ಮೈಸೂರು,ಜೂ.4:- ಮೈಸೂರು ಮಹಾನಗರ ಪಾಲಿಕೆ ಆಯಕ್ತರಾದ ಶಿಲ್ಪ ನಾಗ್ ಅವರ ಮೈಸೂರು ಕಾರ್ಪೋರೇಟರ್‌ಗಳು, ಪಾಲಿಕೆ ಸಿಬ್ಬಂದಿ, ಪೌರಕಾರ್ಮಿಕರು ನಿಂತಿದ್ದು, ಅವರ ಪರವಾಗಿ ಅಭಿಯಾನ ಆರಂಭಿಸಿ, ಪ್ರತಿಭಟನೆ ನಡೆಸಿದರು.
ಶಿಲ್ಪನಾಗ್ ಅವರನ್ನು ಬೆಂಬಲಿಸಿ ಪಾಲಿಕೆ ಎದುರು ಪ್ರತಿಭಟನೆ ನಡೆಸಿದ್ದು, ಐ ಸ್ಟ್ಯಾಂಡ್ ವಿತ್ ಅವರ್ ಕಮಿಷನರ್ ಎಂಬ ಬ್ಯಾನರ್ ಹಿಡಿದು ತೊಲಗಲಿ ತೊಲಗಲಿ ಜಿಲ್ಲಾಧಿಕಾರಿಗಳು ತೊಲಗಲಿ, ಉಳಿಸಿ ಉಳಿಸಿ ಮೈಸೂರು ಉಳಿಸಿ ಎಂದು ಘೋಷಣೆ ಕೂಗಿದರು.