ಲಾಕ್ ಡೌನ್ ನಿಯಮ ಉಲ್ಲಂಘಸಿ ಅದ್ದೂರಿ ಮದುವೆ ಕಾರ್ಯಕ್ರಮ, ಗ್ರಾಮ ಪಂಚಾಯತ್ ಯಿಂದ ಕುಟುಂಬಸ್ಥರಿಗೆ 20 ಸಾವಿರ ದಂಡ


ಕರೋನಾ ಮಹಾಮಾರಿ ನಿರ್ಮೂಲನೆ ಮಾಡಲು ಸರಕಾರ ನಾನಾ ರೀತಿಯ ಕಸರತ್ತು ಮಾಡಿ ಲಾಕ ಡೌನ ಮಾಡಿದೆ . ಆದರೆ ಗೋಕಾಕ ತಾಲೂಕಿನ ನಲ್ಲಾನಟ್ಟಿ ಗ್ರಾಮದ ಪ್ರಮುಖ ವ್ಯಕ್ತಿಯೊಬ್ಬ ಮಗನ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಿ ಉದ್ಧಟತನ ಮೆರೆದಿದ್ದಾನೆ, ನಿನ್ನೆಯ ಭಾನುವಾರ ದಿನ ಮದುವೆ ನಡೆಸಿರುವ ಕುಟುಂಬ ಸರ್ಕಾರಿ ನಿಯಮ ಉಲ್ಲಂಘಸಿ 20 ಸಾವಿರ ದಂಡ ಕೂಡ ತೆತ್ತಿದ್ದಾರೆ.

ಹೌದು ಗೋಕಾಕ ತಾಲ್ಲೂಕಿನ ನಲ್ಲಾನಟ್ಟಿ ಗ್ರಾಮದ ದಶರಥ ಬಸವಂತ ಪಾಟೀಲ್ ಎನ್ನುವ ಯುವಕನ ಮದುವೆ ಕಾರ್ಯಕ್ರಮ ಗ್ರಾಮದಲ್ಲಿ ಈಗ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ, ಕೇಂದ್ರ ಸರ್ಕಾರದ ಪೋಸ್ಟಲ್ ಇಲಾಖೆಯಲ್ಲಿ ಕೆಲಸನಿರ್ವಹಿಸುತ್ತಿರುವ ವ್ಯಕ್ತಿಯ ಮದುವೆ covid ನಿಯಮ ಉಲ್ಲಂಘನೆ ಮಾಡಿದಾರೆ.

ಲಾಕ್ ಡೌನ್ ನಲ್ಲಿ ಗ್ರಾಮ ದಲ್ಲಿ ಯಾವುದೇ ಅಂಗಡಿ ಮುಗ್ಗಂಟಿಗೆ ಪೊಲೀಸರು ಅವಕಾಶ ನೀಡಿಲ್ಲಾ, ಅಲ್ಲದೆ ಗ್ರಾಮದ ಹತ್ತಾರು ವಾಹನಗಳನ್ನು ಕೂಡ ಈ ಹಿಂದೆ ವಶ ಪಡೆದುಕೊಂಡಿದ್ದರು, ಆದ್ರೆ ಮದುವೆ ಸಂದರ್ಭದಲ್ಲಿ ಘಟಪ್ರಭಾ ಪೊಲೀಸ್ ಸಿಬ್ಬಂದಿ ಗ್ರಾಮಕ್ಕೆ ಬಂದರು ಕೂಡ ಯಾವುದೇ ಕಠಿಣ ಕ್ರಮ ಕೈಗೊಳ್ಳದೇ ವಾಪಸ್ಸಾಗಿದ್ದಾರೆ, ಪೊಲೀಸರ ವಾಪಸ್ಸಾತಿ ನಂತರ ಪಾಟೀಲ್ ಕುಟುಂಬ ಸಾವಿರಾರು ಜನರನ್ನ ಮದುವೆಗೆ ಸೇರಿಸಿದ್ದಾರೆ.

ಇನ್ನು ಸ್ಥಳಕ್ಕೆ ಬಂದಿದ್ದ ಗ್ರಾಮ ಪಂಚಾಯತ್ ಪಿಡಿಓ ಹಾಗೂ ತಲಾಠಿ ಸೇರಿ ಪಾಟೀಲ್ ಕುಟುಂಬಕ್ಕೆ 20 ಸಾವಿರ ದಂಡ ಹಾಕಿದ್ದಾರೆ, ದಂಡ ತೆತ್ತ ಮೇಲೆ ಮತ್ತೆ ಮದುವೆಗೆ ಜನ ಸೇರಿಸಬಾರದು ಎನ್ನುವ ಯೋಚನೆ ಪಾಟೀಲ್ ಕುಟುಂಬಕ್ಕೆ ಇತ್ತು ಏನೋ, ಸಿಬ್ಬಂದಿ ಸಮ್ಮುಖದಲ್ಲೇ ಸಾವಿರಾರು ಜನರನ್ನು ಸೇರಿಸಿ ಮದುವೆ ಮಾಡಿಸಿದ್ದಾರೆ,ಇನ್ನು ವಿಷಯ ಗೊತ್ತಿದ್ದರೂ ಜಾಣ ಕುರುಡತನ ತೋರಿರುವ ಘಟಪ್ರಭಾ ಪೊಲೀಸರ ನಡೆ ಕೂಡ ಅಚ್ಚರಿ ಮೂಡಿಸಿದೆ.

Share
WhatsApp
Follow by Email