ಬನಹಟ್ಟಿಯಲ್ಲಿ ವಿನಾಕಾರಣ ಬೈಕ್ ಮೇಲೆ ಸಂಚರಿಸಿದರೆ ಜೋಕೆ : ಸ್ವತಃ ತಹಶೀಲ್ದಾರ ನೀಡುತ್ತಾರೆ ಲಾಠಿ ಏಟು

ಬನಹಟ್ಟಿಯಲ್ಲಿ ವಿನಾಕಾರಣ ಬೈಕ್ ಮೇಲೆ ಸಂಚರಿಸಿದರೆ ಜೋಕೆ : ಸ್ವತಃ ತಹಶೀಲ್ದಾರ ನೀಡುತ್ತಾರೆ ಲಾಠಿ ಏಟು

ರಬಕವಿ-ಬನಹಟ್ಟಿ : ರಬಕವಿ-ಬನಹಟ್ಟಿ ತಾಲೂಕಿನ ವ್ಯಾಪ್ತಿಯಲ್ಲಿ ಕೋರೊನಾ ವೈರಸ್ ಹರಡದಂತೆ ಮುಂಜಾಗ್ರತ ಕ್ರಮವಾಗಿ ಎಲ್ಲ ದ್ವಿಚಕ್ರ ವಾಹನಗಳ ಸಂಚಾರವನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ಸಂಪೂರ್ಣ ನಿಷೇಧಿಸಲಾಗಿದೆ. ವಿನಾಕಾರಣ ದ್ವಿಚಕ್ರ ವಾಹನದಲ್ಲಿ ಸಂಚರಿಸುವವರಿಗೆ ರಬಕವಿ-ಬನಹಟ್ಟಿ ತಹಶೀಲ್ದಾರ ಪ್ರಶಾಂತ ಚನಗೊಂಡ ಸ್ವತಃ ರಸ್ತೆಗಿಳಿದು ಬೈಕ್ ಸವಾರರಿಗೆ ಲಾಠಿ ಏಟು ನೀಡುತ್ತಿರುವುದು, ತಹಶೀಲ್ದಾರರ ಕರ್ತವ್ಯ ಪ್ರಜ್ಞೆಗೆ ಸಾಕ್ಷಿಯಾಗಿದೆ.
ರಬಕವಿ-ಬನಹಟ್ಟಿ ತಾಲೂಕಿನ ವ್ಯಾಪ್ತಿಯಲ್ಲಿ ಕೋರೊನಾ ವೈರಸ್ ಹರಡದಂತೆ ಈಗಾಗಲೇ ಜಿಲ್ಲಾಧಿಕಾರಿಗಳ ಆದೇಶದಂತೆ ಕಲಂ ೧೪೪ ಸಿಆರ್‌ಪಿಸಿ ಪ್ರಕಾರ ನಿಷೇಧಾಜ್ಞೆ ಜಾರಿ ಮಾಡಿದ್ದರೂ ಸಹಿತ ತಾಲೂಕಿನಲ್ಲಿ ಸಾರ್ವಜನಿಕರು ವಿನಾಕಾರಣ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವುದು ಹೆಚ್ಚಾಗಿ ಕಂಡು ಬಂದಿದೆ. ಲಾಕ್‌ಡೌನ್ ಮುಗಿಯವರೆಗೂ ತಾಲೂಕಿನಲ್ಲಿ ದ್ವಿಚಕ್ರ ವಾಹನ ಸಂಚಾರವನ್ನು ನಿüಷೇಧಿಸಲಾಗಿದೆ. ವೈದ್ಯಕೀಯ ಸೇವೆ ಹಾಗೂ ಸರಕಾರಿ ಸೇವೆಗಾಗಿ ಸಂಚರಿಸುವ ವಾಹನಗಳನ್ನು ಬಿಟ್ಟು ಉಳಿದೆಲ್ಲ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಆದರೂ ಬನಹಟ್ಟಿಯಲ್ಲಿ ವಿನಾಕಾರಣ ಬೈಕ್ ಮೇಲೆ ಸಂಚರಿಸುವುದು ಕಂಡು ಬಂದದ್ದರಿAದ ತಹಶೀಲ್ದಾರ ಪ್ರಶಾಂತ ಚನಗೊಂಡ ಇಂದು ರಸ್ತೆಗಿಳಿದು ವಿನಾಕಾರಣ ಬೈಕ್ ಮೇಲೆ ಸಂಚರಿಸುವವರನ್ನು ತಡೆದು, ಲಾಠಿಯ ರುಚಿ ತೋರಿಸಿದ್ದಾರೆ. ಬೈಕ್ ಸವಾರರ ಕೀ ಪಡೆದು ಬೈಕ್‌ನ್ನು ಸಿಜ್ ಮಾಡಿದರು.
ತಹಶೀಲ್ದಾರ ಜೊತೆ ಬನಹಟ್ಟಿಯ ಸಿಪಿಆಯ್ ಜೆ. ಕರುಣೇಶಗೌಡ, ಬನಹಟ್ಟಿ ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ, ಕಂದಾಯ ನೀರಿಕ್ಷಕ ಬಸವರಾಜ ತಾಳಿಕೋಟಿ, ಗ್ರಾಮ ಲೆಕ್ಕಾಧಿಕಾರಿ ಎಂ.ಎಸ್. ಖವಟಗೊಪ್ಪ ಹಾಗೂ ಪೊಲೀಸ್ ಸಿಬ್ಬಂದಿ ಸಾಥ್ ನೀಡಿದರು.
ರಬಕವಿ-ಬನಹಟ್ಟಿ: ಫೋಟೋ ೦೩ : ಬನಹಟ್ಟಿಯಲ್ಲಿ ವಿನಾಕಾರಣ ಬೈಕ್ ಮೇಲೆ ಸಂಚರಿಸಿದರೆ ಜೋಕೆ : ಸ್ವತಃ ತಹಶೀಲ್ದಾರ ನೀಡುತ್ತಾರೆ ಲಾಠಿ ಏಟು
Share
WhatsApp
Follow by Email