ಬ್ರೇಕಿಂಗ್ ನ್ಯೂಸ್ ಚಿಕ್ಕೋಡಿ: ಸಾರ್ವಜನಿಕರು ಸುಳ್ಳು ವದಂತಿಗೆ ಕಿವಿಗೊಡಬಾರದು : ಶಿಂಧೆ 24/03/202024/03/2020 admin ಚಿಕ್ಕೋಡಿ : ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಯಾವುದೇ ವ್ಯಕ್ತಿಗೆ ಕೊರೊನಾ ಸೋಂಕು ಕಂಡು ಬಂದಿಲ್ಲ. ಸಾರ್ವಜನಿಕರು ಸುಳ್ಳುವದಂತಿಗಳಿಗೆ ಕಿವಿಗೊಡಬಾರದು ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ. ವಿ.ವಿ.ಶಿಂಧೆ ಸ್ಪಷ್ಟ ಪಡಿಸಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಗೆ ಕೊರೊನಾ ಸೋಂಕಿತ ರೋಗಿ ಬಂದರೆ ಯಾವ ರೀತಿಯಾಗಿ ಚಿಕಿತ್ಸೆ ನೀಡಬೇಕು ಎಂಬುದರ ಕುರಿತಾಗಿ ಮಂಗಳವಾರ ಅಣಕು ಪ್ರದರ್ಶನ ಮಾಡುವ ಮುಖಾಂತರ ವೈದ್ಯರಲ್ಲಿ ಮುಂಜಾಗೃತ ಕ್ರಮ ಕೈಗೊಂಡು ಸಿದ್ದರಿರುವಂತೆ ತಿಳಿಸಲಾಯಿತು. ಆದರೆ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ರೋಗಿ ಬಂದರೆ ಯಾವ ರೀತಿ ಉಪಚಾರ ನೀಡಬೇಕು ಎಂಬುದರ ಬಗ್ಗೆ ನಡೆಸಿದ ಅಣಕು ಪ್ರದರ್ಶನ ವಿಡಿಯೋ ಯಾರೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಸಾರ್ವಜನಿಕರು ಇಂತಹ ಸುಳ್ಳುವದಂತಿಗಳಿಗೆ ಕಿವಿಕೊಟ್ಟು ಭಯ ಪಡುವ ಅಗತ್ಯವಿಲ್ಲ. ಸಾರ್ವಜನಿಕರು ಈ ಕುರಿತು ಎಚ್ಚರಿಕೆ ವಹಿಸಬೇಕು. ಸಾರ್ವಜನಿಕರು ಯಾರೂ ಮನೆಯಿಂದ ಅನಾವಶ್ಯಕವಾಗಿ ಹೊರಗೆ ಬಾರದೇ ಸರ್ಕಾರದ ನಿಯಮ ಪಾಲನೆ ಮಾಡುವ ಮುಖಾಂತರ ಕೊರೊನಾ ಎಂಬ ಮಹಾಮಾರಿ ಈ ಕಡೆಗೆ ಬಾರದಂತೆ ಜಾಗೃತಿ ವಹಿಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. Share