ಅನಾಥ ಆಶ್ರಮದಲ್ಲಿ ನಟ ಅಭಿಷೇಕ್ ಸಿಕೆ ಹುಟ್ಟು ಹಬ್ಬ ಆಚರಣೆ

ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್ ವತಿಯಿಂದ ಬೆಂಗಳೂರಿನ ಅನಾಥಾಶ್ರಮದಲ್ಲಿ ಚಲನಚಿತ್ರ ನಟ ಅಭಿಷೇಕ್ ಸಿಕೆ ಅವರ ಹುಟ್ಟು ಹಬ್ಬವನ್ನು ಮಕ್ಕಳಿಗೆ ಹಣ್ಣು ಹಂಪಲು ಮತ್ತು ನೋಟಬುಕ್ ಪೆನ್ ನೀಡುವ ಮುಕಾಂತರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಯುವಶಕ್ತಿ ಸೆವಾ ಟ್ರಸ್ಟ್ ನ ರಾಜ್ಯಾಧ್ಯಕ್ಷ ಸಂತೋಷ್ ಅಂಗಡಿ ಮಾತನಾಡಿ ನನ್ನ ಆತ್ಮೀಯ ಸಹೋದರ ನವ ಯುವ ಪ್ರತಿಭೆ ನಾಯಕ ನಟ ಸಿನಿಮಾ ರಂಗದ ಮೇಲೆ ಅಪಾರ ಗೌರವ ಮತ್ತು ನಿರೀಕ್ಷೆಗಳು ಇಟ್ಟುಕೊಂಡು ಬಂದಿದ್ದಾರೆ. ಅವರು ನಟನೆ ಜೊತೆ ಉತ್ತಮ ಸಮಾಜದ ಚಿಂತಕ ನಿರ್ಗತಿಕರ ಪರ ಚಿಂತಿಸುವ ವ್ಯಕ್ತಿ ಎನ್ನುವ ಅವರು ಆಶ್ರಮದ ಮಕ್ಕಳ ಜೊತೆ ಹುಟ್ಟು ಹಬ್ಬ ಆಚರಸಿಕೊಳ್ಳುತ್ತಿರುವುದೇ ಸಾಕ್ಷಿ , ಅವರಿಗೆ ದೇವರು ಹಾಗೆ ರಾಜ್ಯದ ಜನತೆ ಉತ್ತಮ ಬೆಂಬಲ ಪ್ರೀತಿ ನೀಡಿ ಇನ್ನು ಎತ್ತರಕ್ಕೆ ಬೆಳೆಯಬೇಕೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಾಯಕ ನಟ ಅಭಿಷೇಕ್ ಸಿಕೆ , ಅವರ ಪತ್ನಿ ಪೂಜಾ ಅಭಿಷೇಕ್ , ಹಾಗು ಇತರರು ಇದ್ದರು.

Share
WhatsApp
Follow by Email