ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಅಪ್ರೆಂಟಿಸ್ ಕಾಯ್ದೆ 1961 ರ ಪ್ರಕಾರ ವೃತ್ತಿ ಶಿಶಿಕ್ಷು ತರಬೇತುದಾರರನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಐಟಿಐ ಪಾಸಾಗಿದ್ದಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ
ನೇಮಕಾತಿ ಪ್ರಾಧಿಕಾರ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ
ಹುದ್ದೆಗಳ ಹೆಸರು : ಶಿಶಿಕ್ಷು ತರಬೇತಿದಾರರು
ಹುದ್ದೆಗಳ ಸಂಖ್ಯೆ : 259
ವಿದ್ಯಾರ್ಹತೆ : ಐಟಿಐ ಪಾಸ್ (ಆಟೋ ಇಲೆಕ್ಟ್ರೀಷಿಯನ್, ವೆಲ್ಡರ್, ಎಸ್‌ಎಮ್ ಡಬ್ಲ್ಯೂ, ಪೇಂಟರ್, ಆಟೋ ಎಲೆಕ್ಟ್ರೀಷಿಯನ್, ಡೀಸಲ್ ಮೆಕ್ಯಾನಿಕ್, ಮೆಕ್ಯಾನಿಕಲ್ ಮೋಟರ್ ವೆಹಿಕಲ್ )
ದಿನಾಂಕ 23-03-2023 ರಂದು ಬೆಳಿಗ್ಗೆ 09-00 ಗಂಟೆಯಿಂದ ಮಧ್ಯಾಹ್ನ 03-00 ಗಂಟೆಯೊಳಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು.
ಸಂದರ್ಶನವನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿವಿಧ ವಿಭಾಗೀಯ ಕಛೇರಿಗಳಲ್ಲಿ ನಡೆಸಲಾಗುತ್ತದೆ. ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಬಳ್ಳಾರಿ, ಕೊಪ್ಪಳ, ಹೊಸಪೇಟೆ, ವಿಜಯಪುರ, ಪ್ರಾದೇಶಿಕ ಕಾರ್ಯಾಗಾರ ಯಾದಗಿರಿ, ಇಲ್ಲಿ ನಡೆಸಲಾಗುತ್ತದೆ.
ಶಿಶಿಕ್ಷು ನೇಮಕಾತಿ ಬಯಸುವ ಅಭ್ಯರ್ಥಿಗಳು ಮೂಲ ದಾಖಲೆ ಹಾಗೂ ಇತರೆ ದಾಖಲೆಗಳೊಂದಿಗೆ ಸಂಬಂಧಪಟ್ಟ ವಿಭಾಗೀಯ ಕಛೇರಿಗಳಲ್ಲಿ ನಿಗಧಿತ ಸಮಯದಲ್ಲಿ ನೇರ ಸಂದರ್ಶನಕ್ಕಾಗಿ ಹಾಜರಾಗುವುದು.
ಹೆಚ್ಚಿನ ವಿವರಗಳಿಗಾಗಿ www.kkrtc.karnataka.gov.in ಗೆ ಭೇಟಿ ನೀಡಿರಿ.
ಆಯ್ಕೆ ವಿಧಾನ : ಸಂದರ್ಶನ / ಮೂಲ ದಾಖಲೆಗಳ ಪರಿಶೀಲನೆ
ಸಂದರ್ಶನಕ್ಕೆ ಹಾಜರುಪಡಿಸಬೇಕಾದ ಮೂಲ ದಾಖಲೆಗಳ ಲಿಸ್ಟ್
– ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
– ಜಾತಿ ಪ್ರಮಾಣ ಪತ್ರ
– ಆಧಾರ್ ಕಾರ್ಡ್
– ಐಟಿಐ ಪಾಸ್ ಸರ್ಟಿಫಿಕೇಟ್
– ಇತರೆ.