ನಾಳೆ ಕೇಂದ್ರದಿಂದ ರಾಜ್ಯಕ್ಕೆ 10ಸಾವಿರ ಬ್ಲ್ಯಾಕ್ ಫಂಗಸ್ ಮೆಡಿಸಿನ್ ಲಭ್ಯವಾಗಲಿದ್ದು, ಅದನ್ನು ರಾಜ್ಯಕ್ಕೆ ಇನ್ನೂ ಹೆಚ್ಚು ಹಂಚಿಕೆ ಮಾಡುವಂತೆ ಸದಾನಂದ ಗೌಡರ ಮೂಲಕ ಕೇಂದ್ರಕ್ಕೆ ಪತ್ರ ಬರೆದು ಮನವಿ ಮಾಡಲಾಗುವುದು ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಬೆಂಗಳೂರು: ನಾಳೆ ಕೇಂದ್ರದಿಂದ ರಾಜ್ಯಕ್ಕೆ 10ಸಾವಿರ ಬ್ಲ್ಯಾಕ್ ಫಂಗಸ್ ಮೆಡಿಸಿನ್ ಲಭ್ಯವಾಗಲಿದ್ದು, ಅದನ್ನು ರಾಜ್ಯಕ್ಕೆ ಇನ್ನೂ ಹೆಚ್ಚು ಹಂಚಿಕೆ ಮಾಡುವಂತೆ ಸದಾನಂದ ಗೌಡರ ಮೂಲಕ ಕೇಂದ್ರಕ್ಕೆ ಪತ್ರ ಬರೆದು ಮನವಿ ಮಾಡಲಾಗುವುದು ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್,ಬ್ಲ್ಯಾಕ್ ಫಂಗಸ್ ಮೆಡಿಸಿನ್ ವಿಚಾರದಲ್ಲಿ ಬಹಳಷ್ಟು ಬೇಡಿಕೆಯಿದ್ದು,ಈ ಸಂಬಂಧ ಆರೋಗ್ಯ ಇಲಾಖೆ, ಲಾಜಿಸ್ಟಿಕ್ಸ್ ಸೊಸೈಟಿ ಹಾಗೂ ಅಧಿಕಾರಿಗಳ ಸಭೆ ನಡೆಸಲಾಗಿದೆ.ಕೇಂದ್ರದಿಂದ ಇದುವರೆಗೆ ರಾಜ್ಯಕ್ಕೆ 1050 ಡೋಸ್ ಬಂದಿದೆ.ಅದು ಸ್ಟ್ರೀಮ್ ಲೈನ್ ಆಗಬೇಕಿತ್ತು.ಇದಕ್ಕೆ ಸಂಬಂಧಿಸಿದಂತೆ ಇಂದು ಶುಕ್ರವಾರ ಸಂಜೆಯೊಳಗೆ ಆದೇಶ ಹೊರಡಿಸಲಾಗುವುದು.ಆನ್ ಲೈನ್ ಮೂಲಕವೇ ಆಸ್ಪತ್ರೆ ಗಳು ಇಂಡೆಂಟ್ ಹಾಕಬೇಕು.ಆಗತಕ್ಷಣ ಆ ಆಸ್ಪತ್ರೆ ಗಳಿಗೆ ಬ್ಲ್ಯಾಕ್ ಫಂಗಸ್‌ಗೆ ಬೇಕಾದ ಔಷಧ ಕಳಿಸಲಾಗುವುದು.
ರೆಮ್ಡಿಸಿವಿರ್ ನ ಕೊರತೆಯಂತೂ ಇಲ್ಲವೇ ಇಲ್ಲ.ರೆಮ್ಡಿಸಿವಿರ್ ನ ಬೇಡಿಕೆ ಇದೀಗ ಇಳಿಕೆ ಕಂಡಿದೆ.ಪ್ರತಿದಿನ 18-20ಸಾವಿರ ರೆಮ್ಡಿಸಿವಿರ್ ಬೇಕಾಗಿತ್ತು.ಆದರೀಗ ರೆಮ್ಡಿಸಿವಿರ್ ಇದೀಗ 5 ಸಾವಿರಕ್ಕೆ ಇಳಿಕೆಯಾಗಿದೆ.
ಬ್ಲ್ಯಾಕ್ ಫಂಗಸ್ ಗೆ ಬೇಕಾದ ಮೆಡಿಸಿನ್ ಬಗ್ಗೆಯೂ ಕೇಂದ್ರ ಸಚಿವ ಸದಾನಂದ ಗೌಡರ ಜೊತೆಗೆ ಮಾತನಾಡಿರುವುದಾಗಿ ಅಶೋಕ್ ಹೇಳಿದರು.
ಆಕ್ಸಿಜನ್ ಬೆಡ್ ಗೂ ಕೂಡ ಸದ್ಯ ಎಲ್ಲಿಯೂ ಒತ್ತಡ ಕಂಡುಬರುತ್ತಿಲ್ಲ.
ವಿಪಕ್ಷ ಗಳು ಕೋವಿಡ್ ಪರೀಕ್ಷೆ ಕಡಿಮೆ ಮಾಡಿದ್ದೇವೆಂದು ಆರೋಪ ಮಾಡುತ್ತಿವೆ.ಆದರೆ ಜಿಲ್ಲಾಧಿಕಾರಿಗಳು ಪ್ರತಿ ಹಳ್ಳಿಗೂ ಹೋಗಿ ಟೆಸ್ಟಿಂಗ್ ಮಾಡಿಸುವಂತೆ ಆದೇಶಿಸುತ್ತಿದ್ದೇವೆ.ಅಂತಿಮ ವ್ಷದ ಮೆಡಿಕಲ್ ವಿದ್ಯಾರ್ಥಿಗಳ ತಂಡ ಮಾಡಿ ಪ್ರತಿ ಹಳ್ಳಿಗಳಿಗೂ ಕೂಡ ಪರೀಕ್ಷೆಗೆ ತೆರಳಲಿದೆ.ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಈಗಾಗಲೇ ಇದನ್ನು ಜಾರಿಗೆ ತಂದಿದ್ದೇವೆ.ವೈದ್ಯಾಧಿಕಾರಿಗಳೇ ಹಳ್ಳಿಗೆ ನಡೆಯಿರಿ ಎನ್ನೋ ಕಾನ್ಸೆಪ್ಟ್ ಮಾಡುತ್ತಿದ್ದೇವೆ.ಅದಕ್ಕಾಗಿ ವೈದ್ಯಾಧಿಕಾರಿಗಳಿಗೆ ಒಂದು ವಾಹನ ಒಂದು ತಿಂಗಳಿಗಾಗುವಷ್ಟು ಮೆಡಿಸಿನ್ ಹಾಗೂ ಪಿಪಿಇಕಿಟ್ ಕೊಟ್ಟು ಕಳಿಸುತ್ತೆವೆ.ಹಳ್ಳಿ ಹಳ್ಳಿಗೂ ಹೋಗಿ ವೈದ್ಯಾಧಿಕಾರಿಗಳು ಪರೀಕ್ಷೆ ನಡೆಸಿ ಟೆಸ್ಟಿಂಗ್ ಮಾಡಿ ಹಳ್ಳಿಗಳ ನಿಯಂತ್ರಣ ಮಾಡಬೇಕು ಎಂದು ಅಶೋಕ್ ಹೇಳಿದರು.