ಬ್ರೇಕಿಂಗ್ ನ್ಯೂಸ್ ಕೊರೋನ ವೈರಸ್ ಕುರಿತು ನಿಪ್ಪಾಣಿ ನಗರ ಸಭೆ ಸಭಾ ಭವನದಲ್ಲಿ ಪೂರ್ವ ಸಭೆ ನಡೆಯಿತ್ತು. 17/03/202017/03/2020 admin ಚಿಕ್ಕೋಡಿ. ಕೊರೋನ ವೈರಸ್ ಬಗ್ಗೆ ಕರ್ನಾಟಕದಲ್ಲಿ ವದಂತಿಗಳ ಹರುಡುತ್ತಿದ್ದಂತೆ ಜನಜಾಗ್ರತೆ ಮುಡಿಸುವಲ್ಲಿ ಇಂದು ನಗರ ಸಭೆಯ ಚಿಪ್ ಆಪಿಸರ್ ಮಾಹಾವಿರ ಬೋರಣವರ ಮತ್ತು ತಾಲೂಕು ದಂಡಾಧಿಕಾರಿಗಳಾದ ಪ್ರಕಾಶ ಗಾಯಕವಾಡ ಹಾಗೂ ಡಾ ವಿ ವ್ಹಿ ಸಿಂದೆ, ಇವರ ನೇತೃತ್ವದಲ್ಲಿ ಇಂದು ವಿವಿಧ ತಾಲೂಕು ಅಧಿಕಾರಿಗಳು ಸಹಯೋಗದಲ್ಲಿ ಸಭೆ ನಡೆಯಿತ್ತು. ಜಿಲ್ಲಾ ಆರೋಗ್ಯ ಮತ್ತು ತಾಲೂಕು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಯಿಂದ ಕರೋನ ವೈರಸ್ ಬಾರದಂತೆ ಮುಂಜಾಗ್ರತೆ ಕ್ರಮಕೈಗೋಳ್ಳುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು, ಕರೋನ ವೈರಸ್ ಕಾಣಿಸಿಕೊಳ್ಳುವ ಲಕ್ಷಣಗಳು ಕೆಮ್ಮು, ನೆಗಡಿ, ಜ್ವರ, ಗಂಟಲು ನೋವು, ಮಂಡೆ ನೋವು, ವಾಂತಿ ಭೇದಿ, ಹೀಗೆ ಹಲವಾರು ಲಕ್ಷಣಗಳು ಕಂಡು ಬಂದರೆ ಕರೋನ ವೈರಸ್ ತಗಲುತ್ತಿದೆ ಎಂಬ ಶಂಕೆ ಕಾಣಿಸಿಕೊಳ್ಳುವ ಸಾದ್ಯತೆ ಇರುತ್ತದೆ, ಇಂತಹ ಕಾಯಿಲೆ ಕಂಡು ಬಂದರೆ ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ಬಂದ ಚಿಕಿತ್ಸೆ ಪಡೆದುಕೊಳ್ಳಿ ಇದನ್ನು ನಿರ್ಲಕ್ಷ್ಯ ಮಾಡಬೇಡಿ ಎಂದು ವೈಧ್ಯಾಧಿಕಾರಿಗಳು ತಿಳಿಸಿದರು, ನಮ್ಮ ನಿಪ್ಪಾಣಿ ಭಾಗಕ್ಕೆ ಯಾವುದೇ ರೀತಿ ಇಂತಹ ಪ್ರಕರಣ ಬೆಳಕಿಗೆ ಬಂದಿಲ್ಲ ಬಾರದಂತೆ ನಾವು ನಿಗಾವಹಿಸಬೇಕು, ಕರೋನ ವೈರಸ್ ಮೂಲತ ಹುಟ್ಟಿಕೊಂಡಿದ್ದು ತಂಗಲು ಬಾವಲಿ ಹಾಗೂ ವಿಷಕಾರಿ ಹಾವಿನಿಂದ ಹುಟ್ಟಿಕೊಂಡಿದೆ ಇದು ನಮ್ಮ ವೈದ್ಯಕೀಯ ಕ್ಷೇತ್ರದಲ್ಲಿ ಕಂಡುಹಿಡಿದ ಮಾಹಿತಿ ಅಷ್ಟೇ , ಈ ವೈರಸ್ ಹುಟ್ಟು ಕೊಂಡಿದ್ದು ಮೊದಲಬಾರಿಗೆ ಚೈನಾ ದೇಶದಲ್ಲಿ ಇಂತಹ ವೈರಸ್ ಅಟ್ಯಾಕ್ ಆಗಿದ್ದು ಇದೊಂದು ಡೇಡ್ಲಿ ವೈರಸ್ ಅಂತಾನೊ ಹೇಳಬಹುದು ಈ ವೈರಸ್ ನಮ್ಮ ದೇಶಕ್ಕೆ ಬಾರದಂತೆ ಮುನ್ನೆಚ್ಚರಿಕೆ ವಹಿಸಿ ನಮ್ಮ ಜನರು ಅತಿ ಹೆಚ್ಚು ಗಮನ ಹರಿಸಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳಬೇಕಾಗಿದೆ, ಸಿನುವಾಗ ಅಥವಾ ಕೆಮ್ಮುವಾಗ ಕೈ ವಸ್ತ್ರ ಉಪಯೋಗಿಸಬೇಕು,ತರಕಾರಿಗಳನ್ನು ತೊಳೆದು ಸೇವಿಸಬೇಕು, ಮನೆ ಒಳಗೆ ಹಾಗೂ ಹೊರಗಿನ ಸುತ್ತಮುತ್ತಲಿನ ವಾತಾವರ್ಣ ಸ್ವಚಗೋಳಿಸಬೇಕು, ಇವೆಲ್ಲವೂ ನಮ್ಮ ಸಂರಕ್ಷಣೆ ಗಾಗಿ ನಾವು ಮುಂಜಾಗ್ರತಾ ಕ್ರಮಕೈಗೋಳಬೇಕಾಗಿದೆ ಎಂದು ಚಿಕ್ಕೋಡಿ ತಾಲೂಕಿನ ವೈದ್ಯಧಿಕಾರಿಗಳು ವಿ ವ್ಹಿ ಶಿಂದೆ ಹೇಳಿದರು. ಇನ್ನೂ ಸಭೆ ಯಲ್ಲಿ ಕಂದಾಯ ಇಲಾಖೆ,ಪುರಸಭೆ, ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ,ಆಯ್ ಎಮ್ ಎ ,ಕೆಎಸ್ ಆರ್ ಟಿ ಸಿ, ಹೀಗೆ ವಿವಿಧ ಸಂಘ,ಮತ್ತು ಸಂಸ್ಥೆ,ಔಷಧ ವ್ಯಾಪಾರಸ್ಥರು, ಹೋಟೆಲ್ ಮಾಲಿಕರು, ಸಂಘ ಇವರ ಆಶ್ರಯ ದಲ್ಲಿ ಇವರಿಗೆ ಯಾವ ರೀತಿಯ ಸ್ವಚ್ಚತಾ ಕಾಯ್ದಿದುಕೊಳ್ಳಬೇಕೆಂದು ತಾಲ್ಲೂಕು ವೈದ್ಯಾಧಿಕಾರಿಗಳಾದ ಶಿಂದೇ ಅವರು ತಿಳಿಸಿದರು. ಹಳ್ಳಿಗಳಲ್ಲಿ ಜಾಗ್ರತೆ ಮುಡಿಸುವುದು ಸಭೆ ಕರೆದು ಜನರಲ್ಲಿ ವೈರಸ್ ಬಗ್ಗೆ ತೀಳಿ ಹೇಳಿ ವದಂತಿಗಳಿಗೆ ತಲೆ ಕೊಡದೇ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿ ಎಂದರು. Share