

ಮಲ್ಲಿಕಾರ್ಜುನ ಬನಪ್ಪ ತೇಲಿಯವರು ಇಬ್ಬರು ವಿಶೇಷ ಚೇತನರಿಗೆ ಅವರು ಕುಳಿತ ಸ್ಥಳಕ್ಕೆ ಹೋಗಿ ಕೃತಜ್ಞತಾ ಪತ್ರವನ್ನು ನೀಡಿ ಅಭಿನಂದಿಸಿ, ಮಾನವೀಯತೆ ಮೆರೆದರು. ಭಾರತಾಂಬೆಯ ಭಾವಚಿತ್ರಕ್ಕೆ ಪೂಜೆ, ಪುಷ್ಪವೃಷ್ಟಿ ಮಾಡಿದರು. ಯುವಮುಖಂಡ ಶಂಕರಗೌಡ ಪಾಟೀಲ್, ಎ ಎಸ್ ಐ ದುಂದಮನಿ, ಅಭಿವೃದ್ದಿ ಅಧಿಕಾರಿ ಶ್ರೀಮತಿ ಸವಿತಾ ಚಿನಗುಂಡಿ ಮಾತನಾಡಿದರು. ಆಶಾ ಕಾರ್ಯಕರ್ತೆ ಗೀತಾ ಡೋನೂರ್, ಆರ್ ಎಸ್ ಎಸ್ ತಾಲೂಕಾ ಸಂಚಾಲಕ ಶ್ರೀನಿವಾಸ ಚಿಕ್ಕಟ್ಟಿ, ಸತೀಶ್ ಬಂದಿ ಕರ್ತವ್ಯ ನಿರ್ವಹಿಸುವಾಗ ತಮ್ಮ ಅನುಭವ ಅನಿಸಿಕೆಗಳನ್ನು ಹಂಚಿಕೊAಡರು. ಎಲ್ಲ ಕರೋನಾ ವಾರಿರ‍್ಸ್ಗೆ ಸಿಹಿಯೂಟದ ವ್ಯವಸ್ಥೆಯನ್ನು ಸಹಕಾರಿ ದುರೀಣ ಮಲ್ಲಿಕಾರ್ಜುನ ತೇಲಿ ಮಾಡಿದ್ದರು.
ಗ್ರಾ.ಪಂ ಮಾಜಿ ಉಪಾಧ್ಯಕ್ಷ ಗೌಡಪ್ಪ ಪಾಟೀಲ್, ದಿನೇಶ್ ಬಂದಿ, ಪೋಲಿಸ್ ಇಲಾಖೆಯ ಆರ್.ಆರ್. ವಾಘ್ಮೋರೆ, ಉಪಾಧ್ಯಕ್ಷ ಶಿವಪ್ಪ ಹೊಸುರ್, ಗ್ರಾ.ಪಂ ಸದಸ್ಯ ಸಂಗಪ್ಪ ಮಿರ್ಜಿ, ಮಲ್ಲೇಶ್ ಕೌಜಲಗಿ, ರಾಕೇಶ್ ಚಿಲ್ಲಾಳಶೆಟ್ಟಿ, ಶಿದ್ರಾಯ ಉಳ್ಳಾಗಡ್ಡಿ, ಸೌರಭ ಚೌಗಲಾ, ಶೇಖರಗೌಡ ಪಾಟೀಲ್, ರವಿ ಘಂಟಿ, ಸಿದ್ದು ಚೌಗಲಾ, ಪ್ರಕಾಶ್ ಬಂದಿ, ಪ್ರಭು ಚಿನಗುಂಡಿ, ರಮೇಶ್ ಪಾಟೀಲ್, ಗುರುರಾಜ್ ಬಂದಿ ಇದ್ದರು. ಸತೀಶ್ ಬಂದಿ ಸ್ವಾಗತಿಸಿ ನಿರೂಪಿಸಿದರು