ಟಿಪ್ಪು ಎಕ್ಸ್‌ಪ್ರೆಸ್‌ ಇನ್ನು ಮುಂದೆ ‘ಒಡೆಯರ್‌’ ಎಕ್ಸ್‌ಪ್ರೆಸ್ !

ಟಿಪ್ಪು ಎಕ್ಸ್‌ಪ್ರೆಸ್‌ ಇನ್ನು ಮುಂದೆ ‘ಒಡೆಯರ್‌’ ಎಕ್ಸ್‌ಪ್ರೆಸ್ !

ಮೈಸೂರು: ಮೈಸೂರು– ಬೆಂಗಳೂರು ನಡುವೆ ಸಂಚರಿಸುತ್ತಿರುವ ‘ಟಿಪ್ಪು ಎಕ್ಸ್‌ಪ್ರೆಸ್‌’ ಎಂದಿರುವ ರೈಲಿನ ಹೆಸರನ್ನು ‘ಒಡೆಯರ್ ಎಕ್ಸ್‌ಪ್ರೆಸ್‌’ ಎಂದು ಬದಲಾಯಿಸಿ ಕೇಂದ್ರ ರೈಲ್ವೆ ಮಂಡಳಿ ಶುಕ್ರವಾರ ಆದೇಶ ಹೊರಡಿಸಿದೆ.

ಸಾಂದರ್ಭಿಕ ಚಿತ್ರ

ಮೈಸೂರು– ತಾಳಗುಪ್ಪ ಎಕ್ಸ್‌ಪ್ರೆಸ್‌ ರೈಲಿಗೆ ‘ಕುವೆಂಪು ಎಕ್ಸ್‌ಪ್ರೆಸ್‌’ ಎಂದು ನಾಮಕರಣ ಮಾಡಿರುವುದಾಗಿ ಮಂಡಳಿಯ ಉಪನಿರ್ದೇಶಕ ರಾಜೇಶ್‌ ಕುಮಾರ್‌ ನೈರುತ್ಯ ರೈಲ್ವೆ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದಾರೆ. ರೈಲ್ವೆ ಸಚಿವಾಲಯ ಆದೇಶ ಪ್ರತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಸಂಸದ ಪ್ರತಾಪಸಿಂಹ, ‘ಇನ್ನು ಮುಂದೆ ‘ಟಿಪ್ಪು ಎಕ್ಸ್‌ಪ್ರೆಸ್’ ಬದಲು ‘ಒಡೆಯರ್ ಎಕ್ಸ್‌ಪ್ರೆಸ್’ ನಿಮಗೆ ಸೇವೆ ಒದಗಿಸಲಿದೆ.

ಇದನ್ನೂ ಓದಿ : Bigg Boss 9: ಈ 9 ಮಂದಿ ಮೇಲಿದೆ ಈ ವಾರದ ಎಲಿಮಿನೇಶನ್ !

ಜತೆಗೆ, ‘ಮೈಸೂರು-ತಾಳಗುಪ್ಪ’ ಬದಲು ‘ಕುವೆಂಪು ಎಕ್ಸ್‌ಪ್ರೆಸ್’ ಆಗಿ ಬದಲಾಗಲಿದೆ. ಇದಕ್ಕೆ ಕಾರಣರಾದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌, ಸಚಿವ ಪ್ರಲ್ಹಾದ ಜೋಶಿ ಹಾಗೂ ಕುವೆಂಪು ಹೆಸರು ಸೂಚಿಸಿದ ಡಿ.ಪಿ.ಸತೀಶ್‌ ಅವರಿಗೆ ಧನ್ಯವಾದ’ ಬರೆದುಕೊಂಡಿದ್ದಾರೆ.

Share
WhatsApp
Follow by Email