ಬ್ರೇಕಿಂಗ್ ನ್ಯೂಸ್ ಒಂದು ವಾರದವರೆಗೆ ಎಲ್ಲಾ ಸಂತೆ,ಜಾತ್ರೆ,ರದ್ದು 17/03/202017/03/20201 min read admin ಬೆಳಗಾವಿ- ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೊಂಕು ಹರಡದಂತೆ ತಡೆಯಲು ಜಿಲ್ಲಾಡಳಿತ ಮುಂಜಾಗೃತವಾಗಿ ಇಂದಿನಿಂದ ಒಂದು ವಾರದವರೆಗೆ ಜಿಲ್ಲೆಯ ಎಲ್ಲ ಸಂತೆ,ಮತ್ತು ಜಾತ್ರೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆದಿನನಿತ್ಯದ ಪೂಜೆ ಮತ್ತು ಇನ್ನಿತರ ಧಾರ್ಮಿಕ ಕಾರ್ಯಗಳಿಗೆ ವಿನಾಯತಿ ನೀಡಲಾಗಿದ್ದು,ಇಂದಿನಿಂದ ಒಂದು ವಾರದವರೆಗೆ ಜಿಲ್ಲೆಯಲ್ಲಿ ಸಂತೆ ,ಮತ್ರು ಜಾತ್ರೆ ನಡೆಯುವಂತಿಲ್ಲ ಎಂದು ಕಟ್ಟು ನಿಟ್ಟಿನ ಆದೇಶ ಮಾಡಲಾಗಿದೆಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೊಂಕು ಹರಡದಂತೆ ತಡೆಯಲು ದೊಡ್ಡ,ದೊಡ್ಡ ಶಾಪಿಂಗ್ ಮಾಲ್ ಮತ್ತು ಸೂಪರ್ ಮಾರ್ಕೆಟ್ ಗಳನ್ನು ಬಂದ್ ಮಾಡಲಾಗಿದ್ದು,ಸಿನೀಮಾ ಥೇಯಿಟರ್ ಗಳಿಗೆ ಬೀಗ ಜಡಿಯಲಾಗಿದೆ ಬೆಳಗಾವಿ ಜಿಲ್ಲೆಗೆ ವಿದೇಶದಿಂದ ವಾಪಸ್ ಆಗಿರುವ 40 ಕ್ಕೂ ಹೆಚ್ಚು ಜನರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದ್ದು ,ಜಿಲ್ಲೆಯಲ್ಲಿ ಯಾರೊಬ್ಬರಿಗೂ ಕೊರೋನಾ ಸೊಂಕು ತಗುಲಿರುವ ಬಗ್ಗೆ ದೃಡವಾಗಿಲ್ಲ ಹೀಗಾಗಿ ಬೆಳಗಾವಿ ಜಿಲ್ಲೆಯ ಜನ ಆತಂಕ ಪಡುವ ಅಗತ್ಯವಿಲ್ಲಪಕ್ಕದ ಗೋವಾ ರಾಜ್ಯಕ್ಕೆ ಜಗತ್ತಿನ ಜನ ಬರ್ತಾರೆ ,ಗೋವಾದಿಂದ ಬೆಳಗಾವಿಗೆ ದಿನನಿತ್ಯ ಸಾವಿರಾರು ಜನ ಓಡಾಡುತ್ತಾರೆ,ಹೀಗಾಗಿ ಬೆಳಗಾವಿ ನಗರದ ಜನ ಜಾಗೃತರಾಗಿ ,ಆರೋಗ್ಯ ಇಲಾಖೆ ಸೂಚಿಸಿರುವ ಎಲ್ಲ ಸಲಹೆಗಳನ್ನು ಪಾಲಿಸುವದು ಸೂಕ್ತಧಾರ್ಮಿಕ ಮುಡರ ಸಭೆಜಿಲ್ಲೆಯಲ್ಲಿ ಕರೋನಾ ವೈರಸ್ ಹರಡದಂತೆ ತಡೆಗಟ್ಟುವಿಕೆ ಹಾಗೂ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ವಿವಿಧ ಧಾರ್ಮಿಕ ಮುಖಂಡರ ಜತೆ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಇಂದು ಮಂಗಳವಾರ (ಮಾ.೧೭) ಸಂಜೆ ೪ ಗಂಟೆಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸಭೆ ನಡೆಸಲಿದ್ದಾರೆ. Share