ಪೋನ್ ಮಾಡಿದ್ರೆ ಸಾಕು ಮನೆ ಬಾಗಿಲಿಗೆ ಬರಲಿದೆ : ದಿನ ಬಳಕೆ ವಸ್ತುಗಳು

ಸಂಕೇಶ್ವರ: ಕೋವಿಡ್-19 ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಿರುವುದರಿಂದ ಜನರಿಗೆ ದೈನಂದಿನ ಅಗತ್ಯ ಸಾಮಗ್ರಿಗಳಾದ ಕಿರಾಣಿ, ತರಕಾರಿ, ಹಾಲು, ಮತ್ತಿತರ ವಸ್ತುಗಳನ್ನು ಮನೆಬಾಗಿಲಿಗೆ ಕಳಿಸುವ ವ್ಯವಸ್ಥೆಯನ್ನು ಸಂಕೇಶ್ವರ ನಗರದಲ್ಲಿ ಮಾಡಲಾಗಿದೆ ಎಂದು ಪುರಸಭೆಯ ಮುಖ್ಯಾಧಿಕಾರಿ ಜಗದೀಶ್ ಈಟಿ ತಿಳಿಸಿದ್ದಾರೆ.
ಕೊರೋನಾ ಸೋಂಕು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಂಡು ಕಿರಾಣಿ ಅಂಗಡಿಗಳಿಗೆ ಹಾಗೂ ತರಕಾರಿ ಖರೀದಿಸಲು ಅನುಕೂಲ ಕಲ್ಪಿಸಿದರು ಕೂಡ ಜನರು ಸಾಮಾಜಿಕ ಅಂತರ ನಿಯಮ ಪಾಲನೆ ಮಾಡದೇ ಬೇಕಾಬಿಟ್ಟಿಯಾಗಿ ಹೊರಗಡೆ ಬಂದು ತರಕಾರಿ, ಕಿರಾಣಿ ಸಾಮಗ್ರಿ ಖರೀದಿಗೆ ಮುಗಿ ಬೀಳುತ್ತಿರುವದರಿಂದ ಪುರಸಭೆಯವರು ಹೊಸ ತಂತ್ರ ರೂಪಿಸಿದಾರೆ.
ಕಿರಾಣಿ ಅಂಗಡಿ ಹಾಗೂ ತರಕಾರಿ ವ್ಯಾಪಾರಸ್ಥರು ಮತ್ತು ಹಾಲು ಮಾರಾಟ ಮಾಡುವವರ ಪಟ್ಟಿ ಮಾಡಿ, ಸಾರ್ವಜನಿಕರರು ಪೋನ್ ಮೂಲಕ ತಮಗೆ ಅಗತ್ಯವಿರುವ ವಸ್ತುಗಳ ಪಟ್ಟಿ ನೀಡಿದರೆ ಆಯಾ ಪ್ರದೇಶದಲ್ಲಿರುವ ಸಂಬಂಧಿಸಿದ ಅಂಗಡಿಯವರು ಗ್ರಾಹಕರ ಮನೆಬಾಗಿಲಿಗೆ ಬಂದು ಕಿರಾಣಿ ಸಾಮಗ್ರಿ, ತರಕಾರಿ, ಹಾಲು ತಲುಪಿಸುವ ವ್ಯವಸ್ಥೆಯನ್ನು ಮಾಡುತ್ತಾರೆ.
Share
WhatsApp
Follow by Email