ರಿಜೆಕ್ಟ್​ ಆಗಿದ್ದ ನಿಯತಕಾಲಿಕೆಯ ಮುಖ ಪುಟದಲ್ಲೇ ಸೋನು ಸೂದ್​..!

ರಿಜೆಕ್ಟ್​ ಆಗಿದ್ದ ನಿಯತಕಾಲಿಕೆಯ ಮುಖ ಪುಟದಲ್ಲೇ ಸೋನು ಸೂದ್​..!

ಸೋನು ಸೂದ್​ ಅವರ ಸಿನಿ ಜರ್ನಿ ಸಹ ಹೂವಿನ ಹಾಸಿಗೆಯಾಗಿರಲಿಲ್ಲ. ಸಾಕಷ್ಟು ಕಷ್ಟ ಹಾಗೂ ತಿರಸ್ಕಾರವನ್ನು ಅನುಭವಿಸಿದ್ದಾರೆ. ಸೋಲಿನ ಮೆಟ್ಟಿಲನ್ನೇ ಯಶಸ್ಸಿಗೆ ಬಳಸಿಕೊಂಡು ಬೆಳೆದಿರುವ ನಟ ತಮ್ಮ ಜೀವನದಲ್ಲಾದ ಘಟನೆಯೊಂದರ ಬಗ್ಗೆ ನೆಟ್ಟಿಗರೊಂದಿಗೆ ಹಂಚಿಕೊಂಡಿದ್ದಾರೆ.

ಸೋನು ಸೂದ್​ ಅವರನ್ನು ಜನರು ಇಂದು ದೇವರು ಹಾಗೂ ರಿಯಲ್​ ಲೈಫ್​ ಹೀರೋ ಎಂದೆ ಕರೆಯುತ್ತಿದ್ದಾರೆ. ಎಷ್ಟೋ ಮಂದಿ ಅವರಿಂದ ಸಹಾಯ ಪಡೆದವರು ಅವರನ್ನು ಪೂಜಿಸುತ್ತಿದ್ದಾರೆ.ಜನರ ಮನಸ್ಸಿನಲ್ಲಿ ಪೂಜ್ಯ ಸ್ಥಾನ ಪಡೆದುಕೊಂಡಿರುವ ಸೋನು ಸೂದ್​ ಅವರ ಸಿನಿ ಜರ್ನಿ ಸುಲಭವಾಗಿರಲಿಲ್ಲ.

ಆರಂಭದ ದಿನಗಳಲ್ಲಿ ಸೋನು ಸೂದ್​ ಸಹ ತುಂಬಾ ಕಷ್ಟಪಟ್ಟಿದ್ದಾರೆ.

ಸಾಕಷ್ಟು ಸಲ ತಾವು ಕಷ್ಟಪಟ್ಟ ದಿನಗಳನ್ನು ನೆನೆಪಿಕೊಂಡಿದ್ದಾರೆ.

ಇಂತಹ ನಟ ಈಗ ಹಿಂದಿ ಹಾಗೂ ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸುವ ಮೂಲಕ ಗುರುತಿಸಿಕೊಂಡಿದ್ದಾರೆ.

ಸೋನು ಸೂದ್​ ಈಗ ತಮ್ಮ ವೃತ್ತಿ ಜೀವನಲ್ಲಿ ಘಟಿಸಿದ ಕೆಲವು ಘಟನೆಯೊಂದರ ಬಗ್ಗೆ ನೆಟ್ಟಿಗರೊಂದಿಗೆ ಹಂಚಿಕೊಂಡಿದ್ದಾರೆ.

ಸಿನಿಮಾ ಅವಕಾಶಕ್ಕಾಗಿ ಅಲೆದಾಡಿದ್ದ ಸೋನು ಸೂದ್​ ನಿಯತಕಾಲಿಕೆಯೊಂದರಲ್ಲಿ ಫೋಟೋ ಹಾಕಿಸಿಕೊಳ್ಳಲು ಆಡಿಷನ್ ಕೊಟ್ಟಿದ್ದರಂತೆ.

ಆದರೆ ಆಗ ಆ ನಿಯತಕಾಲಿಕೆ ಸೋನು ಸೂದ್ ಅವರನ್ನು ರಿಜೆಕ್ಟ್​ ಮಾಡಿತ್ತಂತೆ.ಈಗ ಅದೇ ನಿಯತಕಾಲಿಕೆಯ ಮುಖಪುಟದಲ್ಲಿ ಸೋನು ಸೂದ್​ ಅವರ ಫೋಟೋ ಪ್ರಕಟವಾಗಿದೆ. ಅಷ್ಟಕ್ಕೂ ಯಾವುದು ಆ ನಿಯತಕಾಲಿಕೆ ಅಂತೀರಾ..?

ಸ್ಟಾರ್​ಡಸ್ಟ್​ನ ಏಪ್ರಿಲ್​ ಸಂಚಿಕೆಯ ಮುಖಪುಟದಲ್ಲಿ ಸೋನು ಸೂದ್​ ಅವರ ಫೋಟೋವನ್ನು ಪ್ರಕಟಿಸಲಾಗಿದೆ. ನಿಯತಕಾಲಿಕೆಯ ಮುಖಪುಟ ಹಂಚಿಕೊಂಡಿರುವ ಸೋನು ಸೂದ್​ ಆ ಹಳೇ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

Share
WhatsApp
Follow by Email