ಹಿಂಡಲಗಾ ಕಾರಾಗೃಹದಲ್ಲಿ ಕೋವಿಡ್-೧೯ ನಿಯಂತ್ರಣ ಕುರಿತು ಜಾಗೃತಿ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಡಾ.ಮಿಸಾಳೆ ಸಲಹೆ

ಬೆಳಗಾವಿ : ಜಗತ್ತಿನಾದ್ಯಂತ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ನೂರಾರು ಜನರು ಇರುವ ಕಾರಾಗೃಹಗಳಲ್ಲೂ ಕೋವಿಡ್-19 ತಡೆಗಟ್ಟಲು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ಕಾರ್ಯದರ್ಶಿ ಡಾ.ಡಿ.ಎನ್.ಮಿಸಾಳೆ ಹೇಳಿದರು.

ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಕರೊನಾ ನಿಯಂತ್ರಣ ಕುರಿತು ಶುಕ್ರವಾರ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಮೇರಿಕ, ಭಾರತ, ಇಟಲಿ, ಚೈನಾ ಸೇರಿಂದoತೆ ಜಗತ್ತಿನ ಪ್ರಮುಖ ರಾಷ್ಟಗಳಲ್ಲಿ ಕರೊನಾ ಭೀತಿ ಮೂಡಿಸಿದೆ. ಇವತ್ತಿನವರೆಗೆ ಒಟ್ಟಾರೆ 5,32,8೦೦ ಜನರು ಸೋಂಕಿತರಾಗಿದ್ದು, 24,೦7೦ ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಭಾರತದಲ್ಲಿ 21 ದಿನಗಳ ಕಾಲ ಲಾಕ್ ಡೌನ್ ಘೋಷಿಸಿದೆ. ಕಾರಾಗೃಹಗಳಲ್ಲೂ ನೂರಾರು ಜನರು ಇರುವುದರಿಂದ ಕೋವಿಡ್-19 ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕೈಗೊಳ್ಳಬೇಕಿದೆ ಎಂದು ಡಾ.ಮಿಸಾಳೆ ಹೇಳಿದರು. ಕೋವಿಡ್ ವೈರಾಣುವಿನಿಂದ ಮನುಷ್ಯರಲ್ಲಿ ಮುಖ್ಯವಾಗಿ ಶ್ವಾಸಕೋಶ ಹಾಗೂ ಉಸಿರಾಟಕ್ಕೆ ತೊಂದರೆ ಉಂಟಾಗಿ ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ.

ಜ್ವರ, ತಲೆನೋವು, ನೆಗಡಿ ಹಾಗೂ ಉಸಿರಾಟದ ತೊಂದರೆ ಕಂಡುಬoದರೆ ತಕ್ಷಣವೇ ಕಾರಾಗೃಹದ ವೈದ್ಯರ ಬಳಿ ಪರೀಕ್ಷಿಸಿಕೊಳ್ಳಬೇಕು. ಕಾರಾಗೃಹವಾಸಿಗಳು ನೈರ್ಮಲ್ಯತೆ ಕಾಪಾಡುವುದರ ಜತೆಗೆ ಸಾಮಾಜಿ ಅಂತರವನ್ನೂ ಕಾಯ್ದುಕೊಳ್ಳಬೇಕು ಎಂದು ಡಾ.ಮಿಸಾಳೆ ಸಲಹೆ ನೀಡಿದರು. ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರಾದ ಎಲ್.ವಿ.ಶ್ರೀನಿವಾಸ್ ಅವರು ಕೂಡ ಕೋವಿಡ್-19 ಹರಡದಂತೆ ಪಾಲಿಸಬೇಕಾದ ನಿಯಮಗಳ ಬಗ್ಗೆ ತಿಳಿಸಿಕೊಟ್ಟರು.

ಹಿಂಡಲಗಾ ಕಾರಾಗೃಹದ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್, ಸಹಾಯಕ ಅಧೀಕ್ಷಕ ಬಿ.ಎಸ್.ಹೊಸಮನಿ, ಕಾರಾಗೃಹದ ವೈದ್ಯಾಧಿಕಾರಿ ಡಾ.ಯಮಕನಮರಡಿ, ಜೈಲರ್ ಗಳಾದ ಎಸ್.ಬಿ.ಪಾಟೀಲ, ವೈ.ಎಸ್.ನಾಯಕ, ಸಂಗಮೇಶ್ ಮತ್ತಿತರರು ಉಪಸ್ಥಿತರಿದ್ದರು.

ಕಾರಾಗೃಹದ ಶಿಕ್ಷಕರಾದ ಶಶಿಕಾಂತ ಯಾದಗೂಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರಾಗೃಹದಲ್ಲಿ ಇರುವ ಕೈದಿಗಳು ಕೋವಿಡ್-19 ಹರಡುವಿಕೆ ವಿಧಾನ, ಲಕ್ಷಣ ಮತ್ತು ಮುನ್ನೆಚ್ಚರಿಕೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
Share
WhatsApp
Follow by Email