ಗ್ರಾಮ ಸಭೆ ನಡೆಯುವ ಬಗ್ಗೆ ಸದಸ್ಯರಿಗೆ ತಿಳಿಸದೆ ಕೇವಲ ಇಬ್ಬರ ಸದಸ್ಯರ ಕರೆದು ಸಭೆ ಮಾಡಿದ್ದಾರೆ ಎಂದು ಪಿಡಿಒ ವಿರುದ್ಧ ಸದಸ್ಯರು ಆರೋಪ.. !

ಅರಟಾಳ ; ಗ್ರಾಮ ಪಂಚಾಯತಿಯು ಗ್ರಾಮ ಸಭೆಯನ್ನು ನಡೆಸಬೇಕಾದರೆ ಸದಸ್ಯರಿಗೆ ತಿಳಿಸಬೇಕು. ಆದರೆ ಅಥಣಿ ತಾಲೂಕಿನ ಅರಟಾಳ ಗ್ರಾಮ ಪಂಚಾಯತಿ ಪಿಡಿಓ ಮಹಿಳಾ ಗ್ರಾಮ ಸಭೆಯನ್ನು ಅಧ್ಯಕ್ಷ/ಉಪಾಧ್ಯಕ್ಷರು ಹಾಗೂ ಕೇವಲ ಇಬ್ಬರು ಸದಸ್ಯರಿಗೆ ತಿಳಿಸಿ ಉಳಿದ ೨೦ ಜನ ಸದಸ್ಯರಿಗೆ ಗೋತ್ತಿಲ್ಲದಂತೆ ಸಭೆಯನ್ನು ನಡೆಸಿದ್ದಾರೆ ಎಂದು ಗ್ರಾಪಂ ಸದಸ್ಯರು ಆರೋಪಿಸಿದ್ದಾರೆ.
ಅಥಣಿ ತಾಲೂಕಿನ ಅರಟಾಳ ಗ್ರಾಮ ಪಂಚಾಯತಿಯು ಸುಮಾರು ಮೂರು ಗ್ರಾಮಗಳನ್ನು ಒಳಗೊಂಡ ಗ್ರಾಮ ಪಂಚಾಯತಿ. ಮೂರು ಗ್ರಾಮದ ಒಟ್ಟು ಜನಸಂಖ್ಯೆ ೧೦೦೦೦ ದಾಟ್ಟುತ್ತದೆ. ಒಟ್ಟು ೨೪ ಸದಸ್ಯರ ಬಲ ಹೊಂದಿರುವ ಗ್ರಾಮ ಪಂಚಾಯತಿಯಲ್ಲಿ ಕೆಲವು ಸದಸ್ಯರಿಗೆ ಗೋತ್ತಿಲ್ಲದೆ ಮಹಿಳಾ ಗ್ರಾಮಸಭೆ ನಡೆದಿದೆ ಎನ್ನುತ್ತಾರೆ ಸದಸ್ಯರು.
ಮಾರ್ಚ ೭ ರಂದು ಮಹಿಳಾ ದಿನಾಚರಣೆಯಂದು ಮಹಿಳಾ ಗ್ರಾಮಸಭೆಯನ್ನು ಹಾಲಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನಡೆದಿದೆ. ಆದರೆ ಸಭೆಗೆ ಅಧ್ಯಕ್ಷರು, ಉಪಾಧ್ಯಕ್ಷರು ಕೆಲವು ಸದಸ್ಯರು ಮಾತ್ರ ಹಾಜರಿದು. ಅರಟಾಳ, ಬಾಡಗಿ ಗ್ರಾಮದ ಸದಸ್ಯರಿಗೆ ಮಹಿಳಾ ಗ್ರಾಮ ಸಭೆಯ ಮಾಹಿತಿ ಗೋತ್ತಿಲ್ಲ.
ಗ್ರಾಮ ಸಭೆಯ ನಡೆಸಬೇಕಾದರೆ ಅಧ್ಯಕ್ಷರ ಅಪ್ಪಣೆ ಮೇರೆಗೆ ೭ ದಿನಗಳ ಮುಂಚೆ ನೋಟಿಸ್ ತಗೆದು ಸದಸ್ಯರಿಗೆ ತಿಳಿಸಬೇಕು.
ವಿಶೇಷ ಗ್ರಾಮ ಸಭೆಯಾದರೆ ದೂರವಾಣಿ ಮೂಲಕ ಸದಸ್ಯರಿಗೆ ತಿಳಿಸಬೇಕು ಇದು ಸರ್ಕಾರದ ನೇಯಮ. ಆದರೆ ಯಾರಿಗೂ ಗೋತ್ತಿಲ್ಲದಂತೆ ತೆರೆ ಮರೆಯಲ್ಲಿ ಗ್ರಾಮ ಸಭೆ ನಡೆಸುವುದಾದರು ಯಾಕೆ. ಅಧಿಕಾರಿಗಳು ಯಾವುದೋ ತಪ್ಪು ಮಾಡಿದ್ದಾರೆ ಎನ್ನುವ ಅನಮಾನ ಸದಸ್ಯರಲ್ಲಿದೆ.
ವರ್ಷದಲ್ಲಿ ಎರಡು ಬಾರಿ ಸಾಮಾನ್ಯ ಗ್ರಾಮ ಸಭೆ. ಒಂದು ಮಹಿಳಾ ಗ್ರಾಮಸಭೆ. ಪ್ರತಿ ತಿಂಗಳಿಗೆ ಒಂದು ಬಾರಿ ಸದಸ್ಯರ ಸಭೆ, ವಾರ್ಡ್ ಸಭೆ, ಗ್ರಾಪಂ ರಚನೆ ಮಾಡಿದ ಸಮಿತಿಗಳ ಸಭೆ ಹಾಗೂ ತುರ್ತು ಪರಿಸ್ಥಿತಿಯಲ್ಲಿ ವಿಶೇಷ ಸಭೆಗಳನ್ನು ತಗೆಯಬೇಕು ಎನ್ನುವುದು ಸರ್ಕಾರದ ಸದೇಶ. ಆದರೆ ಪಿಡಿಒ ಅವರ ಸದಸ್ಯರಿಗೆ ಗೋತ್ತಿಲ್ಲದಂತೆ ಸಭೆ ನಡೆಸಿರುವುದು ಯಾಕೆ ಎನ್ನುತ್ತಾರೆ ಸದಸ್ಯರು.
ಈಗಲ್ಲಾದರು ಸಂಬoಧಿಸಿದ ಅಧಿಕಾರಿಗಳು ಗಮನ ಹರಿಸಿ ಸರಿಯಾದ ಸಮಯಕ್ಕೆ ಸಭೆ ನಡೆಸುವ ವ್ಯವಸ್ಥೆಯಾದರೆ ಗ್ರಾಮಗಳು ಅಭಿವೃದ್ಧಿ ಹೊಂದುತ್ತವೆ.
ಬಾಕ್ಸ ನ್ಯೂಸ್ ; ಪಿಡಿಒರವರು ಸದಸ್ಯರಿಗೆ ತಿಳಿಸದೆ ಮಹಿಳಾ ಗ್ರಾಮಸಭೆ ನಡೆಸಿದ್ದಾರೆ. ಸದಸ್ಯರಿಗೆ ಗೋತ್ತಿಲದ ಸಭೆ ನಡೆಸಿರುವು ಯಾಕೆ ಎನ್ನುವುದನ್ನು ಸಂಬoಧಿಸಿದ ಅಧಿಕಾರಿಗಳು ಪರಿಶ್ಲಿಸುವ ಕೆಲಸವಾಗಬೇಕಿದೆ.
– ಮಾಳಪ್ಪ ಕಾಂಬಳೆ ಗ್ರಾಪಂ ಸದಸ್ಯ.
ಬಾಕ್ಸ ನ್ಯೂಸ್ ; ಮೇಲಾಧಿಕಾರಿಗಳು ತುರ್ತು ಮಹಿಳಾ ಗ್ರಾಮಸಭೆ ನಡೆಸಲು ತಿಳಿಸಿದರು. ಗಡಿಬಿಡಿಯಲ್ಲಿ ಸದಸ್ಯರನ್ನು ಕರೆಯಲು ಸಾಧ್ಯವಾಗಲ್ಲಿಲ್ಲ. ಇದು ಮಹಿಳಾ ಗ್ರಾಮಸಭೆ ಅಷ್ಟೆ.
-ಎ. ಜಿ. ಎಡಕೆ ಪಿಡಿಒ ಅರಟಾಳ.
ಬಾಕ್ಸ ನ್ಯೂಸ್ : ತಮ್ಮ ಮನಸ್ಸಿಗೆ ಬಂದoತೆ ಪಿಡಿಓರವರು ನಡೆದುಕೊಳ್ಳುತ್ತಿದ್ದಾರೆ. ಸದಸ್ಯರನ್ನು ಕೇಳುವ ಸೌಜನ್ಯವು ಇಲ್ಲ. ಮಹಿಳಾ ಗ್ರಾಮ ಸಭೆ ನಡೆಸಿದ್ದಾರೆ ಮಹಿಳಾ ಸದಸ್ಯರಿಗೆ ತಿಳಿಸಿಲ್ಲ. ಕೆಡಿಪಿ ಸಭೆ ಕರೆಯುತ್ತನೆಂದು ತಾವೆ ತಿಳಿಸಿದ್ದಾರೆ ಆ ಸಭೆಯು ಕರೆದಿಲ್ಲ.
– ಸುಸಿಲಾ ಜಂಬಗಿ ಗ್ರಾಪಂ

ವರದಿ : ರಾಜಕುಮಾರ ಮಡಗ್ಯಾಳ
Share
WhatsApp
Follow by Email