ನೇಕಾರರ ಸಾಲ ಮನ್ನಾಕ್ಕಾಗಿ ಶಾಸಕ ಸಿದ್ದು ಸವದಿಯವರಿಂದ ಮುಖ್ಯಮಂತ್ರಿಗಳಿಗೆ ಮನವಿ

ನೇಕಾರರ ಸಾಲ ಮನ್ನಾಕ್ಕಾಗಿ ಶಾಸಕ ಸಿದ್ದು ಸವದಿಯವರಿಂದ ಮುಖ್ಯಮಂತ್ರಿಗಳಿಗೆ ಮನವಿ

ರಬಕವಿ-ಬನಹಟ್ಟಿ : ಕೋರೊನಾ ೧೯ ವೈರಸ್ ಸಾಂಕ್ರಾಮಿಕ ರೋಗದಿಂದ ನೇಕಾರರು ಯಾವುದೇ ಉದ್ಯೋಗವಿಲ್ಲದೆ ತೀವ್ರ ಸಂಕಷ್ಟದಲ್ಲಿದ್ದಾರೆ. ನೇಕಾರರಿಗೆ ಸಾಲಮನ್ನಾ ಘೋಷಣೆಯಾಗಿದ್ದರೂ ಅದರ ಅನುಷ್ಠಾನವನ್ನು ಶೀಘ್ರದಲ್ಲಿ ಮಾಡಬೇಕೆಂದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಡಿಯೂರಪ್ಪನವರಿಗೆ ಮನವಿ ಸಲ್ಲಿಸುತ್ತೇವೆ ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಕ. ಸವದಿ ಹೇಳಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ನೇಕಾರರ ಪರವಾಗಿ ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಸಿದ್ದು ಸವದಿಯವರು, ರಾಜ್ಯದಲ್ಲಿರುವ ನೇಕಾರರ ಸಂಕಷ್ಟಕ್ಕೆ ಸರ್ಕಾರ ನೇಕಾರರ ಸಾಲ ಮನ್ನಾ ಮಾಡಿದ್ದು ಶ್ಲಾಘನೀಯ, ಆದರೆ ಸಾಲ ಮನ್ನಾ ಪ್ರಕ್ರಿಯೆಯು ನಿಧಾನಗತಿಯಲ್ಲಿ ಸಾಗುತ್ತಿದೆ. ಸಾಲ ಮನ್ನಾ ಆದೇಶವಾಗಿ ಸುಮಾರು ೫ ತಿಂಗಳು ಕಳೆದರು ಈ ಯೋಜನೆ ಸಂಪೂರ್ಣವಾಗಿ ಕಾರ್ಯಗತವಾಗಿರುವುದಿಲ್ಲ. ಸದ್ಯ ಲಾಕಡೌನಿಂದ ನೇಕಾರರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅದಕ್ಕಾಗಿ ಅತೀವ ತೀವ್ರಗತಿಯಲ್ಲಿ ಸಾಲ ಮನ್ನಾ ಯೋಜನೆಯನ್ನು ಕಾರ್ಯಗತ ಮಾಡಬೇಕೆಂದು ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಅರ್ಪಿಸಲು ಬೆಂಗಳೂರಿಗೆ ತೆರಳುತ್ತಿರುವುದಾಗಿ ಶಾಸಕ ಸವದಿ ತಿಳಿಸಿದ್ದಾರೆ.
ನಗರಸಭಾ ಸದಸ್ಯ ಶಿವಾನಂದ ಬುದ್ನಿ, ಶೇಖರ ಹಕ್ಕಲದಡ್ಡಿ, ರೇವಣ್ಣ ಗುಣಕಿ, ತಮ್ಮಣ್ಣಿ ಸಿದ್ದಪನವರ, ರವಿಂದ್ರ ಚನಪ್ಪನ್ನವರ ನೇಕಾರರ ಪರವಾಗಿ ಮನವಿ ಅರ್ಪಿಸಿದರು.
Share
WhatsApp
Follow by Email