ಬ್ರೇಕಿಂಗ್ ನ್ಯೂಸ್ ಬನಹಟ್ಟಿಗೂ ವಕ್ಕರಿಸಿದ ಕೊರೊನಾ,20 ವರ್ಷದ ಯುವಕನಿಗೆ ಪಾಸಿಟಿವ ಬಂದ ಹಿನ್ನೆಲೆ ಬನಹಟ್ಟಿ ನಗರದ ಜನರಲ್ಲಿ ಆತಂಕ 11/05/202011/05/20201 min read admin ರಬಕವಿ-ಬನಹಟ್ಟಿ : ಗುಜರಾತಿನ ಅಹಮದಾಬಾದ್‌ನಿಂದ ಬನಹಟ್ಟಿಗೆ ಬಂದಿಳಿದ 15 ತಬ್ಲಿಘಿಗಳ ಆರೋಗ್ಯ ತಪಾಸಣೆ ನಡೆಸಿ ಗಂಟಲು ದ್ರವ ಸಂಗ್ರಹಿಸಿ ಈಗಾಗಲೇ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದರಲ್ಲಿ 20 ವರ್ಷದ ಯುವಕನಿಗೆ (ಪಿ.854) 1 ರಿಪೋರ್ಟ ಪಾಸಿಟಿವ ಬಂದಿದ್ದು. ಬನಹಟ್ಟಿ ನಗರದ ಜನರಲ್ಲಿ ಆತಂಕ ಮೂಡಿಸಿದೆ,ಇನೆನ್ನು ಲಾಕಡೌನ ಸಡಿಲಿಕೆಯಿಂದ ಮತ್ತೆ ತಮ್ಮ ತಮ್ಮ ವ್ಯಾಪಾರ ವಹಿವಾಟುಗಳಿಗೆ ಹೊಗಬೇಕೆನ್ನುವಷ್ಟರಲ್ಲಿ, ಈ ಕೊರೋನಾ ಹೆಮ್ಮಾರಿ ಬನಹಟ್ಟಿಗೂ ವಕ್ಕರಿಸಿ ಜನರಲ್ಲಿ ಅತ್ಯಂತ ಭಯಾನಕ ವಾತಾವರಣ ಸೃಷ್ಟಿಮಾಡಿದೆ. ಮುಂದಿನ ದಿನಗಳು ಹೀಗೆ ಲಾಕಡೌನ ಮುಂದುವರೆಯುತ್ತದೆಯೋ ಅಥವಾ ಇನ್ನಷ್ಟು ಬಿಗಿಯಾಗುತ್ತದೆಯೋ ಎಂದು ಜನರಸಾಮಾನ್ಯರ ಪ್ರಶ್ನೆಯಾಗಿದೆ. Share