ಬ್ರೇಕಿಂಗ್ ನ್ಯೂಸ್ ಕೋರೋನ ವೈರಸ್ ನಿವಾರಣೆಗಾಗಿ ಔಷಧಿ ಸಿಂಪಡಿಸಿದ ಗಡಿಗ್ರಾಮ ಕೊಟ್ಟಲಗಿ ಪಂಚಾಯಿತಿ : ಜನತೆಯ ಮೆಚ್ಚುಗೆ 29/03/202029/03/2020 admin ಅಥಣಿ ; ತಾಲೂಕಿನ ಗಡಿಗ್ರಾಮ ಕೊಟ್ಟಲಗಿಯಲ್ಲಿ ರವಿವಾರ ಗ್ರಾಮ ಪಂಚಾಯಿತಿ ವತಿಯಿಂದ ಕೋರೋನ ವೈರಸ್ ನಿವಾರಣೆಗಾಗಿ ಔಷಧಿ ಸಿಂಪಡಿಸಲಾಯಿತು. ಅಥಣಿ ತಾಲ್ಲೂಕಿನಲ್ಲಿಯೇ ಪ್ರಪ್ರಥಮವಾಗಿ ಔಷಧಿ ಸಿಂಪರಣೆ ಕೈಗೊಂಡ ಪಂಚಾಯಿತಿ ಎಂದು ಹೆಗ್ಗಳಿಕೆಗೆ ಪಾತ್ರವಾಗಿದೆ .ಏಕೆಂದರೆ ಅಥಣಿ ತಾಲೂಕಿನಲ್ಲಿ ಪ್ರಥಮ ಬಾರಿಗೆ ಗ್ರಾಮದ ಬೀದಿ ಬೀದಿಗಳಲ್ಲಿ ಔಷಧಿ ಸಿಂಪರಣೆ ಕೈಗೊಳ್ಳುವ ಮೂಲಕ ಕೋರೋಣ ವೈರಸ್ ನಿವಾರಣೆಗೆ ವಿಶೇಷ ಕ್ರಮ ಕೈಗೊಳ್ಳಲಾಗಿದೆ. ಪಂಚಾಯ್ತಿಯ ಪಿಡಿಓ ಡಾ.ಕಾಡೇಶ ಅಡಹಳ್ಳಿ ಉಪಾಧ್ಯಕ್ಷ ಗುರಪ್ಪ ಸತ್ತಿ ಅವರು ವಿಶೇಷ ಮುತುವರ್ಜಿ ವಹಿಸಿ ಔಷಧಿ ಸಿಂಪರಣೆ ಕ್ರಮ ವಹಿಸಿದ್ದರು . ದೇಶದಾದ್ಯಂತ ಹಾಗೂ ಕರ್ನಾಟಕ ರಾಜ್ಯದಲ್ಲಿ ಲಾಕ್ ಡೌನ್ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಧ್ವನಿವರ್ಧಕದ ಮೂಲಕ ವಿಶೇಷ ಜಾಗೃತಿ ಮೂಡಿಸುವುದು ಹಾಗೂ ಸ್ವಚ್ಛತೆ ಕಾಪಾಡುವುದು ಜನರಿಗೆ ಗ್ರಾಮ ಪಂಚಾಯಿತಿ ಅರವು ಮೂಡಿಸುವ ಕರಪತ್ರ ಹಂಚುವುದು ವಿಶೇಷವಾದ ಚಟುವಟಿಕೆ ಹಮ್ಮಿಕೊಳ್ಳುವುದರ ಮೂಲಕ ತಾಲೂಕಿನಲ್ಲಿಯೇ ಮಾದರಿ ಪಂಚಾಯಿತಿ ಎಂದೆನಿಸಿಕೊಂಡಿದೆ.ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗುರಪ್ಪ ಸತ್ತಿ, ಪಿಡಿಓ ಡಾ. ಕಾಡೇಶ ಅಡಹಳ್ಳಿ, ರಘುನಾಥ ದೊಡ್ಡನಿಂಗಪ್ಪಗೋಳ, ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಪಾಲ್ಗೊಂಡಿದ್ದರು.ತಾಲೂಕಿನ ಗಡಿಗ್ರಾಮ ಕೊಟ್ಟಲಗಿಯಲ್ಲಿ ರವಿವಾರ ಗ್ರಾಮ ಪಂಚಾಯಿತಿ ವತಿಯಿಂದ ಕೋರೋನ ವೈರಸ್ ನಿವಾರಣೆಗಾಗಿ ಔಷಧಿ ಸಿಂಪಡಿಸಲಾಯಿತು. ಅಥಣಿ ತಾಲ್ಲೂಕಿನಲ್ಲಿಯೇ ಪ್ರಪ್ರಥಮವಾಗಿ ಔಷಧಿ ಸಿಂಪರಣೆ ಕೈಗೊಂಡ ಪಂಚಾಯಿತಿ ಎಂದು ಹೆಗ್ಗಳಿಕೆಗೆ ಪಾತ್ರವಾಗಿದೆ .ಏಕೆಂದರೆ ಅಥಣಿ ತಾಲೂಕಿನಲ್ಲಿ ಪ್ರಥಮ ಬಾರಿಗೆ ಗ್ರಾಮದ ಬೀದಿ ಬೀದಿಗಳಲ್ಲಿ ಔಷಧಿ ಸಿಂಪರಣೆ ಕೈಗೊಳ್ಳುವ ಮೂಲಕ ಕೋರೋಣ ವೈರಸ್ ನಿವಾರಣೆಗೆ ವಿಶೇಷ ಕ್ರಮ ಕೈಗೊಳ್ಳಲಾಗಿದೆ. ಪಂಚಾಯ್ತಿಯ ಪಿಡಿಓ ಡಾ.ಕಾಡೇಶ ಅಡಹಳ್ಳಿ ಉಪಾಧ್ಯಕ್ಷ ಗುರಪ್ಪ ಸತ್ತಿ ಅವರು ವಿಶೇಷ ಮುತುವರ್ಜಿ ವಹಿಸಿ ಔಷಧಿ ಸಿಂಪರಣೆ ಕ್ರಮ ವಹಿಸಿದ್ದರು . ದೇಶದಾದ್ಯಂತ ಹಾಗೂ ಕರ್ನಾಟಕ ರಾಜ್ಯದಲ್ಲಿ ಲಾಕ್ ಡೌನ್ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಧ್ವನಿವರ್ಧಕದ ಮೂಲಕ ವಿಶೇಷ ಜಾಗೃತಿ ಮೂಡಿಸುವುದು ಹಾಗೂ ಸ್ವಚ್ಛತೆ ಕಾಪಾಡುವುದು ಜನರಿಗೆ ಗ್ರಾಮ ಪಂಚಾಯಿತಿ ಅರವು ಮೂಡಿಸುವ ಕರಪತ್ರ ಹಂಚುವುದು ವಿಶೇಷವಾದ ಚಟುವಟಿಕೆ ಹಮ್ಮಿಕೊಳ್ಳುವುದರ ಮೂಲಕ ತಾಲೂಕಿನಲ್ಲಿಯೇ ಮಾದರಿ ಪಂಚಾಯಿತಿ ಎಂದೆನಿಸಿಕೊಂಡಿದೆ.ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗುರಪ್ಪ ಸತ್ತಿ, ಪಿಡಿಓ ಡಾ. ಕಾಡೇಶ ಅಡಹಳ್ಳಿ, ರಘುನಾಥ ದೊಡ್ಡನಿಂಗಪ್ಪಗೋಳ, ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಪಾಲ್ಗೊಂಡಿದ್ದರು. Share