ಬ್ರೇಕಿಂಗ್ ನ್ಯೂಸ್ ಗೆಳೆಯರ ಬಳಗದಿಂದ ಆಯೋಜಿಸಿದ ಪಾಟೀಲ್ ಪುಟ್ಟಪ್ಪ ಶೃದ್ದಾಂಜಲಿ 18/03/202018/03/20201 min read admin ಮೂಡಲಗಿ: ಕನ್ನಡದ ಬಗ್ಗೆ ಯಾರೆ ಹಗುರವಾಗಿ ಮಾತನಾಡಿದರೆ ಸ್ಥಳದಲ್ಲಯೇ ಪ್ರತುತ್ತರ ನೀಡುವ ಧೈರ್ಯ ಮತ್ತು ಕನ್ನಡ ಹುಚ್ಚು ಪ್ರೇಮ ಬೆಳೆಸಿಕೊಂಡು ಮಹಾರಾಷ್ಟ್ರ ದಿಂದ ಕನ್ನಡ ನಾಯಿ ಎಂದು ಕರೆಸಿಕೊಂಡು ಹೆಮ್ಮೆ ಪಟ್ಟ ಮಹಾನ ವ್ಯಕ್ತಿ ಎಂದರೆ ಅದು ಪಾಟೀಲ್ ಪುಟ್ಟಪ ಒಬ್ಬರೆ ಎಂದು ಮಕ್ಕಳ ಸಾಹಿತಿ ಪ್ರೋ ಸಂಗಮೇಶ ಗುಜಗೊಂಡ ಹೇಳಿದರು ಅವರು ಮಂಗಳವಾರ ಸಂಗಪ್ಪಣ್ಣ ವೃತ್ತದಲ್ಲಿ ೮೭-೮೮ ಸಾಲಿನ ವಿಧ್ಯಾರ್ಥಿಗಳ ಗೆಳೆಯರ ಬಳಗದಿಂದ ಆಯೋಜಿಸಿದ ಪಾಟೀಲ್ ಪುಟ್ಟಪ್ಪ ಶೃದ್ದಾಂಜಲಿ ಸಭೆಯಲ್ಲಿ ಮಾತನಾಡಿದರು ಕರ್ನಾಟಕ ವಿಶ್ವವಿಧ್ಯಾಲಯದಲ್ಲಿ ಪತ್ರಿಕೋಧ್ಯಮ ವಿಭಾಗ ಪ್ರಾರಂಬಿಸಲು ಮುಖ್ಯ ಕಾರಣ ಪಾಟೀಲ್ ಪುಟ್ಟಪ್ಪ, ಹುಬ್ಬಳಿಯ ಕರ್ನಾಟಕ ವೈಧ್ಯಕೀಯ ಕಾಲೇಜಿಗೆ ಹೆಸರು ಬರಲು ಕೊಡ ಕಾರಣರಾದರು, ಪಾಪು ಅವರು ರಾಜಕುಮಾರರ ಜೊತೆಗೆ ಇಡಿ ರಾಜ್ಯದ ತುಂಬ ಗೋಕಾಕ ಚಲುವಳಿಯಲ್ಲಿ ಸಂಚರಿಸಿದ್ದಾರೆ, ನಡೆದಾಡುವ ವಿಶ್ವಕೋಶ ಎಂದು ಭಾವಿಸಲಾಗುತ್ತಿತ್ತು, ರಾಜಕಾರಣಿಗಳಾಗಲಿ ಅಧಿಕಾರಿಗಳಾಗಲಿ ಜನಪ್ರತಿನಿಧಿಗಾಗಲಿ ಪಾಟೀಲ್ ಪುಟ್ಟಪ್ಪ ಅವರ ಮಾತಿಗೆ ಬಹಳ ಮಾನತ್ಯೆ ಕೊಡುತ್ತಿದ್ದರು ಕಾರಣ ಅವರ ಪ್ರಾಮಾಣಿಕತೆಯ ಪತ್ರಿಕೋಧ್ಯಮಕ್ಕೆ ಎಂದರು, ಪ್ರಂಪಚದಲ್ಲಿ ಪತ್ರಿಕೆಯಲ್ಲಿ “ಬದುಕಲಿಕ್ಕೆ ಬೇಕು ಬದುಕುವ ಈ ಮಾತು” ಸುಭಾಷಿತ ಹಾಗೂ ಸಂಪಾದಕೀಯದಲ್ಲಿ ಪ್ರಂಪಚದಲ್ಲಿ ಉಪದೇಶವನ್ನು ಕೊಡುವಷ್ಟು ಈ ಜನರು ಬೇರೆ ಎನನ್ನು ಕೊಡುವದಿಲ್ಲಾ ಎಂಬ ಮಾತು ಇಂದಿಗೂ ಪ್ರಸ್ತುತವಾಗಿದೆ ಎಂದರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಶಿಕ್ಷಣ ಸಂಯೋಜಕ ಕರಿಬಸವರಾಜು.ಟಿ. ಮಾತನಾಡಿ, ಕರ್ನಾಟಕ ರಾಜ್ಯದ ಬಾಷೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಪಾಟೀಲ್ ಪುಟ್ಟಪ್ಪನ್ನವರ ಸೇವೆ ಅವಿಸ್ಮರಣೀಯ ಹಲವಾರು ಕೃತಿಗಳನ್ನು ನೀಡಿದ ಶ್ರೇಷ್ಠ ಸಾಹಿತಿಗಳ ಸಾಲಿನಲ್ಲಿ ಪಾಪು ಕೊಡ ಒಬ್ಬರು ಅವರು ಇಲ್ಲಾ ಎಂಭ ಅಂಶವನ್ನು ಕೊಡ ಅರಗಿಸಿ ಕೊಳ್ಳಲು ಆಗುತ್ತಿಲ್ಲಾ, ಅವರ ಆದರ್ಶಗಳನ್ನು ಪಾಲಿಸುವ ಮೂಲಕ ಅವರಿಗೆ ಇನಷ್ಟು ಗೌರವ ನೀಡೋಣ ಎಂದರು, ಉಮೇಶ ಬೆಳಕೂಡ ಯಮನಪ್ಪ ಸುಲ್ತಾನಪೂರ ಮಾತನಾಡಿದರು. ಶಿವಾನಂದ ಕಂಬಾರ, ರಪೀಕ ತಾಬೊಂಳಿ, ಮಹೇಶ ಹೀರೆಮಠ, ಚನ್ನವೀರಪ್ಪ ಅಂಗಡಿ, ಸದಾಶಿವ ನಿಂಗನೂರ, ಶಿವಾನಂದ ಮುಧೋಳ, ಮಲ್ಲು ಬೋಳನವರ, ರಾಜು ಬಡಿಗೇರ, ಸಂತೋಷ ಆನಿಕಿಂಡಿ ಬಸವರಾಜ ಪಾಟೀಲ್, ಸಂತ್ರಾಮ ನಾಶಿ, ರಾಘು ಜೋಷಿ, ಬಿಎಸ್‌ಎನ್‌ಎಲ್ ಅಧಿಕಾರಿ ಬಸವರಾಜ ಕಬ್ಬೂರ, ಕೇದಾರಿ ಬಸ್ಮೇ ಸೇರಿದಂತೆ ಪಾಟೀಲ್ ಪುಟ್ಟಪ್ಪ ಅಭಿಮಾನಿಗಳು ಉಪಸ್ಥಿತರಿದ್ದರು Share