ಎಣ್ಣೆ ಅಂಗಡಿ ಪ್ರಾರಂಭಕ್ಕೆ ಸಕಲ ಸಜ್ಜು

ಎಣ್ಣೆ ಅಂಗಡಿ ಪ್ರಾರಂಭಕ್ಕೆ ಸಕಲ ಸಜ್ಜು

ಮುಗಳಖೋಡ: ಪಟ್ಟಣದಲ್ಲಿ ನಾಲ್ಕು ಬಾರ-ವೈನ್ ಪ್ರಾರಂಭಕ್ಕೆ ರವಿವಾರ ಸಂಜೆ ಸಕಲ ಸಿದ್ದತೆಯನ್ನು ಮಾಡಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಕಟ್ಟಿಗೆ ಕಟ್ಟಿ ಹಾಗೂ ಚೌಕ್-ಬಾಕ್ಷಗಳನ್ನು ಹಾಕಿ ಅಂಗಡಿ ತೆರೆಯಲು ಸಜ್ಜಾಗಿ ನಿಂತಿವೆ. ಮುಗಳಖೋಡ ಪಟ್ಟಣದಲ್ಲಿ ರವಿ ವೈನ್ಸ್, ಕೀರ್ತಿ ವೈನ್ಸ್, ಎಂಎಸ್‌ಐಎಲ್ ಹಾಗೂ ಆದರ್ಶ ಬಾರ ಸಜ್ಜಾಗಿ ನಿಂತಿರುವ ದೃಶ್ಯ ಕಾಣಿಸಿತು.
ಕಳೆದ ಎರಡು ತಿಂಗಳುಗಳಿAದ ಜಾತಕ ಪಕ್ಷಿಯಂತೆ ಎಣ್ಣೆಗಾಗಿ ಕಾಯುತ್ತಿರುವ ಮಧ್ಯಪ್ರಿಯರು ಲವಲವಿಕೆ, ಖುಷಿ ಖುಷಿಯಾಗಿ ಚರ್ಚೆ ಮಾಡುವದು ಹಾಗೂ ದೂರವಾಣಿಯ ಮೂಲಕ ತಮ್ಮ ಗೆಳೆಯರನ್ನು ಕೇಳುವ ಪ್ರಸಂಗಗಳು ನಡೆದಿವೆ
Share
WhatsApp
Follow by Email