ವಿದ್ಯಾರ್ಥಿಗಳಿಗಾಗಿ ‘ಬ್ಯಾಕ್ ಟು ಸ್ಕೂಲ್‘ ವಿಶೇಷ ರಿಯಾಯಿತಿ; ಕಡಿಮೆ ಬೆಲೆ ಸ್ಯಾಮ್​ಸಂಗ್​​ ಟ್ಯಾಬ್ ಖರೀದಿಸುವ ಅವಕಾಶ!

ವಿದ್ಯಾರ್ಥಿಗಳಿಗಾಗಿ ‘ಬ್ಯಾಕ್ ಟು ಸ್ಕೂಲ್‘ ವಿಶೇಷ ರಿಯಾಯಿತಿ; ಕಡಿಮೆ ಬೆಲೆ ಸ್ಯಾಮ್​ಸಂಗ್​​ ಟ್ಯಾಬ್ ಖರೀದಿಸುವ ಅವಕಾಶ!

ಸ್ಯಾಮ್​ಸಂಗ್​ ಅಮೆಜಾನ್​ನೊಂದಿಗೆ ಸಹಬಾಗಿತ್ವವನ್ನು ಹೊಂದಿದೆ. ಅದರ ಮುಲಕ ವಿದ್ಯಾರ್ಥಿಗಳಿಗಾಗಿ ಗ್ಯಾಲಕ್ಸಿ ಟ್ಯಾಬ್​ ಎ7 ವೈ-ಫೈ ಮತ್ತು ಗ್ಯಾಲಕ್ಸಿ ಟ್ಯಾಬ್​ ಎಸ್​6 ಲೈಟ್​ ವೈ-ಫೈ ಮೇಲೆ 2 ಸಾವಿರ ಡಿಸ್ಕೌಂಟ್​ ನೀಡಿದೆ. ಇದು ಅಮೆಜಾನ್​ ಪ್ರೈಮ್​ ಯಂಗ್​ ಅಡಾಲ್ಟ್​​ ಕಾರ್ಯಕ್ರಮದ ಭಾಗವಾಗಿದೆ. ಇನ್ನು ಕೊಡುಗೆಗೆ ಅರ್ಹರಾಗಿರುವ ಗ್ರಾಹಕರು  ತಮ್ಮ ಅಮೆಜಾನ್​ ಖಾತೆಯಲ್ಲಿ ವಿಶೇಷ ಕೂಪನ್​ ಅನ್ನು ಪಡೆಯುತ್ತಾರೆ.

ಜನಪ್ರಿಯ ಬ್ರಾಂಡ್​ ಸ್ಯಾಮ್​ಸಂಗ್ ವಿದ್ಯಾರ್ಥಿಗಳಿಗಾಗಿ​ ವಿಶೇಷ ರಿಯಾಯಿತಿಯೊಂದನ್ನು ತೆರೆದಿಟ್ಟಿದೆ. ‘ಬ್ಯಾಕ್​ ಟು ಸ್ಕೂಲ್​‘  ಹೆಸರಿನ ಮೂಲಕ ಸ್ಯಾಮ್​ಸಂಗ್​ ವಿಶೇಷ ರಿಯಾಯಿತಿ ನೀಡುತ್ತಿದ್ದು, ಅದರಲ್ಲಿ ಗ್ಯಾಲಕ್ಸಿ ಟ್ಯಾಬ್​ ಎಸ್​7+, ಗ್ಯಾಲಕ್ಸಿ ಟ್ಯಾಬ್​ ಎಸ್​7, ಗ್ಯಾಲಕ್ಸಿ ಟ್ಯಾಬ್​ ಎಸ್​6 ಮತ್ತು ಗ್ಯಾಲಕ್ಸಿ ಟ್ಯಾಬ್​ ಎ7 ಅನ್ನು ಕಡಿಮೆ ಬೆಲೆಗೆ ಖರೀದಿಸುವ ಅವಕಾಶ ನೀಡಿದೆ.

ಸ್ಟೂಡೆಂಟ್​ ಆಫರ್​; ಆಫ್​ಲೈನ್​ ಮತ್ತು ಆನ್​ಲೈನ್​

ಸ್ಯಾಮ್​ಸಂಗ್​ ಸಂಸ್ಥೆ ವಿದ್ಯಾರ್ಥಿಗಳಿಗಾಗಿ ‘ಸ್ಟೂಡೆಂಟ್​​ ಅಡ್ವಾಂಟೇಜ್’​ ಹೆಸರಿನಲ್ಲಿ ಆಫರ್​ ನೀಡಿದೆ. ವಿದ್ಯಾರ್ಥಿಗಳು ಸ್ಮಾರ್ಟ್​ ಕೆಫೆ ಮತ್ತು ಫ್ಲಾಜಾ ಸ್ಟೋರ್​ಗಳಿಗೆ ಭೇಟಿ ನೀಡಿದಾಗ ಈ ಕೊಡುಗೆ ಪಡೆಯಲು ಅನುಮತಿಸುತ್ತದೆ. ಸಂಬಂಧಿಸಿದ ರಿಯಾಯಿತಿ ಪಡೆಯಲು ಕಾಲೇಜು​ ಐಡಿ ಡಿಸ್ಕೌಂಟ್​ ಪಡೆಯಬಹುದಾದ ಅವಕಾಶ ನೀಡುತ್ತಿದೆ. ಅದರ ಜೊತೆಗೆ ಸ್ಮಾರ್ಟ್​ಕ್ಲಬ್​ ಮೆಂಬರ್​ಶಿಪ್​ ಕೂಡ ನೀಡುತ್ತಿದೆ. ಮಾತ್ರವಲ್ಲದೆ ರಿವಾರ್ಡ್​ ಪಾಯಿಂಟ್​ ನತ್ತು ಸರ್ವಿಸ್​ ಬೆನಿಫಿಟ್​ ಪಡೆಯಬಹುದಾಗಿ ತಿಳಿಸಿದೆ. ಗ್ಯಾಲಕ್ಸಿ ಟ್ಯಾಬ್​ನಲ್ಲಿ ನಿಯಮಿತ ಗ್ರಾಹಕ ಕೊಡುಗೆಗಳ ಜೊತೆಗೆ ಈ ವಿಶೇಷ ಕೊಡುಗೆ ಸೇರಿದೆ.

ಸ್ಯಾಮ್​ಸಂಗ್​ ಅಮೆಜಾನ್​ನೊಂದಿಗೆ ಸಹಬಾಗಿತ್ವವನ್ನು ಹೊಂದಿದೆ. ಅದರ ಮುಲಕ ವಿದ್ಯಾರ್ಥಿಗಳಿಗಾಗಿ ಗ್ಯಾಲಕ್ಸಿ ಟ್ಯಾಬ್​ ಎ7 ವೈ-ಫೈ ಮತ್ತು ಗ್ಯಾಲಕ್ಸಿ ಟ್ಯಾಬ್​ ಎಸ್​6 ಲೈಟ್​ ವೈ-ಫೈ ಮೇಲೆ 2 ಸಾವಿರ ಡಿಸ್ಕೌಂಟ್​ ನೀಡಿದೆ. ಇದು ಅಮೆಜಾನ್​ ಪ್ರೈಮ್​ ಯಂಗ್​ ಅಡಾಲ್ಟ್​​ ಕಾರ್ಯಕ್ರಮದ ಭಾಗವಾಗಿದೆ. ಇನ್ನು ಕೊಡುಗೆಗೆ ಅರ್ಹರಾಗಿರುವ ಗ್ರಾಹಕರು  ತಮ್ಮ ಅಮೆಜಾನ್​ ಖಾತೆಯಲ್ಲಿ ವಿಶೇಷ ಕೂಪನ್​ ಅನ್ನು ಪಡೆಯುತ್ತಾರೆ.

ಫ್ಲಿಪ್​ಕಾರ್ಟ್​ ಕೂಡ ‘ಸ್ಮಾರ್ಟ್​ ಅಪ್​ಗ್ರೇಡ್​​ ಆನ್​ ಟ್ಯಾಬ್ಲೆಟ್​​‘  ಕಾರ್ಯಕ್ರಮದ ಮೂಲಕ ಗ್ರಾಹಕರಿಗೆ ಹೊಸ ಸಾಧನವನ್ನು ಪಡೆಯಲು ಅವಕಾಶ ಮಾಡಿಕೊಡುತ್ತಿದೆ. ಗ್ಯಾಲಕ್ಸಿ ಟ್ಯಾಬ್​ ಮೇಲೆ ಶೇ 70ರಷ್ಟು ಮಾತ್ರ ಪಾವತಿಸುವ ಅವಕಾಶ ನೀಡಿದೆ. ಗ್ರಾಹಕರು ಒಂದು ವರ್ಷದ ನಂತರ ಹೊಸ ಗ್ಯಾಲಕ್ಸಿ ಟ್ಯಾಬ್​ ಖರೀದಿಸಬಹುದು ಮತ್ತು ಹಳೆಯ ಸಾಧನವನ್ನುಹಿಂತಿರುಗಿಸಬಹುದು. ಗ್ಯಾಲಕ್ಸಿ ಎಸ್​21 ಸರಣಿ ಸೇರಿದಂತೆ ವಿವಿಧ ಸ್ಯಾಮ್​ಸಂಗ್​ ಸ್ಮಾರ್ಟ್​ಫೋನ್​ಗಳ ಮೇಲೆ ಈ ಕೊಡುಗೆ ಲಭ್ಯವಿದೆ.

ಸ್ಯಾಮ್​ಸಂಗ್​ ಟ್ಯಾಬ್ಲೆಟ್​ಗಳ ಮೇಲೆ ರಿಯಾಯಿತಿ

ಸ್ಯಾಮ್​ಸಂಗ್​ ಗ್ಯಾಲಕ್ಸಿ ಟ್ಯಾಬ್ ಎಸ್ 7 +, ಗ್ಯಾಲಕ್ಸಿ ಟ್ಯಾಬ್ ಎಸ್ 7, ಗ್ಯಾಲಕ್ಸಿ ಟ್ಯಾಬ್ ಎಸ್ 6 ಲೈಟ್ ಮತ್ತು ಗ್ಯಾಲಕ್ಸಿ ಟ್ಯಾಬ್ ಎ7 ಅನ್ನು ತನ್ನದೇ ಆದ ಇ-ಸ್ಟೋರ್‌ನಲ್ಲಿ ಖರೀದಿಸುವಾಗ ಅವಕಾಶವನ್ನು ನೀಡಿದೆ. ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಶೇಕಡಾ 10 ರಷ್ಟು ರಿಯಾಯಿತಿ ನೀಡುತ್ತಿದೆ. ದೇಶಾದ್ಯಂತದ ವಿದ್ಯಾರ್ಥಿಗಳು ತಮ್ಮ ಅಧಿಕೃತ ಕಾಲೇಜು / ಶಾಲೆ / ವಿಶ್ವವಿದ್ಯಾಲಯದ ಇಮೇಲ್ ಐಡಿ ಬಳಸಿ ಅಥವಾ ಅಧಿಕೃತ ವಿದ್ಯಾರ್ಥಿ ರುಜುವಾತು ಪರಿಶೀಲನಾ ಏಜೆನ್ಸಿಯ ಮೌಲ್ಯಮಾಪನದ ಮೂಲಕ ಈ ಪ್ರಯೋಜನಗಳನ್ನು ಪಡೆಯಬಹುದಾಗಿದೆ ಎಂದು ತಿಳಿಸಿದೆ.ಸ್ಯಾಮ್​ಸಂಗ್​ ತನ್ನ ಗ್ಯಾಲಕ್ಸಿ ಟ್ಯಾಬ್ ಎಸ್ 7 +, ಗ್ಯಾಲಕ್ಸಿ ಟ್ಯಾಬ್ ಎಸ್ 7 ಗಾಗಿ ಸ್ಯಾಮ್‌ಸಂಗ್ ಟ್ಯಾಬ್ಲೆಟ್ ಕೀಬೋರ್ಡ್‌ಗಳ ಮೇಲೆ 10,000 ರೂ. ರಿಯಾಯಿತಿ ನೀಡುತ್ತದೆ. ಟ್ಯಾಬ್ ಎಸ್ 7 + ಕೀಬೋರ್ಡ್ ಕವರ್‌ಗೆ 7,999 ರೂ. ಮತ್ತು ಟ್ಯಾಬ್ ಎಸ್ 7 ಗೆ 5,999 ರೂ. ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರು ಗ್ಯಾಲಕ್ಸಿ ಟ್ಯಾಬ್ ಎಸ್ 7 + ನಲ್ಲಿ 10,000 ರೂ. ಮತ್ತು ಗ್ಯಾಲಕ್ಸಿ ಟ್ಯಾಬ್ ಎಸ್ 7 ನಲ್ಲಿ 9,000 ರೂ.ಗೆ ಖರೀದಿಸಬಹುದಾಗಿದೆ.

ಗ್ಯಾಲಕ್ಸಿ ಟ್ಯಾಬ್ ಎಸ್ 6 ಲೈಟ್ ಗ್ಯಾಲಕ್ಸಿ ಬಡ್ಸ್ + ನೊಂದಿಗೆ 1,999 ರೂಗಳ ವಿಶೇಷ ಬೆಲೆಗೆ ಮಾರಾಟ ಮಾಡುತ್ತಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರು 3000 ರೂ.ಗಳ ಹೆಚ್ಚುವರಿ ಹಣವನ್ನು ಪಡೆಯಲಿದ್ದಾರೆ. ನೀವು ಗ್ಯಾಲಕ್ಸಿ ಟ್ಯಾಬ್ ಎ 7 ಅನ್ನು ಖರೀದಿಸಲು ಬಯಸಿದರೆ, ಸ್ಯಾಮ್‌ಸಂಗ್ ಬ್ರಾಂಡ್ ಕವರ್ ಅನ್ನು 999 ರೂ.ಗಳ ರಿಯಾಯಿತಿ ದರದಲ್ಲಿ ಪಡೆಯುವ ಅವಕಾಶವನ್ನು ಸ್ಯಾಮ್​ಸಂಗ್​ ಮಾಡಿದೆ.

Share
WhatsApp
Follow by Email