ಕೊರೊನಾ ಭೀತಿ :ಅಥಣಿ ತಾಲೂಕಿನ 7 ಗ್ರಾಮಗಳಲ್ಲಿ ಸಾರ್ವಜನಿಕರಿಂದ ರಸ್ತೆಗಳು ಬಂದ್

ಅಥಣಿಃ ತಾಲೂಕಿನ ತೆಲಸಂಗ ಗ್ರಾಮದಲ್ಲಿ ಕೊರೊನಾ ಸೊಂಕಿನ ಭೀತಿಯಿಂದ ಗ್ರಾಮದ ಜನರು ರಸ್ತೆಗೆ ಅಡ್ಡಲಾಗಿ ಬಿದಿರು ಹಾಕಿ ರಸ್ತೆ ಬಂದ್ ಮಾಡಿ ಫಲಕ ಹಾಕಿದ ಘಟನೆ ಗ್ರಾಮದಲ್ಲಿ ನಡೆದಿದೆ.
      ನಮ್ಮೂರಲ್ಲಿ ನಾವು ಚೆನ್ನಾಗಿಯೇ ಇದ್ದೇವೆ. ದಯವಿಟ್ಟು ಬೇರೆ ಊರುಗಳಿಂದ ಬರಬೇಡಿ. ಇದ್ದಲ್ಲಿಯೇ ಇರಿ ಅನ್ನುವ ಸಂದೇಶದೊoದಿಗೆ, ಬೇರೆಗ್ರಾಮಗಳಿಂದ ಆಗಮಿಸುವವರಿಗೆ ತೆಲಸಂಗ ಗ್ರಾಮದಲ್ಲಿ ಪ್ರವೇಶವಿಲ್ಲ ಎಂದು ಫಲಕ ಹಾಕಿದ್ದಾರೆ.
       ಸ್ವಗ್ರಾಮದಲ್ಲಿ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಸರಕಾರದ ಆದೇಶಕ್ಕೆ ತಲೆ ಬಾಗಿ ಸುಮ್ಮನಿದ್ದೇವೆ. ಸದ್ಯಕ್ಕೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಗ್ರಾಮ ತೊರೆದು ಕೆಲಸಕ್ಕೆ ಕಂಪನಿಗಳಲ್ಲಿ ಕೆಲಸಮಾಡುವವರು ಹಾಗೂ ಪಟ್ಟಣದಲ್ಲಿ ಸರಕಾರಿ ನೌಕರಿ ಮಾಡುವವರು ರಜೆ ಸಿಕ್ಕಿದೆ ಅಂತ ಗ್ರಾಮಕ್ಕೆ ಮರಳುತ್ತಿದ್ದಾರೆ.
ಅಂತವರಲ್ಲಿ ದಯವಿಟ್ಟು ವಿನಂತಿ ಮಾಡಿಕೊಳ್ಳುತ್ತೇವೆ. ಲಾಕ್ ಡೌನ್ ಮಾಡಿದ್ದು ಸ್ವಗ್ರಾಮಗಳಿಗೆ ತೆರಳಿರಿ ಅಂತಲ್ಲ. ಜನ ಎಲ್ಲೆಲ್ಲಿ ಇದೆಯೋ ಅಲ್ಲಲ್ಲಿಯೇ ಇರಿ ಎಂದು. ಇದನ್ನು ಅರ್ಥಮಾಡಿಕೊಂಡು ಯಾರೊಬ್ಬರೂ ಇರುವ ಸ್ಥಳದಿಂದ ಹಳ್ಳಿಗಳಿಗೆ ಮರಳಬಾರದು ಎಂದು ಗ್ರಾಮಸ್ಥರು ವಿನಂತಿಸಿಕೊoಡಿದ್ದಾರೆ.
 ಗಡಿ ಭಾಗದ ಜನ ಜಾಗ್ರತಃ ತಾಲೂಕಿನ ಗಡಿಭಾಗಗಳ ಪ್ರಮುಖ ಹಳ್ಳಿಗಳು ಸಹ ಇದೆ ನಿಯಮವನ್ನು ಪಾಲಿಸುತಿವೆ. ತಾಲೂಕಿನ ಖಿಳೆಗಾಂವ ಶಿರೂರ,ಕೋಹಳ್ಳಿ, ಕೋಟ್ಟಲಗಿ, ಬಳ್ಳಿಗೇರಿ,ಪಾಂಡೆಗಾoವ, ಮುಂತಾದ ಗ್ರಾಮಗಳಲ್ಲಿ ತೆಲಸಂಗ ಗ್ರಾಮದವರ ಮಾದರಿಯಲ್ಲಿ ನಿರ್ಣಯ ಕೈಗೊಂಡು ಯಾರನ್ನು ಗ್ರಾಮದ ಒಳಗೆ ಬಿಡದಂತೆ ಎಚ್ಚರವನ್ನು ಗ್ರಾಮಸ್ಥರು ವಹಿಸಿಕೊಂಡಿದ್ದಾರೆ.




Share
WhatsApp
Follow by Email