ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಆರಂಭ-ನದಾಫ್

ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಆರಂಭ-ನದಾಫ್


ಮೂಡಲಗಿ: ಕೃಷಿ ಇಲಾಖೆಯು ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸಹಾಯ ಧನದಲ್ಲಿ ಗೋಕಾಕ-ಮೂಡಲಗಿ ತಾಲೂಕಿನಲ್ಲಿ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜಗಳನ್ನು ಸೂಕ್ತ ಪ್ರಮಾಣದಲ್ಲಿ ಸಂಗ್ರಹಿಸುವ ನಿಟ್ಟಿನಲ್ಲಿ ಕ್ರೀಯಾಶಿಲವಾಗಿವೆ. ಕೋರೊನಾ ವೈರಸ್ ಲಾಕ್ ಡೌನ ಹಿನ್ನೆಲೆಯಲ್ಲಿ ಒಂದು ಸ್ಥಳದಲ್ಲಿ ಅಧಿಕ ರೈತರು ಸೇರಬಾರದು ಎಂಬ ಉದ್ದೇಶದಿಂದ ರೈತರಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಹೆಚ್ಚುವರಿಯಾಗಿ ಬೀಜ ವಿತರಣಾ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಎಮ್.ಎಮ್.ನದಾಫ ಪತ್ರಿಕಾ ಪ್ರಕಟನೆ ಮೂಲಕ ತಿಳಿಸಿದ್ದಾರೆ.
ಬೀಜ ವಿತರಣಾ ಕೇಂದ್ರಗಳಲ್ಲಿ ಮುಂಗಾರು ಹಂಗಾಮಿಗೆ ಬೇಕಾಗುವ ಬಿತ್ತನೆ ಬೀಜಗಳಾದ ಸೋಯಾಬಿನ, ಮುಸುಕಿನ ಜೋಳ, ಹೈಬ್ರಿಡ್ ಜೋಳ, ಸಜ್ಜೆ, ಸೂರ್ಯಕಾಂತಿ, ಹೆಸರು ಮತ್ತು ತೋಗರಿ ಬೀಜಗಳನ್ನು ದಾಸ್ತಾನು ಮಾಡಲಾಗಿದ್ದು, ತಾಲ್ಲೂಕಿನ ರೈತ ಭಾಂದವರು ಈ ಕೆಳಗೆ ನಮೂದಿಸಿದ ರೈತ ಸಂಪರ್ಕ ಕೇಂದ್ರಗಳು ಮತ್ತು ಬೀಜ ವಿತರಣಾ ಮಾರಾಟ ಕೇಂದ್ರಗಳಲ್ಲಿ ಬೀಜಗಳನ್ನು ಪಡೆಯಲು ಜಮೀನಿನ ಉತಾರ, ಬ್ಯಾಂಕ, ಪಾಸ್‍ಬುಕ್ಕ , ಆಧಾರ ಕಾರ್ಡ ಅಥವಾ ರೈತರ ನೊಂದಣಿ ಸಂಖ್ಯೆ (ಈIಆ ಓUಒಃಇಖ) ಈ ಎಲ್ಲ ದಾಖಲಾತಿಗಳನ್ನು ಸಲ್ಲಿಸಿ ಬೀಜಗಳನ್ನು ಪಡೆಯಬೆಕು.
ಕೋವಿಡ-19 ಹತೋಟಿಗೆ ಸರಕಾರದಿಂದ ಹೊರಡಿಸಲಾದ ಸಾಮಾಜಿಕ ಅಂತರ ಸೇರಿದಂತೆ ಎಲ್ಲ ಮಾರ್ಗಸೂಚಿಗಳನ್ನು ಪಾಲಿಸಬೇಕು
ಗೋಕಾಕ ರೈತ ಸಂಪರ್ಕ ಕೇಂದ್ರದ ಅಡಿಯಲ್ಲಿ ಬರುವ: ರೈತ ಸಂಪರ್ಕ ಕೇಂದ್ರ ಗೋಕಾಕ, ಮಮದಾಪುರ ಕ್ರಾಸ್, ಖನಗಾವ, ಅಂಕಲಗಿ, ಉರುಬಿನಹಟ್ಟಿ.
ಅರಭಾವಿ ರೈತ ಸಂಪರ್ಕ ಕೇಂದ್ರದ ಅಡಿಯಲ್ಲಿ ಬರುವ: ರೈತ ಸಂಪರ್ಕ ಕೇಂದ್ರ ಅರಭಾವಿ, ಮೂಡಲಗಿ, ತುಕ್ಕಾನಟ್ಟಿ ಪಿ.ಕೆ.ಪಿ.ಎಸ್ ,ಹಳ್ಳೂರ, ಕೊಣ್ಣುರ, ನಲ್ಲಾನಟ್ಟಿ ಪಿ.ಕೆ.ಪಿ.ಎಸ್.
ಕೌಜಲಗಿ ರೈತ ಸಂಪರ್ಕ ಕೇಂದ್ರದ ಅಡಿಯಲ್ಲಿ ಬರುವ: ರೈತ ಸಂಪರ್ಕ ಕೇಂದ್ರ ಕೌಜಲಗಿ, ಲಕ್ಷ್ಮೇಶ್ವರ, ಮೇಳವಂಕಿ, ಬೆಟಗೇರಿ, ಕುಲಗೋಡ, ಯಾದವಾಡ ಮತ್ತು ಬಿಲಕುಂದಿ ಪಿ.ಕೆ.ಪಿ.ಎಸ್ ಗಳಲ್ಲಿ ಬೀಜ ವೀತರಣಾ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಎಮ್.ಎಮ್.ನದಾಫ ರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Share
WhatsApp
Follow by Email