಯಿತು. ವಿಧಿಯ ವಿಪರ್ಯಾಸವೆನೋ ಕೆಲ ದಿವಸಗಳಲ್ಲಿಯೇ ವಿಶ್ವವನ್ನೆ ನಲುಗಿಸಿದ ಕೊರೊನಾ ರೋಗ ದೇಶದಲ್ಲಿ ಉಲ್ಬಣಗೊಳ್ಳುತ್ತಿರುವ ಕಾರಣ ಅನಿವಾರ್ಯವಾಗಿ ಲಾಕ್ ಡೌನ್ ಜಾರಿಯಾಗಿ ತಿಂಗಳುಗಳು ಕಳೆಯುತ್ತಿವೆ. ಪರಿವಾರದಲ್ಲಿ ಮಾಡಿದ ಸಾಲ ಹಾಗೂ ಬಡ್ಡಿಯ ಆತಂಕ ಮನೆ ಮಾಡಿದ್ದು ನಮ್ಮ ಮುಂದಿನ ಭವಿಷ್ಯ ಹೇಗಪ್ಪ ಎಂದು ಚಿಂತಾಕ್ರಾಂತರಾಗಿದ್ದಾರೆ. ತಿಂಗಳುಗಟ್ಟಲೆ ಲಕ್ಷಾಂತರ ಬೆಲೆ ಬಾಳುವ ಸಾಮಾನುಗಳು ಬಿದ್ದಲ್ಲಿಯೆ ಬಿದ್ದು ತುಕ್ಕು ಹಿಡಿದು ಮತ್ತು ಕೆಲಸವಿಲ್ಲದೆ ಮತ್ತಷ್ಟು ಹಣ ಕಳೆದುಕೊಳ್ಳುವ ಭೀತಿ ಕೂಡ ಆರಂಭವಾಗಿದೆ. ಅತ್ತ ಹೋಗಲು ಬಾರದು ಇತ್ತ ಇರಲು ಬಾರದು ಎಂಬ ತ್ರಿಶಂಕು ಸ್ಥಿತಿಯಲ್ಲಿ ನರಳುತ್ತಿದ್ದಾರೆ. ಇದೇ ರೀತಿ ಲಾಕ್ ಡೌನ್ ಮುಂದುವರೆದರೆ ನಮ್ಮ ಪಾಡು ಹೇಳ ತೀರದು. ಇಲ್ಲಿಯ ಜನ ನಮಗೆ ಹೋಗಲು ಅನುವು ಮಾಡಿ ಕೊಟ್ಟರೆ ನಮ್ಮ ಗೂಡು ಸೇರುತ್ತೇವೆ ಎಂದು ಮಗ ಶಿವಾಜಿ ಹೇಳುತ್ತಾರೆ. ತಿಂಗಳುಗಳು ಕಳೆದಿವೆ ಕೈಲಿಯಿದ್ದ ಅಲ್ಪಸ್ವಲ್ಪ ಹಣ ಆರಂಭದ ದಿನಗಳಲ್ಲಿಯೇ ಮುಗಿದು ಹೋಗಿದೆ.ಊಟಕ್ಕಾಗಿ ಕೆಲ ಜನ ಮನೆ ಮನೆಗೆ ಹೋಗಿ ಅಕ್ಕಿ,ಕಾಯಿಪಲ್ಲ್ಯೆ,ರೊಟ್ಟಿ,ಹೈನು ಇನ್ನಿತರೆ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ಮತ್ತು ಪಟ್ಟಣ ಪಂಚಾಯಿತಿಯವರೂ ಕಿರಾಣ ಸಾಮಗ್ರಿಗಳನ್ನು ಕೊಟ್ಟು ಸಹಾಯ ಮಾಡಿದ್ದಾರೆ. ವಿಶೇಷವೆನೆಂದರೆ ಹೆಣ್ಣು ಮಕ್ಕಳು ಹುಣ ್ಣಮೆ,ಅಮಾವಾಸ್ಯೆಯಂದು ಗುಡಿಗೆ ನೈವೇದ್ಯಗೆಂದು ತರುವ ತುಪ್ಪ ಸಮೇತ ಹೋಳಗಿ, ಚಪಾತಿ, ಕಡುಬು,ಅನ್ನ, ಸಾರು ಕೊಟ್ಟು ನಮ್ಮ ಹಸಿವು ನೀಗಿಸುತಿದ್ದಾರೆ ಪುಣ್ಯಾತ್ಮರು ಎಂದು ಜೇಕ್ ಮಾಲಿಕ ಗಾಳಪ್ಪ ಊರಿನ ಜನತೆಯ ಉಪಕಾರ ನೆನೆಯುತ್ತಾರೆ. ಬಾಕ್ಸ್ ನ್ಯೂಸ್ : ಶಿವಾಜಿ ಗಾಳೆಪ್ಪ ಮಾಳವೆ , ಮಾಲಿಕರು. ಊರಿನ ಜನ ನೀಡಿದ ಆಹಾರ ಪದಾರ್ಥಗಳು ಮುಗಿದುಹೋಗಿವೆ. ನಮ್ಮ ಕೈಯಲ್ಲಿಯೂ ಕೂಡ ಹಣ ಖಾಲಿಯಾಗಿದ್ದು ಮತ್ತೆ ಮತ್ತೆ ಊರಿನ ಜನತೆಯನ್ನು ಕೇಳಿ ಅವರಿಗೆ ಭಾರವಾಗುವುದಕ್ಕೆ ನಮ್ಮ ಮನಸ್ಸು (ಸ್ವಾಭಿಮಾನ) ಒಪ್ಪುತ್ತಿಲ್ಲ.ಆದಷ್ಟು ಬೇಗ ನಮ್ಮೂರಿಗೆ ಹೋಗಲು ಜನತೆ ಸಹಕರಿಸಿದರೆ ಸಾಕು.ಸಣ್ಣ ಮಕ್ಕಳು ಊರ ಕಡೆಗೆ ನೆನಪು ಮಾಡಿ ಅಳುತ್ತಿವೆ. ಬಾಕ್ಸ್ ನ್ಯೂಸ್ : ವಿಧ್ಯಾಧರ ಕಲಾದಗಿ. ಮುಖ್ಯಾಧಿಕಾರಿ ಬೆಳಗಲಿ ಪಟ್ಟಣ ಪಂಚಾಯತ. ಈಗಾಗಲೆ ಆ ಪರಿವಾರಕ್ಕೆ ಅಕ್ಕಿ ಹಾಗೂ ಕಿರಾಣ ಸಾಮಾನುಗಳನ್ನು ಒದಗಿಸಿದ್ದೇವೆ.ಇನ್ನೂ ಅವರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಆಹಾರ ಪದಾರ್ಥಗಳನ್ನು ಒದಗಿಸಲಾಗುವುದು.
ರಾಯಬಾಗ : ಕೊರೋನಾ ವೈರಸ್ ಸಲುವಾಗಿ ನಿರಂತರ ಸೇವೆ ಸಲ್ಲಿಸುತ್ತಿರುವ ತಾಲೂಕಿನ ಬಾವನ ಸೌಂದತ್ತಿ ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಎಲ್ಲಾ ಅಂಗನವಾಡಿ, ಆಶಾಕಾರ್ಯಕರ್ತರು, ಆರಕ್ಷಕ ಸಿಬ್ಬಂದಿ, ಹಾಗೂ ಗ್ರಾಮ ಪಂಚಾಯ್ತಿ ಸಿಬ್ಬಂದಿಗಳನ್ನು ಬುಧವಾರ ಕಾಂಗ್ರೇಸ್ ಪಕ್ಷದ ಮುಖಂಡ ಮಹಾವೀರ ಮೊಹಿತೆ ಹಾಗೂ ಜಿ.ಪಂ.ಸದಸ್ಯೆ ಜಯಶ್ರೀ ಮೊಹಿತೆ ಅವರ ನೇತೃತ್ವದಲ್ಲಿ ಸತ್ಕರಿಸಿ ಅಭಿನಂದಿಸಲಾಯಿತು. ಬಾವನಸೌAದತ್ತಿ ಜಿಲ್ಲಾ ಪಂಚಾಯ್ತಿಯ ವ್ಯಾಪ್ತಿಯ ಬಾವನಸೌಂದತ್ತಿ, ದಿಗ್ಗೇವಾಡಿ,ಭಿರಡಿ, ಜಲಾಲಪೂರ, ಬೆಕ್ಕೇರಿ ಗ್ರಾಮಗಳಲ್ಲಿ ಕೊರೋನಾ ವೈರಸ್ ಸಲುವಾಗಿ ನಿರಂತರ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಹಾಗೂ ಆಶಾಕಾರ್ಯಕರ್ತರಿಗೆ ಶಾಲುಹೊದಿಸಿ, ಸಾರಿನೀಡಿ ಹಾಗೂ ಗೌರವಧನ ಕೊಟ್ಟು ವಿಶೇಷವಾಗಿ ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡ ಮಹಾವೀರ ಮೊಹಿತೆ ಅವರು ಮಾತನಾಡಿ ಕೊರೋನಾ ರೋಗವು ಚೀನಾ ದೇಶದಿಂದ ಬಂದು ಜಗತ್ತಿನ ಎಲ್ಲಾ ಕಡೆಗೆ ಹಬ್ಬುತ್ತಿದೆ ಇದರ ಒಂದು ನಿಯಂತ್ರಣಕ್ಕಾಗಿ ಹಗಲಿರುಳು ದುಡಿಯುತ್ತಿರುವ ಅಂಗನವಾಡಿ ಹಾಗೂ ಆಶಾಕಾರ್ಯಕರ್ತರ ಸೇವೆ ಅನನ್ಯವಾಗಿದೆ ಗ್ರಾಮ ಹಾಗೂ ಪಟ್ಟಣಗಳಲ್ಲಿ ಈ ಕಾರ್ಯಕರ್ತರ ಸೇವೆ ಬಹಳ ಅತೀ ಅವಶ್ಯವಾಗಿದೆ, ಕಾರ್ಯಕರ್ತೆಯರು ತಮ್ಮ ಜೀವನದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿದ್ದಾರೆ ಅವರಿಗೆ ಒಂದು ಆತ್ಮಸ್ಥರ್ಯ ತುಂಬುವ ಕೆಲಸವನ್ನು ನಾವೆಲ್ಲರೂ ಮಾಡೋಣ ಎಂದು ಹೇಳಿದರು. ಬಾವನಸೌಂದತ್ತಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಸುಮಾರು ನೂರು ಜನ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಸತ್ಕರಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವ ವೀರಕುಮಾರ ಪಾಟೀಲ, ಜಿ.ಪಂ.ಸದಸ್ಯೆ ಜಯಶ್ರೀ ಮೊಹಿತೆ, ಜಿಲ್ಲಾ ಕಾಂಗ್ರೇಸ್ ಕಮೀಟಿ ಅಧ್ಯಕ್ಷ ಲಕ್ಷö್ಮಣರಾವ ಚಿಂಗಳೆ, ಧೂಳಗೌಡ ಪಾಟೀಲ, ಬಿ.ಎನ್.ಬಂಡಗಾರ,ಗಣೇಶ ಮೊಹಿತೆ, ರಾಜು ಶಿರಗಾಂವೆ, ಸುಭಾಷ ಕೋಠಿವಾಲೆ, ಚಂದು ಬುರುಡ, ದಿಲೀಪ ಜಮಾದರ, ರಮೇಶ ಬೆಳಗಲಿ ಸೇರಿದಂತೆ ಅನೇಕರು ಇದ್ದರು.
ಜಮಖಂಡಿ: ಅಸ್ತಮಾದಿಂದ ಬಳಲುತ್ತಿದ್ದ ೩೫ ವರ್ಷದ ವ್ಯಕ್ತಿ ಸಾವು.. ಮುಂಜಾಗ್ರತಾ ಕ್ರಮವಾಗಿ ವ್ಯಕ್ತಿಯ ಗಂಟಲು ದ್ರವ ಪರೀಕ್ಷೆಗೆ ಕಳಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು.. ಜಮಖಂಡಿ ನಗರದ ವ್ಯಕ್ತಿ ಮೃತಪಟ್ಟವನು.. ಕಳೆದ ನಾಲ್ಕು ತಿಂಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ.. ಜಮಖಂಡಿ ತಾಲ್ಲೂಕಾಸ್ಪತ್ರೆಗೆ ಇವತ್ತೆ ದಾಖಲಾಗಿದ್ದ.. ಅತಿ ಮದ್ಯವ್ಯಸನಿಯಾಗಿದ್ದ ವ್ಯಕ್ತಿ.. ಕೊರೊನಾದ ಯಾವುದೇ ಲಕ್ಷಣಗಳಿರಲಿಲ್ಲ.. ಕೋವಿಡ್ ನಿಯಮಾವಳಿ ಪ್ರಕಾರ ವೇ ಅಂತ್ಯ ಸಂಸ್ಕಾರ ಮಾಡಿದ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ನಗರಸಭೆ ಸಿಬ್ಬಂದಿಗಳು..
ಜಮಖಂಡಿ: ಆರೋಗ್ಯ ಇಲಾಖೆ ವತಿಯಿಂದ ಕೋವಿಡ-19 ಆಪತ್ತು ನಿರ್ವಹಣಾ ಸೊಂಕಿನ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯನಿರ್ವಹಿಸಲು ತೆರಳಿದ ಆಶಾ ಕಾರ್ಯಕರ್ತೆಯರಿಗೆ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ ಮತ್ತು ಅನುಚಿತವಾಗಿ ವರ್ತಿಸಿ ಕಾರ್ಯಕ್ಕೆ ಅಡ್ಡಿಪಡಿದ ಇಬ್ಬರು ಯುವಕರ ಮೇಲೆ ಪ್ರಕರಣ ಧಾಖಲಾಗಿರುವ ಘಟಣೆ ನಡೆದಿದೆ. ನಗರದ ಗಿರೀಶ ನಗರ ಮತ್ತು ರಾಮೇಶ್ವರ ಕಾಲನಿಯಲ್ಲಿ ಮನೆ ಮನೆಗಳಿಗೆ ತೆರಳಿ ಜಾಗೃತಿ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿರುವ ಆಶಾ ಕಾರ್ಯಕರ್ತೆ ಸವಿತಾ ಸಿದ್ರಾಮ ಹೊಳೆಪ್ಪಗೊಳ ಅವರಿಗೆ ಅವಾಚ್ಯ ಶಬ್ದಗಳ ನಿಂದನೆ ಮತ್ತು ಅನುಚಿತವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಆರೋಪಿಗಳಾದ ಅಬ್ದುಲರಜಾಕ್ ಲಾಲಸಾಬ. ಗೋಮರ್ಶೆ, ಚಾಂದಸಾಬ ಲಾಲಸಾಬ. ಗೋಮರ್ಶೆ ಇಬ್ಬರನ್ನು ಪೋಲಿಸರು ವಶಕ್ಕೆ ಪಡೆದು ಪ್ರಕರಣ ಧಾಖಲಿಕೊಂಡಿದ್ದಾರೆ. ಘಟನೆಯ ವಿವರ: ಆಶಾ ಕಾರ್ಯಕರ್ತೆ ಗೀರಿಶ ನಗರ ಮತ್ತು ರಾಮೇಶ್ವರ ಕಾಲನಿಯಲ್ಲಿ ಮನೆ ಮನೆಗಳಿಗೆ ಭೆಟ್ಟಿ ಕೊಟ್ಟು ಕೊರೊನಾ ವೈರಸ ಕುರಿತು ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಆರೋಪಿತರ ಕುಟುಂಭದ ಮಾಹಿತಿ ಪಡೆದುಕೊಂಡು ಆರೋಗ್ಯದ ಬಗ್ಗೆ ವಿಚಾರಿಸುತ್ತಿರುವಾಗ ಆರೋಪಿತರು ನಿಮ್ಮ ಹತ್ತಿರ ಏನು ದಾಖಲೆಗಳಿವೆ. ನಾವು ಮಾಹಿತಿ ಕೊಡುವದಿಲ್ಲ, ನಿಮ್ಮ ಐಡಿ ತೋರಿಸಿ ಎಂದು ಬೆದರಿಸಿ ಮಾಹಿತಿ ತುಂಬಿದ ದಾಖಲೆಗಳನ್ನು ಕಸಿದುಕೊಂಡು ಗೀಚು ಹಾಕಿ ಇಲ್ಲಿಂದ ಹೊಗುತ್ತಿರೋ ಇಲ್ಲೋ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಇನ್ನೊಮ್ಮೆ ಇಲ್ಲಿ ಬಂದರೆ ನಿಮ್ಮನ್ನು ಸುಮ್ಮನೆ ಬಿಡುವದಿಲ್ಲಾ ಎಂದು ಜೀವ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ. ಕೋಟ್ ಕೋವಿಡ್-19 ಕಾರ್ಯ ನಿರ್ವಹಿಸುತ್ತಿರುವ ಪೋಲಿಸ, ಆಶಾ, ಆರೋಗ್ಯ ಸಿಬ್ಬಂದಿಗಳ ಕರ್ತವ್ಯಕ್ಕೆ ಯಾರಾದರು ಅಡ್ಡಿ ಪಡಿಸಿದರೆ ಅಂತವರ ಮೇಲೆ ನಿರ್ದಾಕ್ಷಣ್ಯವಾಗಿ ಕಠೀಣ ಕ್ರಮ ಕೈಗೊಳ್ಳಲಾಗುವದು ಮತ್ತು ಪ್ರಕರಣ ಧಾಖಲಿಸಿ ಕಠೀಣ ಶಿಕ್ಷೆಗೊಳಪಡಿಸಲಾಗುವದು. ಆಶಾ ಕಾರ್ಯಕರ್ತೆಯರು ಯಾವುದೆ ಭಯದಲ್ಲಿ ಕಾರ್ಯನಿರ್ವಹಿಸದಿರಿ ಸರಕಾರವೇ ನಿಮ್ಮ ರಕ್ಷಣೆಗೆ ಇದೆ. ನೀವು ಧೈÀರ್ಯವಾಗಿ ಕಾರ್ಯನಿರ್ವಹಿಸಿ, ಯಾವುದೇ ಇಂತಹ ಘಟಣೆಗಳು ಮರುಕಳಿಸಿದರೆ ನಮ್ಮ ಗಮನಕ್ಕೆ ತರಬೇಕು. ಆರೋಗ್ಯ ಇಲಾಖೆ ಇವರಿಗೆ ಸಂಪೂರ್ಣ ಸಹಕಾರ ನೀಡಬೇಕು. **ಡಾ. ಸಿದ್ದು ಹುಲ್ಲೊಳ್ಳಿ. ಆಮಖಂಡಿ ಉಪವಿಭಾಗಾಧಿಕಾರಿ.
ಅಥಣಿ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ ಮುಂದುವರೆದು ಇಪ್ಪತ್ತೆಂಟು ದಿನಗಳಾಗುತ್ತ ಬಂದಿದ್ದು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಕೊರೊನಾ ಹರಡದಂತೆ ತಡೆಯಲು ಕರ್ತವ್ಯ ನಿರತ ಪುರಸಭೆ, ಪೋಲಿಸ್ ಮತ್ತು ವೈದ್ಯಕೀಯ ಸಿಬ್ಬಂದಿಗ ಮತ್ತು ಪತ್ರಕರ್ತರಿಗೆ ಅಥಣಿ ತಾಲೂಕಿನ ಜೈನ ಸಮಾಜದ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು. ಕಳೆದ ಒಂದು ತಿಂಗಳಿನಿAದಲೂ ತಮ್ಮ ಕರ್ತವ್ಯ ನಿಷ್ಠೆ ಮೆರೆಯುತ್ತ ಅಥಣಿ ತಾಲೂಕಿನಲ್ಲಿ ಕೊರೊನಾ ಸೊಂಕು ಹರಡದಂತೆ ತಡೆಯಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಅಥಣಿ ತಾಲೂಕಿನ ಕಾರ್ಯನಿರತ ಪತ್ರಕರ್ತರು ಸೇರಿದಂತೆ ಪೋಲಿಸ್,ವೈದ್ಯಕೀಯ, ಮತ್ತು ಪೌರಕಾರ್ಮಿಕರು ತಮ್ಮ ಕುಟುಂಬ ವರ್ಗದಿಂದಲೂ ದೂರ ಉಳಿದು ಕರ್ತವ್ಯ ನಿರತರಾಗಿದ್ದು ಅವರ ಕಾರ್ಯವನ್ನು ಎಷ್ಟು ಹೊಗಳಿದರೂ ಸಾಲುವದಿಲ್ಲ.ಎಲ್ಲರ ಕರ್ತವ್ಯ ನಿಷ್ಠೆ ಮತ್ತು ಸಾಮಾಜಿಕ ಕಳಕಳಿಯನ್ನು ಮೆಚ್ಚಿ ಇಂದು ಊಟದ ವ್ಯವಸ್ಥೆ ಮಾಡಿರುವದಾಗಿ ಜೈನ ಸಮುದಾಯದ ಮುಖಂಡ ಸಂಜಯ ನಾಡಗೌಡ ಹೇಳಿದರು. ಇದೆ ವೇಳೆ ಮಾತನಾಡಿದ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಹಾಗೂ ಜೈನ ಸಮುದಾಯದ ಮುಖಂಡ ಕೆ ಎ ವನಜೋಳ ಸಂಕಷ್ಟ ಕಾಲದಲ್ಲಿ ಸಹಾಯಕ್ಕೆ ಬರುವವರು ದೇವರಿಗೆ ಸಮ,ಪೋಲಿಸರು ಪತ್ರಕರ್ತರು ಪೌರ ಕಾರ್ಮಿಕರು ಮತ್ತು ಆರೋಗ್ಯ ಇಲಾಖೆ ಹಾಗೂ ಆಶಾ ಕಾರ್ಯಕರ್ತರ ಇಂದಿನ ಸೇವೆ ಸ್ಮರಣೀಯವಾದುದು.ಈ ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತರ ಜೊತೆ ಸಾರ್ವಜನಿಕರು ಸಹಕರಿಸಿ ಕೊರೊನಾ ವೈರಸ್ ತೊಲಗಿಸಲು ಮುಂದಾಗಬೇಕು ಎಂದರು. ಈ ವೇಳೆ ಅಥಣಿ ತಾಲೂಕಿನ ಜೈನ ಸಮುದಾಯದ ಮುಖಂಡರಾದ ಎ.ಸಿ.ಪಾಟೀಲ, ಅಮರ ದುರ್ಗಣ್ಣವರ,ದುಂಡಪ್ಪ ಅಸ್ಕಿ,ಲಕ್ಷ್ಮಣ ಬನಜವಾಡ,ಸಂಜಯ ನಾಡಗೌಡ ಮತ್ತು ಕೆ ಎ ವನಜೋಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.